Advertisement

ಗ್ರಾಹಕರ ಸಂತೃಪ್ತಿಯೇ ನಮ್ಮ ಮುಖ್ಯ ಉದ್ದೇಶ: ಯು. ಶಿವಾಜಿ ಪೂಜಾರಿ

09:56 AM Jan 25, 2022 | Team Udayavani |

ಮುಂಬಯಿ: ಭಾರತ್‌ ಕೋ- ಆಪರೇಟಿವ್‌ ಬ್ಯಾಂಕ್‌ ಗ್ರಾಹಕರಿಗೆ ಅತ್ಯಂತ ಪ್ರಿಯವಾದ ಬ್ಯಾಂಕ್‌ ಆಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಬ್ಯಾಂಕ್‌ನ ಕಾರ್ಯನಿರ್ವಹಣೆಗಳ ಬಗ್ಗೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸುವಾಗ ನಮಗೂ ಸಂತೋಷವಾಗುತ್ತದೆ. ಗ್ರಾಹಕರ ಸಂತೃಪ್ತಿಯೇ ನಮ್ಮ ಮುಖ್ಯ ಉದ್ದೇಶವಾಗಿದೆ. ಗ್ರಾಹಕರ ಸೇವೆಯೇ ಬ್ಯಾಂಕ್‌ನ ಧ್ಯೇಯವಾಗಿರುತ್ತದೆ ಎಂದು ಭಾರತ್‌ ಕೋ- ಆಪರೇಟಿವ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಯು. ಶಿವಾಜಿ ಪೂಜಾರಿ ತಿಳಿಸಿದರು.

Advertisement

ಪ್ರತಿಷ್ಠಿತ ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ ಲಿ. ವಡಾಲ ಶಾಖೆ ಜ. 24ರಂದು ಬೆಳಗ್ಗೆ ವಡಾಲದ ಜಿ. ಡಿ. ಅಂಬೇಡ್ಕರ್‌ ರಸ್ತೆಯಲ್ಲಿರುವ ಶ್ರೀರಾಮ್‌ ರಾಮ್‌ ಇಂಡಸ್ಟ್ರಿಯಲ್‌ ಎಸ್ಟೇಟ್‌ ಕೋ-ಆಪರೇಟಿವ್‌ ಸೊಸೈಟಿ ಲಿ., ಗ್ರೌಂಡ್‌ ಫ್ಲೋರ್‌ ಎ-2ರಲ್ಲಿ ನೂತನವಾಗಿ ಸಕಲ ಸೌಕರ್ಯಗಳಿಂದ ಆಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಿಸಲಾದ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.

ಬ್ಯಾಂಕ್‌ನ ನಿರ್ದೇಶಕ ಸೂರ್ಯಕಾಂತ್‌ ಜೆ. ಸುವರ್ಣ ಎಟಿಎಂ ಕೊಠಡಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ದೀಪ ಪ್ರಜ್ವಲಿಸಿ ಬ್ಯಾಂಕ್‌ನ ವ್ಯವಹಾರಗಳಿಗೆ ಚಾಲನೆ ನೀಡಿದರು.

ಅತಿಥಿಯಾಗಿದ್ದ ಉದ್ಯಮಿ ಮೋಹನ್‌ ಶೆಟ್ಟಿ  ಮಾತನಾಡಿ, ಭಾರತ್‌ ಬ್ಯಾಂಕ್‌ ಎಂದರೆ ಲಕ್ಷ್ಮೀ ದೇವಿಯ ಗುಡಿ ಇದ್ದಂತೆ. ಇಲ್ಲಿ  ಪ್ರೀತಿ, ವಿಶ್ವಾಸ ಎಲ್ಲ ಇದೆ. ನಾನು ಅನೇಕ ವರ್ಷಗಳಿಂದ ಭಾರತ್‌ ಬ್ಯಾಂಕ್‌ನ ಗ್ರಾಹಕನಾಗಿದ್ದೇನೆ. ನನಗೆ ಬ್ಯಾಂಕ್‌ನಿಂದ ತುಂಬಾ ಸಹಕಾರಗಳು ದೊರೆತಿವೆ. ಇದಕ್ಕೆ ಕಾರಣ ಇಲ್ಲಿನ ಪ್ರಬಂಧಕರು ಹಾಗೂ ಸಿಬಂದಿ ವರ್ಗದ ನಗುಮುಖದ ಸೇವೆಯಾಗಿದೆ ಎಂದು ತಿಳಿಸಿದರು.

