ದಿಲ್ಲಿ: ಮುಂಬರುವ ಎಪ್ರಿಲ್ ತಿಂಗಳ ಬಳಿಕ ಬಿಎಸ್ 6 ಮಾದರಿಯ ವಾಹನಗಳು ರಸ್ತೆಗಿಳಿಯಲಿವೆ. ಈ ಹಿನ್ನೆಲೆಯಲ್ಲಿ ಈಗಿರುವ ಬಿಎಸ್4 ವಾಹನಗಳು ಒಳ್ಳೆಯ ಮಾರುಕಟ್ಟೆಯನ್ನು ಪಡೆಯುವ ವಿಶ್ವಾಸದಲ್ಲಿವೆ.
ಎಪ್ರಿಲ್ ತಿಂಗಳ ಬಳಿಕ ಯಾವುದೇ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲಾಗುವುದಿಲ್ಲ. ಬದಲಾಗಿ ಬಿಎಸ್ 6 ವಾಹನಗಳೇ ರಸ್ತೆಗಿಳಿಯಲಿವೆ. ಇದಕ್ಕೆ ಈಗಾಗಲೇ ಬಹುತೇಕ ವಾಹನ ಉತ್ಪಾದಕಾ ಸಂಸ್ಥೆಗಳು ಬಿಎಸ್ 6 ವಾಹನಗಳನ್ನು ಉತ್ಪಾದಿಸುತ್ತಿವೆ.
ಆದರೆ 2019ರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗದೇ ಇರುವುದರಿಂದ ನಿರೀಕ್ಷೆಗಿಂತ ಹೆಚ್ಚು ವಾಹನಗಳು ಇನ್ನೂ ಶೋರೂಂಗಳಲ್ಲಿವೆ. ಆದರೆ ಬಿಎಸ್ 4 ವಾಹನಗಳ ಖರೀದಿ ಮತ್ತು ರಿಜಿಸ್ಟೇಶನ್ ಮಾರ್ಚ್ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ.
ಒಂದು ವೇಳೆ ಬಿಎಸ್ 4 ಮಾದರಿಯ ವಾಹನಗಳು ಮಾರಾಟವಾಗದೇ ಇದ್ದರೆ ಅವುಗಳ ಎಂಜಿನ್ ಅನ್ನು ಬಿಎಸ್ 6ಗೆ ಬದಲಾಯಿಸಬೇಕಾಗುತ್ತದೆ. ಇದಕ್ಕೆ ಹೆಚ್ಚು ಖರ್ಚುಗಳು ತಗಲುತ್ತದೆ. ಈ ನಿಟ್ಟಿನಲ್ಲಿ ಮಾರ್ಚ್ ತಿಂಗಳಲ್ಲಿ ಅಟೋಮೊಬೈಲ್ ಕ್ಷೇತ್ರದಲ್ಲಿ ವಿಶೇಷ ಆಫರ್‌ಗಳು ಕಂಡುಬರುವ ಸಾಧ್ಯತೆ ಇದೆ.
ಈಗಾಗಲೇ ರಾಜಸ್ಥಾನದಲ್ಲಿ ಮಾರ್ಚ್ 31ರ ಬಳಿಕ ಬಿಎಸ್ 31ರ ಬಳಿಕ ಬಿಎಸ್ 4 ಮಾದರಿ ವಾಹನಗಳನ್ನು ನೋಂದಣಿ ಮಾಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಪ್ರಿಲ್ 1ರ ಬಳಿಕ ಬಿಎಸ್ 6 ಮಾದರಿ ವಾಹನಗಳು ಮಾತ್ರ ಮಾರಾಟಗೊಳ್ಳಬೇಕಿದೆ.
ಈ ಮಾದರಿಯ ವಾಹನಗಳು ಪರಿಸರಕ್ಕೆ ಪೂರವಾಗಿವೆ. ಕಡಿಮೆ ಮಾಲಿನ್ಯ ಪ್ರಮಾಣವನ್ನು ಹೊಂದಿದೆ. ಈ ಮಾದರಿಯ ವಾಹನಗಳು ಕಡಿಮೆ ಪ್ರಮಾಣದ ಕಾರ್ಬನ್ ಡೈ ಆಕ್ಸೆ„ಡ್ ಅನ್ನು ಪರಿಸರಕ್ಕೆ ಬಿಡುತ್ತದೆ. ಇದಕ್ಕೆ ಬಳಸುವ ಇಂಧನಗಳೂ ಗುಣಮಟ್ಟದಾಗಿರುತ್ತದೆ.