ಅಧಿಕೃತ ದಾಖಲೆಗಳಲ್ಲಿ “ಭಾರತ’ ಎಂಬ ಹೆಸರನ್ನು ಬಳಕೆ ಮಾಡುವುದರಿಂದ ಕಾನೂನ್ಮಾಕವಾಗಿ ಯಾವುದೇ ಸಮಸ್ಯೆ ಉಂಟಾಗಲಾರದು. “ಇಂಡಿಯಾ’, “ಭಾರತ’ ಎಂಬ ಹೆಸರುಗಳು ಈಗಾಗಲೇ ಬಳಕೆಯಲ್ಲಿ ಇವೆ. ಪಾಸ್‌ಪೋರ್ಟ್‌ನಲ್ಲಿ “ರಿಪಬ್ಲಿಕ್ ಆಫ್ ಇಂಡಿಯಾ’ ಮತ್ತು “ಭಾರತ್ ಸರಕಾರ್’ ಎಂದು ಹಿಂದಿಯಲ್ಲಿ ಮುದ್ರಿತವಾಗಿದೆ. ಹೀಗಿರುವುದರಿಂದ ಸಾಂವಿಧಾನಿಕ ಅಥವಾ ಕಾನೂನಾತ್ಮಕ ಅಂಶಗಳನ್ನು ಉಲ್ಲಂ ಸುವ ವಿಚಾರ ಉದ್ಭವವಾಗುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement
ಕೋರಿಕೆ ಬಂದರೆ ಪರಿಗಣನೆ: ವಿಶ್ವಸಂಸ್ಥೆದೇಶದಲ್ಲಿ ಹೆಸರು ಬದಲಾವಣೆಯ ಕೋಲಾಹಲ ಬಿರುಸಾಗಿರುವಂತೆಯೇ ವಿಶ್ವಸಂಸ್ಥೆಯಿಂದ ಅಚ್ಚರಿಯ ಪ್ರತಿಕ್ರಿಯೆ ಹೊರಬಿದ್ದಿದೆ. ಭಾರತ ಸರಕಾರದ ವತಿಯಿಂದ ಹೆಸರು ಬದಲಾವಣೆಗೆ ಕೋರಿಕೆ ಸಲ್ಲಿಕೆಯಾದರೆ ಅದನ್ನು ಪರಿಗಣಿಸುತ್ತೇವೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರೆಸ್ ಅವರ ಉಪ ವಕ್ತಾರ ಫರ್ಹಾನ್ ಹಕ್ ಹೇಳಿದ್ದಾರೆ.