Advertisement
ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿನ ತನಕವೂ ಮಲ್ಲಿಗೆ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಸ್ಟೋರೇಜ್ ವ್ಯವಸ್ಥೆ ಇಲ್ಲ. ಬೆಳೆಗಾರರು ಅಂದಿನ ದರಕ್ಕೇ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಕೆಲವೊಮ್ಮೆ ಹೂವು ಮಾರಾಟವಾಗದೇ ಇದ್ದಾಗ ಸಂಪೂರ್ಣ ಹಾಳಾಗುವ ಸಾಧ್ಯತೆಯೂ ಕೂಡಾ ಇದೆ. ಇದನ್ನೆಲ್ಲಾ ತಪ್ಪಿಸಲು ಹಾಗೂ ಬೆಲೆಯಿದ್ದಾಗ ಮಾರುಕಟ್ಟೆಗೆ ತರಲು ಸ್ಟೋರೇಜ್ ವ್ಯವಸ್ಥೆಯೊಂದೇ ಪರಿಹಾರವಾಗಿದ್ದು ಆ ಕುರಿತು ಚಿಂತನೆ ನಡೆಸಲಾಗಿದೆ ಎಂದೂ ಅವರು ಹೇಳಿದರು.
Related Articles
Advertisement
ಮತ್ಸ್ಯ ವಾಹಿನಿ: 150 ಮಂದಿ ನಿರುದ್ಯೋಗಿ ಯುವ ಜನರಿಗೆ ಪರಿಸರ ಸ್ನೇಹಿ ತ್ರಿಚಕ್ರ ವಾಹನ
ನ.21 ರಂದು ವಿಶ್ವ ಮೀನುಗಾರಿಕೆ ದಿನಾಚರಣೆಯ ಅಂಗವಾಗಿ ಬೆಂಗಳೂರಿನ150 ಜನ ನಿರುದ್ಯೋಗಿ ಯುವ ಜನರಿಗೆ ಪರಿಸರ ಸ್ನೇಹಿ ತ್ರಿಚಕ್ರ ವಾಹನ ಮತ್ಸ್ಯ ವಾಹಿನಿ ಹಸ್ತಾಂತರಿಸುವ ಕಾರ್ಯಕ್ರಮ ಬೆಂಗಳೂರಿನ ವಿಧಾನ ಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ವಿಶ್ವ ಮೀನುಗಾರಿಕಾ ದಿನಾಚರಣೆ-2023 ಹಾಗೂ ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಥಮ ಬಾರಿಗೆ ಮೀನುಗಾರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ವಿಶೇಷವಾಗಿ ದಕ್ಷಿನ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಮೀನುಗಾರರು ಕಾರ್ಯಕ್ರಮಕ್ಕೆ ಆಗಮಿಸುವಂತೆಯೂ ಅವರು ಕೋರಿದರು.ಕೆ.ಎಫ್.ಡಿ.ಸಿ.ಯ ಸಹಯೋಗದೊಂದಿಗೆ ಅಂದು 300 ತ್ರಿಚಕ್ರ ವಾಹನ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು ಪ್ರಥಮ ಹಂತವಾಗಿ 150 ತ್ರಿಚಕ್ರ ವಾಹನವನ್ನು ಬೆಂಗಳೂರು ವ್ಯಾಪ್ತಿಯಲ್ಲಿ ವಿತರಿಸಲಾಗುತ್ತಿದೆ. ಫಲಾನುಭವಿಯು ಕೇವಲ 2ಲಕ್ಷವನ್ನು ಠೇವಣಿಯಾಗಿಟ್ಟರೆ ಸಾಕು ಅವರಿಗೆ ವಿದ್ಯುತ್ ಚಾಲಿತ ತ್ರಿಚಕ್ರ ವಾಹನವನ್ನು ಹಸ್ತಾಂತರಿಸುವುದಲ್ಲದೇ ಕೆ.ಎಫ್.ಡಿ.ಸಿ.ವತಿಯಿಂದ ದಿನಾಲೂ ತಾಜಾ ಮೀನು ಸರಬರಾಜು ಮಾಡಲೂ ಕೂಡಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಂದು ವಾಹನಕ್ಕೆ ಪ್ರತಿ ತಿಂಗಳೂ 3 ಸಾವಿರ ರೂಪಾಯಿ ನಿರ್ವಹಣಾ ವೆಚ್ಚ ತುಂಬಬೇಕಾಗಿದ್ದು ಬೇರೆ ಯಾವುದೇ ರೀತಿಯ ಹಣ ಕಟ್ಟಬೇಕಾಗಿಲ್ಲ. ವಾಹನ ಕೆ.ಎಫ್.ಡಿ.ಸಿ. ಹೆಸರಿನಲ್ಲಿರುತ್ತಿದ್ದು ಅವರಿಗೆ ಯಾವಾಗ ಬೇಡಾ ಅಂತಾದರೂ ಸಹ ವಾಪಾಸು ನೀಡಿ ತಮ್ಮ ಠೇವಣಿ ಹಣವನ್ನು ವಾಪಾಸು ಪಡೆಯುವ ಅವಕಾಶವಿದೆ ಎಂದೂ ಅವರು ಹೇಳಿದರು.
ವಾಹನವನ್ನು ಮೀನುಗಾರರು ಮತ್ತು ಇತರೇಯವರೂ ಕೂಡಾ ಪಡೆಯಬಹುದು. ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದ್ದು ಅರ್ಹತೆಯ ಮೇರೆಗೆ ನೀಡಲಾಗುವುದು ಎಂದರು. ವಾಹನದಲ್ಲಿ ಕೇವಲ ಮೀನು ಮಾರಾಟ ಮಾತ್ರವಲ್ಲ ಮೀನು ಖಾದ್ಯ ತಯಾರಸಿಕೊಡಲೂ ಕೂಡಾ ಅವಕಾಶವಿದೆ ಎಂದೂ ಅವರು ಹೇಳಿದರು. ಪ್ರಥಮ ಹಂತದಲ್ಲಿ ಬೆಂಗಳೂರಿಗರಿಗೆ ತಾಜಾ ಮೀನು ಸರಬರಾಜ ಮಾಡಲು ಈ ವ್ಯವಸ್ಥೆಯನ್ನು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಕರಾವಳಿ, ಮಲೆನಾಡು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ವಿಸ್ತರಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದೂ ಹೇಳಿದ ಸಚಿವರು ಒಂದೇ ಯೋಜನೆಯಲ್ಲಿ ಎರಡು ಉದ್ದೇಶವನ್ನು ಇಟ್ಟಿಕೊಳ್ಳಲಾಗಿದೆ. ಬೆಂಗಳೂರಿಗರಿಗೆ ಕರಾವಳಿಯ ತಾಜಾ ಮೀನು, ಮೀನು ಖಾದ್ಯ ನೀಡುವುದಲ್ಲದೇ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದಂತೆಯೂ ಆಗುತ್ತದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಠಲ ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.