Advertisement
ಜ. 4ರಂದು ಕುರ್ಲಾ ಪೂರ್ವದ ಬಂಟರ ಸಂಘದ ರಂಜನಿ ಸುಧಾಕರ್ ಎಸ್. ಹೆಗ್ಡೆ ಅನೆಕ್ಸ್ ಕಟ್ಟಡದ ವಿಜಯಲಕ್ಷ್ಮೀ ಮಹೇಶ್ ಶೆಟ್ಟಿ ಬಾಬಾ ಗ್ರೂಪ್ ಕಿರು ಸಭಾಗೃಹದಲ್ಲಿ ನಡೆಸಲ್ಪಟ್ಟ ಫೌಂಡೇಶನ್‌ನ ದ್ವಿತೀಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಸ್ತ ಮಂಡಳಿಯ ಸಹಕಾರ ಅತ್ಯಮೂಲ್ಯವಾಗಿದೆ. ವಿನೂತನ ತಾಕತ್ತು ದುರ್ಬಳಕೆ ಆಗಬಾರದು. ಜೀವಜ್ಞಾನ್ ಮಹಾರಾಷ್ಟ್ರದ್ದು, ತಮ್ಮೆಲ್ಲರ ಸಹಯೋಗ, ಅನುಗ್ರಹ ಬೇಕಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ನನ್ನ ಸೇವೆಗೆ ಮುನ್ನುಡಿಯಾಗಿದೆ. ಲೆಕ್ಕ ಪತ್ರ ಸರಿ ಇದ್ದರೆ ಎಲ್ಲವೂ ಸರಿಯಿದ್ದಂತೆ. ಲೆಕ್ಕವು ಬೆನ್ನುಮೂಳೆಯಿದ್ದಂತೆ. ಆವಾಗಲೇ ಸಂಸ್ಥೆಗಳ ಮುನ್ನಡೆ ಸುಲಲಿತವಾಗುತ್ತದೆ ಎಂದು ನುಡಿದು ತನ್ನನ್ನು ಇಷ್ಟೆತ್ತರಕ್ಕೆ ಬೆಳೆಸಿ ಬಾಳಿಗೆ ಪ್ರೇರಕರಾದ ಶಿಕ್ಷಕರು, ಬಂಧು-ಹಿತೈಷಿಗಳ ಸಹಯೋಗವನ್ನು ಸ್ಮರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
Related Articles
ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು, ಇದೊಂದು ಭಾವನಾತ್ಮಕ ಬೆಸುಗೆಯ ರಚನಾತ್ಮಕ ಸಂಭ್ರಮವಾಗಿದೆ. ಸೇವೆಯ ಮುಖೇನ ಜನಾಕರ್ಷಿಸುವ ಈ ಸಂಸ್ಥೆಗೆ ಸೇವೆಯೇ ಪ್ರಸಿದ್ಧಿಯನ್ನು ನೀಡಿದೆ. ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಭವಾನಿ ಫೌಂಡೇಶನ್ ಮಾದರಿ ಎಂದೆಣಿಸಿದೆ ಎಂದು ನುಡಿದರು.
