Advertisement

ಕಾಂದಿವಲಿ ಪೂರ್ವ ಶಾಖೆ: ಸಂಸ್ಥಾಪನ ದಿನಾಚರಣೆ

01:25 PM Aug 28, 2021 | Team Udayavani |

ಕಾಂದಿವಲಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಂಚಾಲಿತ ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ನ 43ನೇ ಸಂಸ್ಥಾಪನ ದಿನಾಚರಣೆಯು ಆ. 21ರಂದು ಕಾಂದಿವಲಿ ಪೂರ್ವದ ಠಾಕೂರ್‌ ಕಾಂಪ್ಲೆಕ್ಸ್‌ನಲ್ಲಿರುವ ಭಾರತ್‌ ಬ್ಯಾಂಕ್‌ ಶಾಖೆಯಲ್ಲಿ ಸರಳ ರೀತಿಯಲ್ಲಿ ಜರಗಿತು.

Advertisement

ಗ್ರಾಹಕರಾದ ಉದ್ಯಮಿ, ಸಮಾಜ ಸೇವಕ ಬಾಬು ಸೀನ ಶೆಟ್ಟಿ ಕೇಕ್‌ ಕತ್ತರಿಸುವ ಮೂಲಕ ಸಂಸ್ಥಾಪನ ದಿನಾಚರಣೆಗೆ ಚಾಲನೆ ನೀಡಿದರೆ, ಯೋಗೇಶ್‌ ಭೋಜ ಶೆಟ್ಟಿ,ಮಧು ಬಾಳ ಅಗರ್ವಾಲ್‌ ಹಾಗೂ ಹಿರಿಯ ಗ್ರಾಹಕರು ದೀಪ ಪ್ರಜ್ವಲಿಸಿದರು.

ಶಾಖಾ ಪ್ರಬಂಧಕ ಹೇಮಂತ್‌ ಆರ್‌. ಅಗರ್ವಾಲ್‌ ಮಾತನಾಡಿ, ಬಿಲ್ಲವ ಸಮಾಜದ ಹಿರಿಯರು ನಮ್ಮ ಸಮಾಜಕ್ಕೆ ಒಂದು ಬ್ಯಾಂಕ್‌ ಬೇಕು ಎಂಬ ದೂರದೃಷ್ಟಿಯಿಂದ 1978ರಲ್ಲಿ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಆಯೋಜಕತ್ವದಲ್ಲಿ ಭಾರತ್‌ ಬ್ಯಾಂಕನ್ನು ಸ್ಥಾಪಿಸಿದರು.
ಪ್ರಾರಂಭದ ಕಾರ್ಯಧ್ಯಕ್ಷರಾಗಿ ವರದ್‌ ಉಳ್ಳಾಲ್‌, ಬಳಿಕ ಎನ್‌. ಎಲ್‌. ಸುವರ್ಣ ಅವರು ಬ್ಯಾಂಕ್‌ ಅನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು. ಬಳಿಕ ಜಯ ಸಿ. ಸುವರ್ಣರ ಕಾರ್ಯಾಧ್ಯಕ್ಷತೆಯಲ್ಲಿ ಭಾರತ್‌ ಬ್ಯಾಂಕ್‌ ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿತು. ಪ್ರಸ್ತುತ ಕಾರ್ಯಾಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಬಹಳಷ್ಟು ಅನುಭವ ಹೊಂದಿದವರು. ಹೊಸ ಹೊಸ ಯೋಜನೆಗಳಿಂದ ಭಾರತ್‌ ಬ್ಯಾಂಕ್‌ ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿದೆ ಎಂದರು.

ಇದನ್ನೂ ಓದಿ:ಮಹದಾಯಿ ಹಾಗೂ ಮೇಕೆದಾಟು ಯೋಜನೆ ಶೀಘ್ರದಲ್ಲಿ ಆರಂಭ: ಸಿಎಂ ಬೊಮ್ಮಾಯಿ

ಉಪ ಪ್ರಬಂಧಕರಾದ ಶಾರದಾ ಬೋಂಟ್ರ, ಅಧಿಕಾರಿಗಳಾದ ಅಶ್ವತ್ಥ್ ಪೂಜಾರಿ, ಶ್ವೇತಾ ಸಾಲ್ಯಾನ್‌, ಬಬಿತಾ ಕೋಟ್ಯಾನ್‌, ದೀಪಿಕಾ ಬಂಗೇರ, ಸವಿತಾ ಸುವರ್ಣ, ನಿಶಿತ್ವ ಕೋಟ್ಯಾನ್‌, ಅಕ್ಷತಾ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next