Advertisement

ಅಕ್ರಮ ಗೋ ಹತ್ಯೆ ಮಾಡಿದವನನ್ನು ಜೈಲಿಗೆ ತಳ್ಳಿ: ಪೊಲೀಸರಿಗೆ ಡಾ.ಭರತ್ ಶೆಟ್ಟಿ ವೈ ತಾಕೀತು

04:35 PM Jul 03, 2022 | Team Udayavani |

ಅಡ್ಯಾರ್: ರಾಷ್ಟ್ರೀಯ ಪಕ್ಷ ಎಂದು ಬಿಂಬಿಸಿಕೊಳ್ಳುತ್ತಿರುವ ಪಕ್ಷದ ಕಾರ್ಯಕರ್ತನ ಸಾಚಾತನ ಬಯಲಾಗಿದ್ದು,ಅಡ್ಯಾರ್ ನ ತನ್ಮದೇ ಮನೆಯಲ್ಲಿ ಗೋ ಹತ್ಯೆ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ನೂತನ ಗೋ ಹತ್ಯಾ ನಿಷೇಧ ಕಾನೂನಿನ ಪ್ರಕಾರ  ಕ್ರಮ ಕೈಗೊಂಡು ಬಂಧಿಸಿ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಪೊಲೀಸರಿಗೆ ತಾಕೀತು ಮಾಡಿದ್ದಾರೆ.

Advertisement

ಅಡ್ಯಾರ್ ನ  ಮನೆಯೊಂದರಲ್ಲಿ  ಗೋವನ್ನು ಕಡಿದು ಮಾಂಸ ಮಾರಾಟ ಮಾಡುವ ದಂಧೆಯನ್ನು ಪೊಲೀಸರು ಬಯಲು ಮಾಡಿದ್ದಾರೆ.

ಹಟ್ಟಿಯಿಂದ ಕದ್ದ ಗೋವುಗಳು, ಬೀಡಾಡಿ ಗೋವುಗಳನ್ನು  ಕಳ್ಳತನ ಮಾಡಿ ಮನೆಯಲ್ಲಿಯೇ ವಧಿಸುವ ಜಾಲ ಸಕ್ರಿಯವಾಗಿರುವ ಸಂಶಯವಿದೆ. ಇಂತಹ ಕೃತ್ಯಗಳಿಂದ  ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆಯಿದ್ದು, ಸರಕಾರ ಜಾರಿ ಮಾಡಿರುವ ಗೋ ಹತ್ಯೆ ಕಾಯಿದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕು.ಕ್ಷೇತ್ರದ ವಿವಿಧೆಡೆ ಮಾಹಿತಿ ಲಭ್ಯವಿರುವ ಅಕ್ರಮ ಗೋ ವಧಾ ಕೇಂದ್ರದ ಮೇಲೆ ನಿಗಾ ಇರಿಸಿ  ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕೆಂದು ಈಗಾಗಲೇ ಗೃಹ ಸಚಿವರು ಆದೇಶ ನೀಡಿದ್ದು ಪಾಲನೆಯಾಗಬೇಕಿದೆ ಎಂದು ಶಾಸಕರು ತಿಳಿಸಿದ್ದಾರೆ.

ಇದನ್ನೂ ಓದಿ :ಯುಪಿ: ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತ ಸಹೋದರಿಯರಿಬ್ಬರ ಮೇಲೆ ಗ್ಯಾಂಗ್ ರೇಪ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next