Advertisement
ಆ್ಯಶ್ಡೆನ್ ಸಂಸ್ಥೆ 20 ವರ್ಷಗಳಿಂದ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಸ್ಥಿತ್ಯಂತರಗಳಿಗೆ ಎದುರಾಗಿ ಅಳವಡಿಕೆಯಾಗುತ್ತಿರುವ ವಿವಿಧ ಪರಿಹಾರಗಳನ್ನು ಬೆಂಬಲಿಸುತ್ತ ಬಂದಿದೆ. 2021ರ ಆ್ಯಶ್ಡೆನ್ ಪ್ರಶಸ್ತಿಗೆ 800ಕ್ಕೂ ಅಧಿಕ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅಂತಿಮ ಪಟ್ಟಿಗೆ 38 ಸಂಸ್ಥೆಗಳು ಆಯ್ಕೆಯಾಗಿದ್ದು, ಬಿವಿಟಿ ಒಂದಾಗಿದೆ. ಸುಸ್ಥಿರ ಇಂಧನ, ಗ್ರಾಮೀಣ ಕೌಶಲ ವಿಭಾಗದಲ್ಲಿ ಬಿವಿಟಿಯ ಸೇವೆಯನ್ನು ಪರಿಗಣಿಸಲಾಗಿದ್ದು, ನವೆಂಬರ್‌ನಲ್ಲಿ ಪ್ರಶಸ್ತಿ ಪ್ರಕಟವಾಗಲಿದೆ.
ಟಿ.ಎ. ಪೈ ಅವರಿಂದ ಸ್ಥಾಪಿತವಾದ ಬಿವಿಟಿಯು ಮಹಿಳಾ ಸಶಕ್ತೀಕರಣ ಮತ್ತು ಸುಸ್ಥಿರ ಇಂಧನ ಆಧಾರಿತ ಗ್ರಾಮೀಣ ಅಭಿವೃದ್ಧಿಗೆ ತಕ್ಕುದಾದ ಕೌಶಲಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಪಾಲುದಾರರಿಗೆ ಮತ್ತು ಅಂತಿಮ ಬಳಕೆದಾರರಿಗೆ ನೇರವಾಗಿ ತರಬೇತಿ ನೀಡುವ ಮಾದರಿಯನ್ನು ದೇಶಾದ್ಯಂತ ವಿಸ್ತರಿಸಿ, ಪುನರಾವರ್ತಿಸಿ, ಸ್ಥಾಪಿಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನ ನಡೆಸುವುದು ನಮ್ಮ ಧ್ಯೇಯ ಎಂದು ಬಿವಿಟಿಯ ವ್ಯವಸ್ಥಾಪಕ ಟ್ರಸ್ಟಿ ಟಿ. ಅಶೋಕ್ ಪೈ ಹೇಳುತ್ತಾರೆ.