Advertisement
ಮತ್ತೋರ್ವ ಸಮ್ಮಾನಿತ ಡಾ| ಭಾಸ್ಕರ ಶೆಟ್ಟಿ ಮಾತನಾಡಿ, ನನಗೆ ತುಂಬಾ ಸಮ್ಮಾನಗಳು ಪ್ರಾಪ್ತಿಯಾಗಿವೆ. ಆದರೆ ಸಾಮಾಜಿಕ ಕಳಕಳಿಯುಳ್ಳ ಇಂತಹ ಫೌಂಡೇಶನ್‌ನಿಂದ ಗೌರವಿಸಲ್ಪಡುತ್ತಿರುವುದು ನನ್ನ ಭಾಗ್ಯ. ಸಮಾಜ ಸೇವೆಯು ಮನುಕುಲದ ದೊಡ್ಡ ಕೆಲಸ. ಇದನ್ನು ಕಡುಗ್ರಾಮೀಣ ಪ್ರದೇಶಕ್ಕೆ ತೆರಳಿ ಅದು ಕೂಡಾ ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು ಎಂದರೆ ಇದು ನೈಜ ರಾಷ್ಟ್ರಸೇವೆಯೇ ಸರಿ. ಒಬ್ಬರಿಗೆ ವಿದ್ಯೆ ನೀಡಿದರೆ ಇಡೀ ಸಮಾಜ ಸುಶಿಕ್ಷಿತವಾಗುವುದು ಎಂದರು. ಶಿಕ್ಷಕನಾಗಿ ವಿದ್ಯಾಭ್ಯಾಸ ಕಲಿಸಿದ ನನಗೆ ಗುರು ಸ್ಥಾನದಲ್ಲಿರಿಸಿ ಶಿಷ್ಯನೋರ್ವನಿಂದ ಗೌರವಿಸಲ್ಪಡುವುದು ಅತೀವ ಅಭಿಮಾನ ತಂದಿದೆ. ಇದು ಗುರುಶಿಷ್ಯರ ಮರೆಯಲಾಗದ ಅನುಬಂಧವೇ ಸರಿ. ಇವರೋರ್ವ ಕುತೂಹಲಕಾರಿ ಕಾಯಕವುಳ್ಳವರು. ಸಮಾಜಕ್ಕೆ ಉಪಕಾರವಾಗುವಂಥ ಇಂತಹ ವ್ಯಕ್ತಿಗಳು ಹೆಚ್ಚಾಗಬೇಕು. ಇಂತಹ ವಿದ್ಯಾರ್ಥಿಗಳು ರಾಷ್ಟ್ರಕ್ಕೆ ಮಾದರಿ ಎಂದು ಸಮ್ಮಾನ ಸ್ವೀಕರಿಸಿದ ಶಿಕ್ಷಕ ಡಿ.ಜಿ. ಕಲಕರ್ಣಿ ತಿಳಿಸಿದರು.
ಕೆ.ಡಿ. ಶೆಟ್ಟಿ ಅವರದ್ದು ಬಂಧುತ್ವದ ಪರಿವಾರ. ಮುಂಬಯಿಗರಲ್ಲಿ ದೊಡ್ಡ ಮನಸ್ಸಿದೆ. ಅದರಲ್ಲೂ ಮರಾಠಿಗರು ನೀಡಿದ ಸೇವೆಗೆ ಸದಾ ಪ್ರಸನ್ನರಾಗಿರುತ್ತಾರೆ. ಮಾನವೀಯತೆಯನ್ನೇ ಬಂಡ ವಾಳವಾಗಿರಿಸಿ ಜನಸೇವೆಯಲ್ಲಿ ತೊಡಗಿಸಿರುವ ಕೆ.ಡಿ. ಶೆಟ್ಟಿ ಸಾರಥ್ಯದ ಭವಾನಿ ಫೌಂಡೇಶನ್ ಇನ್ನೂ ಜನಹಿತ ಸೇವೆ ಮಾಡುವ ಭಾಗ್ಯ ಭ್ರಮರಾಂಬಿಕೆ ಕರುಣಿಸಲಿ ಎಂದು ಸಂತೋಷ್ ಶೆಟ್ಟಿ ನೆರೂಲ್ ಶುಭಹಾರೈಸಿದರು.
ಮಹಾರಾಷ್ಟ್ರದ ಜನರ ಮನಸ್ಸು ದೊಡªದು. ಮರಾಠ ನೆಲೆಯಲ್ಲಿ ಕರ್ಮಭೂಮಿಯಾಗಿಸಿದ ಅವರ ಸೇವೆಯಿಂದ ನಮ್ಮವರ ಶ್ರೇಷ್ಠತ್ವ ಸಾಧ್ಯವಾಗಿದೆ. ಸೇವೆ ಎಂದೂ ನಿಸ್ವಾರ್ಥ ಮತ್ತು ನಿಷ್ಪಕ್ಷೀಯವಾಗಿದ್ದಲ್ಲಿ ಫಲದಾಯಕವಾಗುತ್ತದೆ ಎಂದು ಸಂತೋಷ ಶೆಟ್ಟಿ ಪನ್ವೇಲ್ ಅಭಿಪ್ರಾಯಿಸಿದರು.
