Advertisement

ಜ.8: ಉಡುಪಿ ಜಿಲ್ಲೆಯಲ್ಲೂ ಮುಷ್ಕರ ; 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ

10:06 AM Jan 07, 2020 | Hari Prasad |

ಉಡುಪಿ: ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು 50 ಕ್ಕೂ ಹೆಚ್ಚು ಸ್ವತಂತ್ರ ನೌಕರ ಸಂಘಟನೆಗಳು ನೀಡಿರುವ ಜ. 8ರಂದು ಅಖಿಲ ಭಾರತ ಮುಷ್ಕರ ಉಡುಪಿ ಜಿಲ್ಲೆಯಲ್ಲಿಯೂ ನಡೆಯಲಿದೆ.

Advertisement

ಈಗಾಗಲೇ ಸಿಐಟಿಯು, ಎಐಟಿಯುಸಿ, ಇಂಟಕ್‌, ಬ್ಯಾಂಕ್‌ಗಳು, ಎಲ್‌ಐಸಿ, ಬಿಎಸ್‌ಎನ್‌ಎಲ್‌, ಹಲವಾರು ಯೂನಿಯನ್‌ಗಳು, ಸಿಟಿ ಬಸ್ಸು, ಆಟೋರಿಕ್ಷಾ ಯೂನಿಯನ್‌, ಅಂಗನವಾಡಿ, ಅಕ್ಷರ ದಾಸೋಹ ಸಿಬಂದಿ, ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹೆಂಚು ಕಾರ್ಮಿಕರು ಸಹಿತ ಜಿಲ್ಲೆಯಲ್ಲಿ 20ಸಾವಿರಕ್ಕೂ ಅಧಿಕ ಮಂದಿ ಮುಷ್ಕರದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ ಎಂದು ಸಂಘಟಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಜ.8ರಂದು ಬೆಳಗ್ಗೆ 9 ಗಂಟೆಗೆ ನಗರದ ಬೋರ್ಡ್‌ ಹೈಸ್ಕೂಲಿನಿಂದ ಅಜ್ಜರಕಾಡುವರೆಗೆ ಬೃಹತ್‌ ಮೆರವಣಿಗೆ ನಡೆಯಲಿದೆ. ಅನಂತರ ಅಲ್ಲಿ ಪ್ರತಿಭಟನ ಸಭೆ ನಡೆಯಲಿದೆ. ಈ ವೇಳೆಯೂ ನೂರಾರು ಮಂದಿ ಭಾಗವಹಿಸಲಿದ್ದಾರೆ.

ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಬೆಂಬಲ
ಈ ಮುಷ್ಕರ ದೇಶಪ್ರೇಮಿ ನಡೆಯಾಗಿದ್ದು ಸಾರ್ವಜನಿಕ ಉದ್ದಿಮೆಗಳನ್ನು ರಕ್ಷಿಸುವ ಕರೆ ನೀಡಿದೆ. ಸಾಕಷ್ಟು ಆದಾಯವಿಲ್ಲದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಸಂದರ್ಭದಲ್ಲಿ ಸ್ವಾಮಿನಾಥನ್‌ ಆಯೋಗದ ಶಿಫಾರಸು ಜಾರಿ ಮಾಡಬೇಕೆಂದು ಒತ್ತಾಯಿಸಿದೆ. ಬಿಜೆಪಿ ಸರಕಾರವು ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸು ಜಾರಿ ಮಾಡುವುದಾಗಿ ಭರವಸೆ ನೀಡಿದ್ದರೂ ಜಾರಿ ಮಾಡಿಲ್ಲ.

ದೇಶದ ಎಲ್ಲ ನಾಗರಿಕರಿಗೂ ಪೆನ್ಷನ್‌ ನೀಡಬೇಕೆಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿದ್ದು, ಕನಿಷ್ಟ ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿವೆ. ಆಗ ಜನರ ಆದಾಯ ಹೆಚ್ಚುವುದರಿಂದ ವ್ಯಾಪಾರ – ವಹಿವಾಟು ಹೆಚ್ಚುತ್ತದೆ. ರಾಷ್ಟ್ರೀಯ ಹೆದ್ದಾರಿ, ಮರಳು, ನಿವೇಶನ ಮೊದಲಾದ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕಾರ್ಮಿಕ ಸಂಘಟನೆಗಳು ಬೇಡಿಕೆ ಇಟ್ಟಿದ್ದು ಸಮಯೋಚಿತವಾಗಿದೆ. ಆದ್ದರಿಂದ ಎಲ್ಲ ಕಾರ್ಮಿಕರು ಈ ಮುಷ್ಕರವನ್ನು ಯಶಸ್ವಿಗೊಳಿಸಿ ಹಾಗೇ ಜನರು ಬೆಂಬಲ ನೀಡಬೇಕೆಂದು ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅವರು ಮನವಿ ಮಾಡಿದ್ದಾರೆ.

Advertisement

ಪ್ರಮುಖ ಬೇಡಿಕೆಗಳು
– ಕನಿಷ್ಠ ವೇತನ 24 ಸಾವಿರಕ್ಕೆ ಹೆಚ್ಚಿಸಬೇಕು.
– ಎನ್‌ಆರ್‌ಸಿ, ಸಿಎಎ ಸ್ಥಗಿತಗೊಳಿಸಬೇಕು.
– 44 ಕಾರ್ಮಿಕ ಕಾಯ್ದೆಗಳನ್ನು ವಿಲೀನಗೊಳಿಸಿ 4 ಮಸೂದೆ ಮಂಡಿಸುವುದನ್ನು ಕೈಬಿಡಬೇಕು.
– ಬ್ಯಾಂಕುಗಳ ಖಾಸಗೀಕರಣ ನಿಲ್ಲಿಸಬೇಕು.

ಇವುಗಳಿಗೆ ವಿನಾಯಿತಿ
– ತುರ್ತು ಸೇವೆಗಳು
– ದಿನಪತ್ರಿಕೆ ವಾಹನಗಳು

ಜನಜೀವನದ ಮೇಲೆ ಬೀಳುತ್ತಾ ಪರಿಣಾಮ?
ಜಿಲ್ಲೆಯಲ್ಲಿ ಕೇವಲ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಕಾರಣಕ್ಕೆ ಜನಜೀವನ ಸಹಜವಾಗಿರುವ ಸಾಧ್ಯತೆಗಳಿವೆ. ಸಿಟಿ, ಎಕ್ಸ್‌ಪ್ರೆಸ್‌ ಸಹಿತ ಸರಕಾರಿ ಬಸ್ಸುಗಳ ಸೇವೆ ಎಂದಿನಂತೆ ಇರುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳಿಗೂ ಮುಷ್ಕರದಿಂದ ಯಾವುದೇ ಪರಿಣಾಮ ಬೀರದು ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next