Advertisement
ಜನ, ಕಾರ್ಮಿಕ ನೀತಿ ವಿರೋಧಿ ವಿರುದ್ಧ ಅಖಿಲ ಭಾರತ ಎಲ್ಲಾ ಕಾರ್ಮಿಕ ಸಂಘಗಳು ಸರಕಾರದ ಜನವಿರೋಧಿ ಹಾಗೂ ಕಾರ್ಮಿಕ ನೀತಿಗಳ ವಿರುದ್ಧ ಹಾಗೂ ಕನಿಷ್ಟ ವೇತನ ಮಾಸಿಕ ರೂ.18 ಸಾವಿರ, ಕೆಲಸದ ಭದ್ರತೆ, ಸವಲತ್ತುಗಳ ಪಾವತಿಗಾಗಿ ಆಗ್ರಹಿಸಿ ಹಾಗೂ ಅಂಗನವಾಡಿ, ಬಿಸಿಯೂಟ, ಆಶಾ ನೌಕರರ ಕಾಯಂ ನೌಕರರೆಂದು ಮಾನ್ಯ ಮಾಡಲು ಒತ್ತಾಯಿಸಿ, ಬೀಡಿ ಕಾರ್ಮಿಕರ ಡಿ.ಎ. ಕನಿಷ್ಟ ಕೂಲಿ ಜಾರಿಗೆ ಆಗ್ರಹಿಸಿ, ಕಟ್ಟಡ ಕಾರ್ಮಿಕರಿಂದ ಹಣ ಪಡೆದು ಮೋಸ ಮಾಡುವ ಕಾರ್ಮಿಕ ಇಲಾಖೆಯ ಸುಲಿಗೆ ನೀತಿ ವಿರುದ್ಧ 48 ಗಂಟೆಯ ಮುಷ್ಕರ ನಡೆಸಲು ಕರೆಕೊಟ್ಟಿವೆ.
ಮುಷ್ಕರವನ್ನು ಬೆಂಬಲಿಸಿ ಭಾಗವಹಿಸಿ ಯಶಸ್ವಿಗೊಳಿಸಲು ಬೆಳ್ತಂಗಡಿ ತಾ| ಅಂಗನ ವಾಡಿ ನೌಕರರ ಸಂಘ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕು ಅಕ್ಷರ ದಾಸೋಹ ನೌಕರರ ಸಂಘಗಳು, ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಒಕ್ಕೂಟ, ದ.ಕ. ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಆಟೋ ಚಾಲಕರ ಸಂಘಟನೆ, ಪಿಕ್‌ಅಪ್ ಚಾಲಕರ ಸಂಘಟನೆ, ಗುತ್ತಿಗೆ ಕಾರ್ಮಿಕರ ಸಂಘಟನೆ, ಅಸಂಘಟಿತ ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ ಎಂದು ಸಂಘಟನೆಗಳ ಪ್ರಮುಖ ಮುಖಂಡ, ನ್ಯಾಯವಾದಿ ಬಿ.ಎಂ. ಭಟ್, ಇತರ ಮುಖಂಡರುಗಳಾದ ದೇವಕಿ ಕಳೆಂಜ, ಜಯರಾಮ ಮಯ್ಯ, ಲೋಕೇಶ್ ಕುದ್ಯಾಡಿ, ರಾಮಚಂದ್ರ, ದಮಯಂತಿ, ಲೀಲಾವತಿ, ಮೋಹಿನಿ ಪಿಲ್ಯ, ಭಾರತಿ ಮುಗುಳಿ, ರತ್ನ ಕೆಮ್ಮಾಯಿ, ಸವಿತಾ ಕುಂಜೂರು ಪಂಜ, ಗುಡ್ಡಪ್ಪ ಗೌಡ ಸರ್ವೆ, ಕೇಶವ ಗೌಡ ಪುತ್ತೂರು, ಈಶ್ವರಿ, ಜಯಶ್ರೀ, ಪುಷ್ಪಾ, ಶೇಖರ ವೇಣೂರು, ದಿನೇಶ್, ರಝಾಕ್, ಸುಲೇಮಾನ್ ಮೊದಲಾದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಹಿತಕರ ಘಟನೆ ನಡೆದಲ್ಲಿ ಸಂಚಾರ ಮೊಟಕು
