ಭಟ್ಕಳ : ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಯಾವುದೇ ತಂಟೆಯನ್ನು ಮಾಡದ ಚಿರತೆ ಮತ್ತೆ ತನ್ನ ಕರಾಮತ್ತನ್ನು ತೋರಿಸಿದ್ದು ಬೆಳಕೆಯ ಕಾನ್‍ಮದ್ಲುವಿನಲ್ಲಿ ಒಂದು ಗೋವನ್ನು ತಿಂದು ಹಾಕಿದ ಘಟನೆ ವರದಿಯಾಗಿದೆ.
ಕಾನ್‍ಮದ್ಲುವಿನ ನಾರಾಯಣ ಸೋಮಯ್ಯ ಗೊಂಡ ಎನ್ನುವವರಿಗೆ ಸೇರಿದ ದನವನ್ನು ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದು ಕೊಟ್ಟಿಗೆಗೆ ನುಗ್ಗಿದ ಚಿರತೆ ದನವನ್ನು ಅರ್ಧ ತಿಂದು ಹಾಕಿದ ಘಟನೆ ಎಲ್ಲರಲ್ಲಿಯೂ ಆತಂಕ ಮೂಡಿಸಿದೆ.
ಕಳೆದೊಂದು ವಾರದಿಂದ ಚಿರತೆ ಈ ಭಾಗದಲ್ಲಿ ರಾತ್ರಿ ವೇಳೆ ಓಡಾಡಿ ದನಕರುಗಳು ಹಾಗೂ ನಾಯಿಗಳ ಮೇಲೆ ದಾಳಿ ಮಾಡುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ತೀವ್ರ ಬಡತನದಲ್ಲಿರುವ ನಾರಾಯಣ ಗೊಂಡ ಅವರು ತಮ್ಮ ದನವನ್ನು ಕಳೆದುಕೊಂಡು ಸಾವಿರಾರು ರೂಪಾಯಿ ನಷ್ಟಕ್ಕೊಳಗಾಗಿದ್ದು ಪರಿಹಾರ ನೀಡುವಮತೆ ನಾಗರೀಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ಶ್ರೀಕಾಂತ್ ಪವಾರ್, ಅರಣ್ಯ ರಕ್ಷಕ ವಿರೇಶ ಭೇಟಿ ನೀಡಿ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : ಕಾರ ಹುಣ್ಣಿಮೆಯ ಕರಿ ಸ್ಪರ್ಧೆಯ ವೇಳೆ ದಿಕ್ಕೆಟ್ಟು ಓದಿದ ಹೋರಿ : ಚಿಂತೆಯಲ್ಲಿ ರೈತ