Advertisement

ಬಳ್ಳಾರಿ ನಗರ ಪ್ರವೇಶಿಸಿದ ಭಾರತ್ ಜೋಡೊ ಯಾತ್ರೆ : ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಸಾಥ್

08:38 AM Oct 15, 2022 | Team Udayavani |

ಬಳ್ಳಾರಿ: ಎಐಸಿಸಿ ರಾಹುಲ್‌ ಗಾಂಧಿ ಕೈಗೊಂಡಿರುವ ಭಾರತ್ ಜೋಡೊ ಯಾತ್ರೆ ಶುಕ್ರವಾರ ಸಂಜೆ ಗಣೆನಾಡು ಬಳ್ಳಾರಿ ತಲುಪಿದ್ದು, ಶನಿವಾರ ಬೆಳಗ್ಗೆ ನಗರ ಪ್ರವೇಶವಾಯಿತು.

Advertisement

ತಾಲೂಕಿನ ಗಡಿ ಗ್ರಾಮ ಹಲಕುಂದಿ ವೀರಭದ್ರೇಶ್ವ ಮಠದ ಬಳಿ ವ್ಯವಸ್ಥೆ ಮಾಡಿದ್ದ ಕ್ಯಾಂಪ್ ನಲ್ಲಿ ತಂಗಿದ್ದ ರಾಹುಲ್ ಗಾಂಧಿಯವರು ಬೆಳಗ್ಗೆ 6.38ಕ್ಕೆ ಹೊರಬರುತ್ತಿದ್ದಂತೆ ಪಾದಯಾತ್ರೆ ಆರಂಭವಾಯಿತು. ಪಕ್ಷದ ಹಿರಿಯರು, ಕಿರಿಯರೊಂದಿಗೆ ಅತ್ಯಂತ ಉತ್ಸಾಹದಿಂದ ಹೆಜ್ಜೆ ಹಾಕಿದ ರಾಹುಲ್ ಗಾಂಧಿ, ರಸ್ತೆಯ ಎರಡೂ ಬದಿ ನಿಂತಿದ್ದ ಜನರತ್ತ ಕೈಬೀಸುತ್ತಾ ಮುಂದೆ ಸಾಗಿದರು. ಮಧ್ಯದಲ್ಲಿ ಸ್ಥಳೀಯ ಯುವಕರು, ರಾಹುಲ್ ಸರ್ ರಾಹುಲ್ ಸರ್ ಎಂದು ಕೂಗುತ್ತಿದ್ದ ಧ್ವನಿ ಕೇಳಿಸಿಕೊಂಡ ರಾಹುಲ್ ಗಾಂಧಿಯವರು, ಕೆಲವರನ್ನು ತನ್ನ ಭದ್ರತೆಯ ನಡುವೆಯೂ ಒಳಗೆ ಕರೆದುಕೊಂಡು ಅವರೊಂದಿಗೆ ಫೋಟೊ ತೆಗೆಸಿ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪಾದಯಾತ್ರೆಯಲ್ಲಿ ಎಐಸಿಸಿ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ಮಾಜಿ ಸಂಸದ ಉಗ್ರಪ್ಪ, ವಿರೋಧಪಕ್ಷದ ಉಪನಾಯಕ ಯು.ಟಿ.ಖಾದರ್ ಸೇರಿದಂತೆ ಎಐಸಿಸಿ, ಕೆಪಿಸಿಸಿಯ ಸಾವಿರಾರು ಮುಖಂಡರು ಭಾಗವಹಿಸಿದ್ದರು.

ಇದನ್ನೂ ಓದಿ : ಮುಂಬೈ: ಸಾಲ ನೀಡದಿದ್ದರೆ, ಅಧ್ಯಕ್ಷರನ್ನು ಅಪಹರಿಸಿ ಬ್ಯಾಂಕ್ ಸ್ಫೋಟಿಸುವುದಾಗಿ ಬೆದರಿಕೆ ಕರೆ

Advertisement

Udayavani is now on Telegram. Click here to join our channel and stay updated with the latest news.

Next