Advertisement

ಭಯವೇ ಧರ್ಮದ ಮೂಲ: ಹಂಸಲೇಖ

01:14 PM Sep 25, 2017 | |

ಮೈಸೂರು: ದೇಶದ ಜನತಂತ್ರ ವ್ಯವಸ್ಥೆಯ ಬಗ್ಗೆ ಅಭಿಮಾನ, ಪ್ರೀತಿ ಬೆಳೆಸಿಕೊಂಡು ಜನತಂತ್ರ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕವಿಗಳು ಎಚ್ಚರವಾಗಬೇಕು ಎಂದು ಸಂಗೀತ ನಿರ್ದೇಶಕ ಡಾ.ಹಂಸಲೇಖ ಅಭಿಪ್ರಾಯಪಟ್ಟರು. ವಿಶ್ವವಿಖ್ಯಾತ ನಾಡಹಬ್ಬ ದಸರಾ ಅಂಗವಾಗಿ ಕವಿಗೋಷ್ಠಿ ಉಪ ಸಮಿತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

Advertisement

ದಯವೇ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮ ಅದ್ಯಾವುದಯ್ಯ, ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ, ಕೂಡಲ ಸಂಗಮ ದೇವ ಎಂಬುದು ಬಸವಣ್ಣನ ವಚನವಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಇದು ಬದಲಾಗಿದ್ದು, ಭಯವೇ ಧರ್ಮದ ಮೂಲವಯ್ಯ, ಭಯವಿಲ್ಲದ ಧರ್ಮ ಯಾವುದಯ್ಯ, ಭಯವಿರಬೇಕು ಸಕಲ ಪ್ರಾಣಿಗಳಲ್ಲಿ, ಬೇಗ ನುಂಗಿಕೋ ಅಯ್ಯ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜನತಂತ್ರದ ಉಳಿವು: ದೇಶದಲ್ಲಿ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬುದು ಜನತಂತ್ರ ವ್ಯವಸ್ಥೆಯ ಆಶಯವಾಗಿದೆ. ಆದರೆ ಇಂದು ದೇಶದಲ್ಲಿ ಭಯವೇ ಧರ್ಮವಾಗಿದ್ದು, ಈ ನಿಟ್ಟಿನಲ್ಲಿ ಜನತಂತ್ರವನ್ನು ಉಳಿಸಬೇಕೆಂಬುದು ಕವಿಗೋಷ್ಠಿಯ ಆಶಯವಾಗಬೇಕಿದೆ ಎಂದರು.  ಇಂದು ಉತ್ತರ ಕೊರಿಯಾ ಮತ್ತು ಅಮೇರಿಕಾದ ನಡುವೆ ಮಾತಿನ ಯುದ್ಧ ಆರಂಭವಾಗಿದ್ದು, ಈ ಯುದ್ಧ ಮಾತಿನಲ್ಲೇ ಕೊನೆಯಾಗುವಂತೆ ಉದಯೋನ್ಮುಖ ಕವಿಗಳು ಕಾವ್ಯ ರಚನೆ ಮಾಡಬೇಕು ಎಂದು ಹೇಳಿದರು.

ಅವಗಣನೆ: ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲೂ ಕವಿಗಳು ಉತ್ತಮ ಕವಿತೆಗಳನ್ನು ರಚಿಸುತ್ತಿದ್ದಾರೆ. ಆದರೆ ಕವಿತೆಗಳನ್ನು ಕೇಳುವವರು ಮತ್ತು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನೂ ಕವಿಗಳು ಅವಗಣನೆಗೆ ಒಳಗಾಗಿರುವ ಇಂತಹ ಸ್ಥಿತಿಯಲ್ಲಿ ದಸರೆಯ ನಾಲ್ಕು ವಿವಿಧ ಕವಿಗೋಷ್ಠಿ ನಡೆಸುತ್ತಿರುವುದು ಅಭಿನಂದನೀಯ.

ಅಲ್ಲದೆ ನಾಡೋಜ ನಿಸಾರ್‌ ಅಹಮದ್‌ ನಾಡಹಬ್ಬ ದಸರೆಯನ್ನು ಉದ್ಘಾಟಿಸಿದ್ದು ಕವಿಗಳಿಗೆ ದೊರೆತ ಗೌರವ ಆಗಿದೆ. ಕಾವ್ಯ ಓದುವುದರಿಂದ ಸಂತೋಷ, ಉಲ್ಲಾಸ ದೊರೆಯುವ ಜತೆಗೆ ಬುದ್ದಿ, ಬಾವಗಳ ಪ್ರಚೋಧನೆಯಾಗುತ್ತದೆ ಎಂದ ಅವರು, ಕವಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಸಮಾಜ ಅವರನ್ನು ನಮ್ಮವನೆಂದು ಒಪ್ಪಿಕೊಳ್ಳಲಿದೆ ಎಂದರು.

Advertisement

ಕೈಕೊಟ್ಟ ಕರೆಂಟ್‌: ಸಚಿವರು ಗರಂ
ದಸರಾ ಕವಿಗೋಷ್ಠಿ ಉದ್ಘಾಟನಾ ಸಮಾರಂ¸‌ದಲ್ಲಿ ಪದೇ ಪದೇ ಕರೆಂಟ್‌ ಕೈಕೊಡುತ್ತಿತ್ತು. ಸಚಿವ ಮಹದೇವಪ್ಪ ಅವರ ಬಾಷಣದ ವೇಳೆಯೂ ಕರೆಂಟ್‌ ಕಟ್‌ ಆಯಿತು. ಇದರಿಂದ ಅಸಮಾದಾನಗೊಂಡ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರ ಮೂಲಕ ಚೆಸ್ಕಾಂ ಅಧಿಕಾರಿಗೆ ಕರೆ ಮಾಡಿ ಪವರ್‌ ಕಟ್‌ ಮಾಡದಂತೆ ಸೂಚಿಸಿದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಗಾಯಕಿ ಲತಾ ಹಂಸಲೇಖ, ಮೇಯರ್‌ ಎಂ.ಜೆ.ರವಿಕುಮಾರ್‌, ಉಪ ವಿಶೇಷಾಧಿಕಾರಿ ಡಾ ಬಿಕೆಎಸ್‌ ವರ್ಧನ್‌, ಕಾರ್ಯಧ್ಯಕ್ಷೆ  ಡಾ.ಎನ್‌.ಕೆ.ಲೋಲಾಕ್ಷಿ, ಉಪಾಧ್ಯಕ್ಷರಾದ ರತ್ನಅರಸ್‌, ಪ್ರಸನ್ನ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next