Advertisement

ಬಿಇಎಲ್‌: ನಿವ್ವಳ ವಹಿವಾಟು ಶೇ.23 ಹೆಚ್ಚಳ

06:00 AM Aug 01, 2018 | Team Udayavani |

ಬೆಂಗಳೂರು: ರಕ್ಷಣಾ ವಲಯದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆ ಎನಿಸಿರುವ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಪ್ರಸಕ್ತ 2018- 2019ನೇ ಸಾಲಿನ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದಲ್ಲಿ 2,077 ಕೋಟಿ ರೂ. ನಿವ್ವಳ ವಹಿವಾಟು ನಡೆಸಿದ್ದು, ಕಳೆದ ವರ್ಷ ಇದೇ ಅವಧಿಗೆ
ಹೋಲಿಸಿದರೆ ಶೇ.23ರಷ್ಟು ಬೆಳವಣಿಗೆ ಸಾಧಿಸಿದೆ.  ಬಿಇಎಲ್‌ ಕಳೆದ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ 1,694.55 ಕೋಟಿ ರೂ. ನಿವ್ವಳ ವಹಿವಾಟು ನಡೆಸಿತ್ತು. ಬಿಇಎಲ್‌ ನಿವ್ವಳ ವಹಿವಾಟಿನಲ್ಲಿ ಮಾತ್ರವಲ್ಲದೆ ತೆರಿಗೆ ಪೂರ್ವ ಲಾಭ ಹಾಗೂ ತೆರಿಗೆ ನಂತರದ ಲಾಭದಲ್ಲೂ ಹೆಚ್ಚಳ ಸಾಧಿಸಿರುವುದು ಕಂಡುಬಂದಿದೆ.

Advertisement

ಬಿಇಎಲ್‌ ಪ್ರಸಕ್ತ ವರ್ಷದ ಮೊದಲ ಮೂರು ತಿಂಗಳಲ್ಲಿ 250.21 ಕೋಟಿ ರೂ. ತೆರಿಗೆ ಪೂರ್ವ ಲಾಭ (ಪ್ರಾಟ್‌ ಬಿಫೋರ್‌ ಟ್ಯಾಕ್ಸ್‌) ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 179.27 ಕೋಟಿ ರೂ. ತೆರಿಗೆ ಪೂರ್ವ ಲಾಭ ಗಳಿಸಿದ್ದು, ಈ ಬಾರಿ ಶೇ.40ರಷ್ಟು ಹೆಚ್ಚಳ ಕಂಡಿದೆ. ಹಾಗೆಯೇ ತೆರಿಗೆ ನಂತರದ ಲಾಭ (ಪ್ರಾಟ್‌ ಆಫ್ಟರ್‌ ಟ್ಯಾಕ್ಸ್‌) ರೂಪದಲ್ಲಿ 179.73 ಕೋಟಿ ರೂ. ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 125.32 ಕೋಟಿ ರೂ. ಗಳಿಸಿತ್ತು. ಆ ಮೂಲಕ ಶೇ.43ರಷ್ಟು ಬೆಳವಣಿಗೆ ದಾಖಲಿಸಿದೆ. ಜು.1ರವರೆಗಿನ ಮಾಹಿತಿ ಪ್ರಕಾರ ಬಿಇಎಲ್‌ಗೆ 41,645 ಕೋಟಿ ರೂ. ಮೊತ್ತದ ಮುಂಗಡ ಬೇಡಿಕೆ ಸಲ್ಲಿಕೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next