ಟೋಕಿಯೊ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಳುಗಳು ಹೊಸ ಹೊಸ ದಾಖಲೆ ಬರೆಯುತ್ತಿದ್ದಾರೆ. ಇದೇ ಮೊದಲ ಬಾರಿಗೆ ಫೆನ್ಸಿಂಗ್ ಕ್ರೀಡೆಯಲ್ಲಿ ( ಕತ್ತಿವರಸೆ) ಭಾರತದ ಗೆಲುವು ಸಾಧಿಸಿದೆ. ಭಾರತವನ್ನು ಪ್ರತಿನಿಧಿಸಿದ್ದ ಭವಾನಿ ದೇವಿ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಆದರೆ ಎರಡನೇ ಪಂದ್ಯದಲ್ಲಿ ಸೋತು ಕೂಟದ ಪಯಣವನ್ನು ಕೊನೆಗೊಳಿಸಿದರು.
ಭವಾನಿ ದೇವಿ ಅವರು ಟುನೀಶಿಯಾದ ಎದುರಾಳಿ ನಾಡಿಯಾ ಬೆನ್ ಅಜೀಜಿಯವರನ್ನು ಫೆನ್ಸಿಂಗ್ ಪಂದ್ಯದಲ್ಲಿ 15-3 ಅಂತರದಿಂದ ಮಣಿಸುವ ಮೂಲಕ ಆರು ನಿಮಿಷಗಳಲ್ಲಿ ಪಂದ್ಯ ಗೆದ್ದಿದ್ದಾರೆ.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್ : ಹದಿನಾರರ ಸುತ್ತಿಗೆ ಏರಿದ ಬಾಕ್ಸಿಂಗ್ ತಾರೆ ಮೇರಿ ಕೋಮ್
ಭಾರತದಿಂದ ಫೆನ್ಸಿಂಗ್ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಭವಾನಿ ದೇವಿ ಪಾತ್ರರಾಗಿದ್ದಾರೆ. ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಭವಾನಿ ಅವರಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಸಿಕ್ಕಿತ್ತು.
ಆದರೆ ಮುಂದಿನ ಪಂದ್ಯದಲ್ಲಿ ಫ್ರಾನ್ಸ್‌ನ ಮನೋನ್ ಬ್ರೂನೆಟ್ ವಿರುದ್ಧ ಸೋತ ನಂತರ ಭವಾನಿ ದೇವಿ ಕೂಟದಿಂದ ಹೊರಬಿದ್ದರು.