Advertisement

ಶಿರಸಿ: ಭಾರತ್ ಸ್ಕೌಟ್ ಮತ್ತು ಗೈಡ್ಸ್- ಗೀತಗಾಯನ ಸ್ಪರ್ಧೆ

09:02 AM Sep 04, 2022 | Team Udayavani |

ಶಿರಸಿ:  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕದ ಸ್ಥಳೀಯ ಸಂಸ್ಥೆ ವತಿಯಿಂದ ಅಝಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮುಖ್ಯ ಆಯುಕ್ತ ಎಂ.ಎಂ.ಭಟ್ಟ ಕಾರೆಕೊಪ್ಪ ವಹಿಸಿದ್ದರು. ಶಿರಸಿ ತಾಲೂಕು ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಶ್ರೀಪಾದ ರಾಯ್ಸದ್ ಸಭಾ ಕಾರ್ಯಕ್ರಮ  ಉದ್ಘಾಟಿಸಿದರು. ನಿರ್ಣಾಯಕರಾಗಿ ಮಮತಾ ಹೆಗಡೆ, ಉದಯ ಭಟ್ಟ ಹಾಗೂ ರಾಜೇಶ್ವರಿ ಹೆಗಡೆ ಕಾರ್ಯನಿರ್ವಹಿಸಿದರು.

ಗೀತಗಾಯನ ಸ್ಪರ್ಧೆಯ ಫಲಿತಾಂಶ:

ಸ್ಕೌಟ್ಸ್ ವಿಭಾಗ: ಪ್ರಥಮ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಶಿರಸಿ, ದ್ವಿತೀಯ, ಸ.ಹಿ.ಪ್ರಾ.ಶಾಲೆ, ಯಡಳ್ಳಿ, ತೃತೀಯ ಕಲ್ಲಿ.

ಗೈಡ್ಸ್ ವಿಭಾಗ: ಪ್ರಥಮ ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ, ದ್ವಿತೀಯ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಿರಸಿ, ತೃತೀಯ ಸರಕಾರಿ ಉರ್ದು ಪ್ರೌಢಶಾಲೆ ಶಿರಸಿ

Advertisement

ಸಮಾಧಾನಕರ: ಎಂ.ಡಿ.ಆರ್.‌ ಎಸ್. ಕಲ್ಲಿ ಹಾಗೂ ಹೆಚ್.ಪಿ.ಎಸ್. ಯಡಳ್ಳಿಗೆ ಲಭಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಭಟ್ಟ, ಉಪಾಧ್ಯಕ್ಷ ಅಶೋಕ ಹೆಗಡೆ, ಕಾರ್ಯಕಾರಿ ಸಮಿತಿ ಛೇರಮನ್ ಸುರೇಶ ಪಟಗಾರ, ತಾಲೂಕ ಜಂಟಿ ಕಾರ್ಯದರ್ಶಿ ಯಮುನಾ ಪೈ, ಸಹಾಯಕ ರಾಜ್ಯ ಸಂಘಟನಾ ಆಯುಕ್ತ ವಿರೇಶ ಮಾದರ ಉಪಸ್ಥಿತರಿದ್ದರು. ‌

ಜಿ. ಎಸ್. ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸ್ಥಳೀಯ ಸಂಸ್ಥೆ ಶಿರಸಿ ಕಾರ್ಯದರ್ಶಿ ಎನ್ ಎಸ್ ಭಾಗ್ವತ ಸಂಘಟಿಸಿದರು. 10 ಶಾಲೆಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next