ಬೆಂಗಳೂರು: ಭಾರತ ಜೋಡೋ ಯಾತ್ರೆಗೆ ಜನ ಸಾಮಾನ್ಯರಿಂದ ಪ್ರತಿಕ್ರಿಯೆ ಬರುತ್ತಿಲ್ಲ. ಕಷ್ಟ ಪಟ್ಟು ಬೇರೆ ಬೇರೆ ತಾಲೂಕಿನಿಂದ ಜನರನ್ನು ತಂದು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಹುಲ್ ಗಾಂಧಿ ಜತೆ ಪಾದಯಾತ್ರೆ ಮಾಡುತ್ತಿರುವವರು ಬೆರಳಣಿಕೆಯಷ್ಟು. ಇದೊಂಥರಾ ಶೋ.. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ ಮಾಡುತ್ತಿರುವ ಡ್ರಾಮಾ ಎಂದು ಟೀಕಿಸಿದರು.
ರಾಜ್ಯದ ಬಗ್ಗೆ ಹಲವು ವಿಚಾರ ಮಾತನಾಡುತ್ತಿದ್ದಾರೆ. ನಾವು ಸಣ್ಣ ಮಟ್ಟದ ರಾಜಕಾರಣ ಮಾಡಲ್ಲ. ಪಾದಯಾತ್ರೆ ಮಾಡಿದರೆ ಮಾಡಲಿ ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಕೀಳುಮಟ್ಟದ ಮಾತುಗಳ ಮೂಲಕ ಅಧಿಕಾರಿಗಳನ್ನು ಹೆದರಿಸೋದು ಸರಿಯಲ್ಲ, ಅದು ನಡೆಯಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯ ಮಾಡ್ತಿದ್ದಾರೆ ಎಂದು ತಿಳಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಸೋನಿಯಾಗಾಂಧಿ-ರಾಹುಲ್‌ಗಾಂಧಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇಲ್ಲಿ ಡಿ.ಕೆ.ಶಿವಕುಮಾರ್ ಬೇಲ್‌ನಲ್ಲಿ ಇದ್ದಾರೆ. ಇವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಸೋಲು ಖಚಿತ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಸಿದ್ದರಾಮಯ್ಯ ಅವರದು ಕನಸು ಅಷ್ಟೇ ಎಂದು ಲೇವಡಿ ಮಾಡಿದರು.