ಅತಿಥಿಗಳಾಗಿ ಸಂತೋಷ್‌ ಬಾವಿಯಂಕರ್‌, ಹರೀಶ್‌ ಪೂಜಾರಿ, ನೋಮನ್‌ ಸುವರ್ಣ, ರಾಜ, ಪ್ರಭಾಕರ್‌ ಗಹನ್‌, ಸಂಜೀವ ಶೆಟ್ಟಿ ಮೊದಲಾದವರು ಪಾಲ್ಗೊಂಡು ಸಂದಭೋìಚಿತವಾಗಿ ಮಾತನಾಡಿ ಶುಭ ಹಾರೈಸಿದರು.

Advertisement

ಬ್ಯಾಂಕ್‌ನ ನಿರ್ದೇಶಕರಾದ ಜ್ಯೋತಿ ಕೆ. ಸುವರ್ಣ, ಗಂಗಾಧರ್‌ ಜೆ. ಸುವರ್ಣ, ಸೂರ್ಯ ಕಾಂತ್‌ ಜೆ. ಸುವರ್ಣ, ಪುರುಷೋತ್ತಮ ಕೋಟ್ಯಾನ್‌, ಚೇರ್ಮನ್‌ ಆಫ್‌ ಬಿಒಎಂ ಡಿ. ಬಿ. ಅಮೀನ್‌, ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಸಿಇಒ ವಿದ್ಯಾನಂದ ಎಸ್‌. ಕರ್ಕೇರ, ಜತೆ ಆಡಳಿತ ನಿರ್ದೇಶಕ ದಿನೇಶ್‌ ಬಿ. ಸಾಲ್ಯಾನ್‌, ಡಿಜಿಎಂ ಪ್ರಭಾಕರ್‌ ಜಿ. ಪೂಜಾರಿ, ಅಭಿವೃದ್ಧಿ ವಿಭಾಗದ ಅಧಿಕಾರಿಗಳಾದ ಸುನಿಲ್‌ ಎ. ಗುಜರನ್‌, ಯಾದವ್‌ ಎನ್‌. ಬಂಗೇರ, ಅವೀಶ್‌ ಪೂಜಾರಿ, ಬಾಂದ್ರಾ ಪೂರ್ವ ಶಾಖೆಯ ಪ್ರಬಂಧಕ ಸೋಮನಾಥ್‌ ಪೂಜಾರಿ, ಮಾಟುಂಗ ಶಾಖೆಯ ಪ್ರಬಂಧಕ ಸುಖಾನಂದ ಎನ್‌. ಕುಕ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು.

ವಡಾಲ ಶಾಖೆಯ ಪ್ರಬಂಧಕ ಮೋಹನ್‌ ಕರ್ಕೇರ ವಂದಿಸಿದರು. ಸಹಾಯಕ ಪ್ರಬಂಧಕಿ ಜಯಶ್ರೀ ಎಸ್‌. ಬಂಗೇರ ಸ್ವಾಗತಿಸಿದರು, ನೇಹಾ ವಿ. ಅಮೀನ್‌ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನ ಕಾರ್ಯಕ್ರಮದ ಅಂಗವಾಗಿ ಉಳ್ಳೂರು ಶೇಖರ್‌ ಶಾಂತಿಯವರ ಪೌರೋಹಿತ್ಯದಲ್ಲಿ  ವಾಸ್ತು ಪೂಜೆ, ಗಣಪತಿಹೋಮ ಶ್ರೀ ಸತ್ಯನಾರಾಯಣ ಮಹಾಪೂಜೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ಜರಗಿದವು. ಗಂಗಾಧರ್‌ ಕಲ್ಲಾಡಿ ಸಹಕರಿಸಿದರು. ಬ್ಯಾಂಕ್‌ನ ಸಿಬಂದಿ ಅಭಿಷೇಕ್‌ ಜಿ. ಕೋಟ್ಯಾನ್‌ ಪೂಜಾ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು. ಸತ್ಯನಾರಾಯಣ ಪೂಜೆಯಲ್ಲಿ  ಮಮತಾ ಚಂದ್ರಶೇಖರ್‌ ದಂಪತಿ ಪೂಜಾ ವ್ರತ ಕೈಗೊಂಡರು. ಗ್ರಾಹಕರು, ಷೇರುದಾರರು ಹಿತೈಷಿಗಳು ಶುಭ ಹಾರೈಸಿದರು.

