Advertisement
ಮುರ್ಡೇಶ್ವರದಲ್ಲಿ ಶನಿವಾರ ಸಂಜೆ 3.30ಕ್ಕೆ ಆರಂಭವಾದ ತಿರುಪತಿ ರೈಲಿನ ಇಂಜಿನ್‌ಗೆ ಹೂ, ಬಾಳೆಕಂಬ ಕಟ್ಟಿ ಪೂಜೆ ನೆರವೇರಿಸಿದ ನಂತರ ಮಾತನಾಡಿ ಕರಾವಳಿಯಲ್ಲಿ ಅತ್ಯಂತ ಹೆಚ್ಚು ಬೇಡಿಕೆಯ ರೈಲು ಆರಂಭಕ್ಕೆ ಕೋಟ ಶ್ರೀನಿವಾಸ ಪೂಜಾರಿ ಪರಿಶ್ರಮವೇ ಸಾಕ್ಷಿ. ಈ ಭಾಗದಿಂದ ಅತೀ ಹೆಚ್ಚು ಜನ ತಿರುಪತಿ ಯಾತ್ರೆ ಮಾಡುತ್ತಿದ್ದು ಅವರಿಗೆ ನೇರ ಸಂಪರ್ಕದ ರೈಲು ಅನುಕೂಲವಾಗಲಿದೆ ಎಂದರು. ರೈಲು ಆರಂಭಕ್ಕೆ ಸಹಕರಿಸಿದ ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ರೈಲ್ವೇ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಮಹಿಳೆಯರೂ ಸೇರಿದಂತೆ ನೂರಾರು ಮಂದಿ ಸೇರಿ ರೈಲಿಗೆ ಸ್ವಾಗತ ಕೋರಿ ಬೀಳ್ಕೊಟ್ಟರು.
ಭಟ್ಕಳ: ಕೇಂದ್ರ ಸರ್ಕಾರದಿಂದ ಹೊಸದಾಗಿ ಮಂಜೂರಿಯಾಗಿರುವ ಮುರ್ಡೇಶ್ವರ- ತಿರುಪತಿಗೆ ಸಂಪರ್ಕ ಕಲ್ಪಿಸುವ ರೈಲಿಗೆ ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ರೈಲಿಗೆ ಶಾಸ್ತ್ರೋಕ್ತ ಪೂಜೆ ಸಲ್ಲಿಸಿ ಕೇಂದ್ರ ಸರಕಾರ ಹಾಗೂ ರೈಲ್ವೇ ಸಚಿವರಿಗೆ ಅಭಿನಂದನಾ ಘೋಷಣೆ ಕೂಗಿದರು.
Related Articles
Advertisement
ಈ ಸಂದರ್ಭದಲ್ಲಿ ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಲಕ್ಷ್ಮೀ ನಾರಾಯಣ ನಾಯ್ಕ, ಪಾಂಡುರಂಗ ನಾಯ್ಕ, ಬಾಬಾನಂದ ಪೈ, ವಿನಾಯಕ ಪೈ, ಉದಯ ಪ್ರಭು, ಜಗದೀಶ ನಾಯ್ಕ, ಶೇಷಗಿರಿ ನಾಯ್ಕ ಸೇರಿ ಸಾರ್ವಜನಿಕರು, ರೈಲ್ವೇ ಹೋರಾಟ ಸಮಿತಿ ಸದಸ್ಯರು, ರೈಲ್ವೇ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.