Advertisement

ಭಾರತ್ ಬಂದ್: ಕಲಬುರಗಿಯಲ್ಲಿ ರೈತ ಸಂಘಟನೆಗಳ ಪ್ರತಿಭಟನೆ, ಸಾರಿಗೆ ಬಸ್ ಸಂಚಾರ ಸ್ಥಗಿತ

09:40 AM Dec 08, 2020 | keerthan |

ಕಲಬುರಗಿ: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಭಾರತ್ ಬಂದ್ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ ವಿವಿಧ ರೈತ ಸಂಘಟನೆಗಳ ಪ್ರತಿಭಟನೆ ಕೈಗೊಂಡಿವೆ.

Advertisement

ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ಮುಖ್ಯ ರಸ್ತೆ ತಡೆ ನಡೆಸಿ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದರಿಂದ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಗಳ ಸಂಚಾರ ರದ್ದು ಮಾಡಲಾಗಿದೆ. ನಿಲ್ದಾಣದಲ್ಲಿ ಬಸ್ ಗಳು ಇಲ್ಲದೇ ಪ್ರಯಾಣಿಕರು ಸಮಸ್ಯೆ ಪಡುವಂತೆ ಆಗಿದೆ.

ಇದನ್ನೂ ಓದಿ:ಭಾರತ್ ಬಂದ್: ಮಂಗಳೂರಿಗೆ ತಟ್ಟದ ಬಂದ್ ಬಿಸಿ, ವಾಹನ ಸಂಚಾರ ಎಂದಿನಂತೆ

ನಗರದಲ್ಲಿ ಬೆಳಿಗ್ಗೆಯಿಂದ ವಾಹನ ಸಂಚಾರ ವಿರಳವಾಗಿದ್ದು, ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ನಿಲ್ದಾಣ ಸುತ್ತಮುತ್ತಲೂ ಆಟೋ ಸಂಚಾರ ಸಹ ರದ್ದಾಗಿದೆ. ಕೆಲವೆಡೆ ಅಂಗಡಿ-ಮುಂಗಟ್ಟುಗಳು ಬಂದ್ ಆಗಿವೆ. ಕೇಂದ್ರ ಬಸ್ ನಿಲ್ದಾಣ ಹೊರತುಪಡಿಸಿ ಉಳಿದೆಡೆ ಜನ ಮತ್ತು ವಾಹನ ಸಂಚಾರ ಸಹಜವಾಗಿದೆ.

Advertisement

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಹೋರಾಟಕ್ಕೆ ಕರೆ ಕೊಡಲಾಗಿದ್ದು, ಕಾಂಗ್ರೆಸ್, ಜೆಡಿಎಸ್ ಮತ್ತು ಕನ್ನಡ ಪರ ಸಂಘಟನೆಗಳ ಬೆಂಬಲ ಸೂಚಿಸಿ ಬಂದ್ ನಲ್ಲಿ ಭಾಗಿಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next