ಬ್ಯಾಂಕ್‌ ಬೆಳವಣಿಗೆಯಲ್ಲಿ  ಸರ್ವರ ಪರಿಶ್ರಮ :

ನಮ್ಮೆಲ್ಲರ ಹೆಮ್ಮೆಯ ಆರ್ಥಿಕ ಸಂಸ್ಥೆಯಾದ ಭಾರತ ಬ್ಯಾಂಕ್‌ ಬಿಲ್ಲವರ ಅಸೋಸಿಯೇಶನ್‌ ಪ್ರಾಯೋಜಕತ್ವದ ಆರ್ಥಿಕ ಸಂಸ್ಥೆ ಎನ್ನಲು ನನಗೆ ಹೆಮ್ಮೆಯಾಗುತ್ತದೆ. ಬ್ಯಾಂಕ್‌ ಬೆಳವಣಿಗೆಗೆ  ಬ್ಯಾಂಕ್‌ನ ಕಾರ್ಯಾಧ್ಯಕ್ಷರು, ನಿರ್ದೇಶಕರು, ಉನ್ನತ ಅಧಿಕಾರಿಗಳು ಹಾಗೂ ಸಿಬಂದಿಯ ಪರಿಶ್ರಮ ತುಂಬಾ ಇದೆ. ಅದಕ್ಕಾಗಿ ನಾನು ಅವರನ್ನೆಲ್ಲ ಅಭಿನಂದಿಸುತ್ತೇನೆ. -ಹರೀಶ್‌ ಜಿ. ಅಮೀನ್‌ ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ

ಸೇವೆ ಶ್ಲಾಘನೀಯ :  ಭಾರತ್‌ ಬ್ಯಾಂಕ್‌ ಅದ್ಭುತವಾದ ಬ್ಯಾಂಕ್‌ ಆಗಿದೆ. ಇಲ್ಲಿನ ಸೇವೆ ಅಪೂರ್ವವಾಗಿದೆ. ನಾನು 20 ಬ್ಯಾಂಕ್‌ಗಳಲ್ಲಿ  ವ್ಯವಹರಿಸುತ್ತೇನೆ. ಅದರಲ್ಲಿ  ಭಾರತ್‌ ಬ್ಯಾಂಕ್‌ ಒಂದನೇ ಸ್ಥಾನದಲ್ಲಿದೆ. ಈ ಬ್ಯಾಂಕ್‌ಗೆ ಯಾವುದೇ ಸಮಯದಲ್ಲಿ  ಬಂದರೂ ನಮ್ಮ ಕೆಲಸ ಸಂಪೂರ್ಣವಾಗುತ್ತಿದೆ. ಇಲ್ಲಿನ ಸಿಬಂದಿ ವರ್ಗದವರು ಇದಕ್ಕೆ ಕಾರಣ. ಅವರಿಗೆ ಉತ್ತಮವಾದ ತರಬೇತಿ ನೀಡಿರುವುದಕ್ಕಾಗಿ ನಾನು ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ.– ಕೃಷ್ಣಮೂರ್ತಿ ಶೇಷನ್‌ ಸ್ಥಳೀಯ ಉದ್ಯಮಿ

 

ಚಿತ್ರ-ವರದಿ: ಸುಭಾಷ್‌ ಶಿರಿಯ

Advertisement

Udayavani is now on Telegram. Click here to join our channel and stay updated with the latest news.

Next