ಬಂದ್ ಹಿನ್ನೆಲೆಯಲ್ಲಿ ಬಸ್ಸುಗಳು, ಆಟೋರಿಕ್ಷಾಗಳು ಹಾಗೂ ಇತರ ವಾಹನಗಳು ಇನ್ನೂ ಬಂದ್‌ನ ಕುರಿತು ಅಧಿಕೃತವಾಗಿ ತಿಳಿಸಿಲ್ಲ. ಆದರೆ ಕೆಲವೊಂದು ವಾಹನಗಳು ಬಂದಾಗುವ ಸಾಧ್ಯತೆ ಇದೆ. ಕೆ.ಎಸ್.ಆರ್.ಟಿ.ಸಿ. ವಾಹನಗಳು ಕೂಡಾ ಸಂಚಾರ ನಡೆಸುವ ಕುರಿತು ತಿಳಿಸಿದ್ದು ಆದರೆ ಕೊನೆಯ ಕ್ಷಣದಲ್ಲಿ ಅಹಿತಕರ ಘಟನೆಯ ಸಾಧ್ಯತೆ ಇದ್ದರೆ ಸಂಚಾರ ಮೊಟಕುಗೊಳಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಬಂಟ್ವಾಳ: ಸಾರಿಗೆ ರಂಗವನ್ನು ಕಾರ್ಪೋರೇಟ್‌ಗೆ ಪರಭಾರೆ ಮಾಡುವ ಮೋಟಾರು ವಾಹನ ಮಸೂದೆ ವಿರೋಧಿಸಿ, ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಜ. 8,9ರಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆದ ಭಾರತ್ ಬಂದ್‌ಗೆ ಬೆಂಬಲಿಸಿ ಸ್ಥಳೀಯ ಸಂಘಟನೆಗಳಿಂದ ಯಾವುದೇ ಲಿಖೀತ ಮಾಹಿತಿ ಬಂದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.
Advertisement
ಬ್ಯಾಂಕ್ ಮತ್ತು ಸರಕಾರಿ ನೌಕರರ ಸ್ಥಳೀಯ ಸಂಘಟನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಖಾಸಗಿ ಮತ್ತು ಸರಕಾರಿ ಶಾಲಾ ಬಂದ್ ಬಗ್ಗೆ ಜಿಲ್ಲೆಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಾಹಿತಿ ನೀಡಿದೆ. ಜೀವ ವಿಮಾ ನಿಗಮದಲ್ಲಿ ಸಿಬಂದಿ ಕರ್ತವ್ಯ ನಿರ್ವಹಿಸುವುದಿಲ್ಲ. ಆದರೆ ಶಾಖೆ ಎಂದಿನಂತೆ ತೆರೆಯಲಿದೆ ಎಂದು ಅಭಿಪ್ರಾಯ ನೀಡಿದ್ದಾರೆ. ಅಂಚೆ ಇಲಾಖೆ ಸಿಬಂದಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸುವರು ಎಂದಿದ್ದಾರೆ. ಕೆಎಸ್‌ಆರ್‌ಟಿಸಿಗೆ ಸಂಬಂಧಿಸಿ ಹಿರಿಯ ಅಧಿಕಾರಿಗಳಿಂದ ಯಾವುದೇ ಸೂಚನೆ ಬಾರದಿರುವ ಕಾರಣ ಬಸ್‌ಗಳ ಓಡಾಟ ಎಂದಿನಂತಿರುವುದು ಎಂದಿದ್ದಾರೆ. ಸ್ಥಳೀಯವಾಗಿ ಬಂದ್ ಪೂರಕ ಬೆಂಬಲವಾಗಿ ಯಾವುದೇ ಸಂಘಟನೆ ಪ್ರಕಟನೆ ನೀಡಿಲ್ಲ. ಸಾರ್ವಜನಿಕ ಮಾಧ್ಯಮಗಳಲ್ಲಿ ಮಾತ್ರ ಬಂದ್ ಮಾಹಿತಿ ವ್ಯಕ್ತವಾಗಿದೆ ಎಂದಿದ್ದಾರೆ.