ಕೆಡಿಎಸ್ ಅವರ ಸಾಮಾಜಿಕ ತುಡಿತ ಅತ್ಯದ್ಭುತ. ಅವರಲ್ಲಿನ ಸಮಾಜ ಉದ್ಧಾರ ಮನೋಭಾವ ನಿತ್ಯ ಕ್ರಿಯೆಯಾಗಿರುವುದು ಅಭಿಮಾನದ ವಿಚಾರ. ಅವರೆಲ್ಲಾ ಆಶಯ ಚಿಂತನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ ಎಂದು ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ತಿಳಿಸಿದರು.
ಸಮ್ಮಾನಿತರಾದ ಮುರಳೀಧರ್ ವಿಠಲ್ ಪಾಲ್ವೆ, ಶಶಿಕಾಂತ್ ಠಾಕ್ರೆ ಮೊದಲಾದವರು ಮಾತನಾಡಿ ಶುಭಹಾರೈಸಿದರು. ಫೌಂಡೇಶನ್‌ನ ವಿಶ್ವಸ್ಥ ಸದಸ್ಯೆಯರಾದ ಅಂಕಿತಾ ಜೆ. ಶೆಟ್ಟಿ, ಜತೆ ಕೋಶಾಧಿಕಾರಿ ಕು| ಶಿಖಾ ಕುಸುಮೋಧರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಪ್ರೇಮನಾಥ ಬಿ. ಶೆಟ್ಟಿ ಮುಂಡ್ಕೂರು, ನವೀನ್ ಎಸ್. ಶೆಟ್ಟಿ, ತಸೊÏಡೆ ಪರ್ಸುರಾಮ್, ಶಶಿಕಾಂತ್ ಠಾಕ್ರೆ, ಸಿಎ ಎಸ್. ಸುಬ್ರಹ್ಮಣ್ಯಂ, ಫೌಂಡೇಶನ್‌ನ ಮಾತೃ ಸಂಸ್ಥೆಯಾದ ಭವಾನಿ ಶಿಪ್ಪಿಂಗ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉನ್ನತಾಧಿಕಾರಿಗಳು, ಉದ್ಯೋಗಸ್ಥ ಮಂಡಳಿ, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಮೊಯಿದ್ದೀನ್ ಮುಂಡ್ಕೂರು ಮತ್ತು ಧರ್ಮಪಾಲ್ ದೇವಾಡಿಗ ಅವರು ಸಂಸ್ಥೆಯ ಕಾರ್ಯನಿಷ್ಠೆ ಮತ್ತು ಸೇವಾ ವೈಖರಿಯನ್ನು ತಿಳಿಸಿದರು. ವಿಶೇಷ ಆಮಂತ್ರಿತರಾಗಿ ಉಪಸ್ಥಿತ ಗಣ್ಯರನ್ನು ಕೆ. ಡಿ. ಶೆಟ್ಟಿ ಮತ್ತು ಟ್ರಸ್ಟಿಗಳು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಹೇಮಾ ಶೆಟ್ಟಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ಜೀಕ್ಷಿತ್ ಕುಸುಮೋಧರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಫೌಂಡೇಶನ್‌ನ ಸೇವೆಯ ಸ್ಥೂಲವಾದ ಮಾಹಿತಿಯನ್ನಿತ್ತರು. ಗೌರವ ಪ್ರಧಾನ ಕಾರ್ಯದರ್ಶಿ ರಾಜಲಕ್ಷ್ಮೀ ಸುಬ್ರಹ್ಮಣ್ಯಂ ಗತ ವಾರ್ಷಿಕ ಮಹಾ ಸಭೆಯ ವರದಿ ವಾಚಿಸಿದರು. ಕೋಶಾಧಿಕಾರಿ ಸೀಮಾ ಶುಕ್ಲ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಕರ್ನೂರು ಮೋಹನ್ ರೈ ಸಮ್ಮಾನಿತರನ್ನು ಪರಿಚಯಿಸಿದರು. ರೊನಾಲ್ಡ್ ಥಾಮಸ್ ಉಪಸ್ಥಿತ ಗಣ್ಯರನ್ನು ಪರಿಚಯಿಸಿದರು. ಫೌಂಡೇಶನ್‌ನ ಟ್ರಸ್ಟಿ ಚೆಲ್ಲಡ್ಕ ಪ್ರಕಾಶ್ ಡಿ. ಶೆಟ್ಟಿ ವಂದಿಸಿದರು. ಚಿತ್ರ-ವರದಿ : ರೋನ್ಸ್ ಬಂಟ್ವಾಳ್