Advertisement

ಶ್ರೀರಂಗಪಟ್ಟಣದಲ್ಲಿ ಭಾರತ್ ಬಂದ್ ಬಿಸಿ: ಹೆದ್ದಾರಿ ತಡೆದು ಆಕ್ರೋಶ

01:36 PM Sep 27, 2021 | Team Udayavani |

ಶ್ರೀರಂಗಪಟ್ಟಣ :ಮೈಸೂರು ಮತ್ತು ಬೆಂಗಳೂರು ರಾಜ್ಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ವಿವಿಧ ಕನ್ನಡ ಪರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದೊಂದಿಗೆ ರೈತ ಸಂಘ  ಮುಖಂಡರು ಜಮಾಯಿಸಿ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು.

Advertisement

ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ,ತಾಲೂಕು ಅಧ್ಯಕ್ಷರಾದ ಕೃಷ್ಣೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಮುಕುಂದ ನೇತೃತ್ವದಲ್ಲಿ ಚಾಲನೆ. ಪ್ರತಿಭಟನೆಗೆ ಚಾಲನೆ ನೀಡಿದರು.

ಸುಮಾರು 30 ನಿಮಿಷಗಳ ಕಾಲ ರಸ್ತೆ ತಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ನಿರಂತರ ಘೋಷಣೆ ಕೂಗುತ್ತಾ.ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಹಿನ್ನಲೆಯಲ್ಲಿ ಕೆಲಸಮಯ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಮುನ್ನೆಚ್ಚರಿಕೆಯಾಗಿ ನೂರಾರು ಪೋಲೀಸರು ಭಿಗಿ ಭದ್ರತೆಯೊಂದಿಗೆ ಪ್ರತಿಭಟನಾಗಾರರ ಸುತ್ತಲೂ ಆವರಿಸಿದ್ದರು.

ಇದನ್ನೂ ಓದಿ:ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಸೇರಿದಂತೆ ಯಾರಿಂದಲೂ ಸಾಧ್ಯವಿಲ್ಲ: ದೇವೇಗೌಡ

Advertisement

ನಂತರ ಮಾತನಾಡಿದ ತಾಲೂಕು ರೈತ ಸಂಘದ ಮಂಜೇಶ್ ಗೌಡ ಭೂ ಸುಧಾರಣೆ ಕಾಯ್ದೆ. ಎಪಿಎಂಸಿ ಕಾಯ್ದೆ. ಸೇರಿದಂತೆ ರೈತಾಪಿ ವರ್ಗಕ್ಕೆ ಮಾರಕವಾಗುವ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸುವಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಶತಸಿದ್ಧ .ಈಗಲೇ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ದಿನ ಪದಾರ್ಥಗಳ ಮೇಲೆ ಬೆಲೆ ಏರಿಕೆ ಏರಿಸಿ ರೈತರನ್ನು ಬೀದಿಗೆ ಬರುವಂತೆ ಮಾಡಿರುವ ಸರ್ಕಾರ ವಿರುದ್ಧ ನಡೆಸುತ್ತಿರುವ ಈ ದಿನದ ಭಾರತ್ ಬಂದ್ ಗೆ ಸಾರ್ವಜನಿಕರು ನೈತಿಕ ಬೆಂಬಲ ವ್ಯಕ್ತಪಡಿಸಿ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ನಿರಂತರ ಘೋಷಣೆ ಕೂಗುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತ ಸಂಘ ತಾಲೂಕು ಅಧ್ಯಕ್ಷ ಶ್ರೀಕಂಠಯ್ಯ, ಕಾಂಗ್ರೇಸ್ ಮುಖಂಡ ದರ್ಶನ್ ಲಿಂಗರಾ,ದಲಿತ ಸಂಘಟನೆಯ ಕುಬೇರಪ್ಪ,ವಕೀಲ ವೆಂಕಟೇಶ್, ನಗುವನಹಳ್ಳಿ ಶಿವಸ್ವಾಮಿ,ಕರವೇ ಸ್ವಾಮೀಗೌಡ, ಮಹದೇವಸ್ವಾಮಿ ನಗುವನಹಳ್ಳಿ, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ಮೋಹನ,ರವಿಚಂದ್ರಕೆ.ಟಿ ರಂಗಯ್ಯ,ಕೆಂಪೇಗೌಡಯುವ ಒಕ್ಕಲಿಗವೇದಿಕೆ ಮಹೇಶ್, ಪುಟ್ಟೇಗೌಡ. ರೈತಸಂಘ ಹಿರಿಯ ಮುಖಂಡರಾದ ಪಾಂಡು, ನಾಗೇಂದ್ರಸ್ವಾಮಿ, ಮೇಳಾಪುರ ಸ್ವಾಮೀಗೌಡ, ಸೇರಿದಂತೆ ಇತರರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next