Advertisement

Bharti Airtel; 50 ಮಿಲಿಯನ್ 5ಜಿ ಗ್ರಾಹಕರನ್ನು ಹೊಂದಿದ ಏರ್‌ಟೆಲ್

09:20 PM Oct 06, 2023 | Team Udayavani |

ನವದೆಹಲಿ: ಏರ್‌ಟೆಲ್ 5G ಪ್ಲಸ್ ಬಿಡುಗಡೆಯಾದ 1 ವರ್ಷದೊಳಗೆ,ಭಾರ್ತಿ ಏರ್‌ಟೆಲ್(Airtel)ತನ್ನ ನೆಟ್‌ವರ್ಕ್ ನಲ್ಲಿ 50 ಮಿಲಿಯನ್ 5G ಗ್ರಾಹಕರನ್ನು ಹೊಂದಿರುವುದಾಗಿ ಘೋಷಿಸಿದ್ದು, ಏರ್‌ಟೆಲ್ 5G ಪ್ಲಸ್ ಸೇವೆಗಳು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಿದೆ ಎಂದು ಕಂಪನಿಯು ಪ್ರಕಟಿಸಿದೆ.

Advertisement

ಇದು ದೇಶದಲ್ಲೇ ಅತ್ಯಂತ ವೇಗದ ರೋಲ್ಔಟ್ ಗಳಲ್ಲಿ ಒಂದಾಗಿದೆ, ಏರ್‌ಟೆಲ್ 5G ಪ್ಲಸ್ ದೇಶದ ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ. ಬಿಹಾರದ ರಮಣೀಯ ಬಲಿಯಾದಿಂದ ಒಡಿಶಾದ ಐತಿಹಾಸಿಕ ಕಟಕ್, ಜಾರ್ಖಂಡ್ ನ  ಅತ್ಯಂತ ಚಿಕ್ಕ ರಾಮಗಢ ಜಿಲ್ಲೆ, ರಾಜಸ್ಥಾನದ ಬಿಷ್ಣೋಯಿ ವನ್ಯಜೀವಿ ತಾಣ, ಕೇರಳದ ಪ್ರಶಾಂತ ಸೆರಾಯ್  ನಿಂದ ಕಾಶ್ಮೀರದ ಜವುಗು ಹಳ್ಳಿಗಳವರೆಗೆ ಏರ್‌ಟೆಲ್ ಗ್ರಾಹಕರು ಈಗ ಡಿಜಿಟಲ್ ಸೂಪರ್ಹೈವೇಗೆ ಬಂದಿದ್ದಾರೆ.

ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿರುವ ಭಾರ್ತಿ ಏರ್‌ಟೆಲ್ ನ CTO, ರಣದೀಪ್ ಸೆಖೋನ್, “ನಮ್ಮ ಲಕ್ಷಾಂತರ ಗ್ರಾಹಕರು 5G ಗೆ ಪರಿವರ್ತಿಸಿಕೊಂಡಿರುವುದನ್ನು ಕಂಡು ಸಂತಸವಾಗಿದೆ.ನಾವು ಯೋಜಿಸಿದ್ದಕ್ಕಿಂತ ಮೊದಲೇ ಈ ಮೈಲಿಗಲ್ಲನ್ನು ತಲುಪುತ್ತಿದ್ದೇವೆ ಏರ್‌ಟೆಲ್ ನ 5G ಕವರೇಜ್ ನ ದೊಡ್ಡ ವಿಸ್ತರಣೆಯನ್ನು 2022 ರ ಅಕ್ಟೋಬರ್ ನಲ್ಲಿ ಆರಂಭಿಸಲಾಯಿತು. 12 ತಿಂಗಳಲ್ಲಿ 1 ಮಿಲಿಯನ್ ನಿಂದ 50 ಮಿಲಿಯನ್ ಗೆ  ತಲುಪಿದ್ದೇವೆ ಎಂದಿದ್ದಾರೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಗಾಗಿ ಏರ್‌ಟೆಲ್ ವಿಶೇಷ ಪ್ಲಾನ್ ಗಳು : 99 ರೂ.ಗೆ 2 ದಿನ ಅನಿಯಮಿತ ಡಾಟಾ!
ಐಸಿಸಿ ಕ್ರಿಕೆಟ್‍ ವಿಶ್ವಕಪ್‍ ಹಿನ್ನೆಲೆ, ಏರ್‌ಟೆಲ್ ತನ್ನ ಗ್ರಾಹಕರಿಗೆ ವಿಶೇಷ ಕ್ರಿಕೆಟ್ ಯೋಜನೆಗಳನ್ನು ಪ್ರಕಟಿಸಿದೆ.

ಎಲ್ಲಾ ಪ್ರಿಪೇಯ್ಡ್ ಗ್ರಾಹಕರಿಗೆ, ಏರ್‌ಟೆಲ್ ವಿಶೇಷ ಡೇಟಾ ಪ್ಯಾಕ್ ಅನ್ನು ಪ್ರಾರಂಭಿಸಿದೆ. 99 ರೂ. ಗೆ ರೀಚಾರ್ಜ್ ಮಾಡಿದರೆ 2 ದಿನಗಳವರೆಗೆ ಅನಿಯಮಿತ ಡಾಟಾ ಹಾಗೂ 49 ರೂ. ರೀಚಾರ್ಜ್ ಗೆ 1 ದಿನದ ಅವಧಿಗೆ 6 ಜಿಬಿ ಡಾಟಾ ದೊರಕುತ್ತದೆ.

Advertisement

ಭಾರ್ತಿ ಏರ್‌ಟೆಲ್ ಬಳಕೆದಾರರು ವಿಶ್ವಕಪ್ 2023 ಸ್ಟೇಡಿಯಂಗಳಾದ್ಯಂತ ವೇಗವಾಗಿ ಅಪ್‌ಲೋಡ್ ವೇಗವನ್ನು ಪಡೆಯಬಹುದು ಎಂದು ಓಪನ್‌ಸಿಗ್ನಲ್ ವರದಿ ತಿಳಿಸಿದೆ.

ಭಾರತೀಯ ಮೊಬೈಲ್ ಆಪರೇಟರ್‌ಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು Opensignal ಎಲ್ಲಾ ಕ್ರೀಡಾಂಗಣಗಳಲ್ಲಿ ಮೊಬೈಲ್ ನೆಟ್‌ವರ್ಕ್ ವೇಗವನ್ನು ಪರೀಕ್ಷಿಸಿದ್ದು. 5G ನೆಟ್‌ವರ್ಕ್‌ನಲ್ಲಿ ಏರ್‌ಟೆಲ್ ಎಲ್ಲಾ ಕ್ರೀಡಾಂಗಣಗಳಲ್ಲಿ ಧ್ವನಿ ಅಪ್ಲಿಕೇಶನ್‌ಗಳೊಂದಿಗೆ ಅತ್ಯುತ್ತಮ ಅನುಭವವನ್ನು ನೀಡಿದೆ.

ವರದಿಯ ಪ್ರಕಾರ, ಭಾರತದ 40 ದೊಡ್ಡ ನಗರಗಳಲ್ಲಿ ಮೊಬೈಲ್ ಲೈವ್ ವೀಡಿಯೊ ಸ್ಟ್ರೀಮಿಂಗ್ ಅನುಭವದ ಗುಣಮಟ್ಟದಲ್ಲಿ ಇತರ ಆಪರೇಟರ್‌ಗಳಿಗೆ ಹೋಲಿಸಿದರೆ ಏರ್‌ಟೆಲ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಓಪನ್‍ ಸಿಗ್ನಲ್‍ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next