ಮುಂಬಯಿ: ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಸ್ವಂತಿಕೆಯ ಪ್ರತಿಷ್ಠೆಯನ್ನು ರೂಪಿಸಿಕೊಂಡಿರುವ ಭಾರತ್ ಬ್ಯಾಂಕ್ ತನ್ನ ಸ್ವಸಾಧನಾ ಗುರುತರ ಸೇವೆಗಾಗಿ ಸಹಕಾರಿ ವಲಯದ ಅದೆಷ್ಟೋ ಗೌರವಗಳಿಂದ ಗೌರವಿಸಲ್ಪಟ್ಟಿದೆ. ಗ್ರಾಹಕರ ಲಾಭಕರ ಮತ್ತು ವಿಶ್ವಾÌಸಾರ್ಹ ಸೇವೆಯೇ ನಮ್ಮ ಉದ್ದೇಶವಾಗಿದ್ದು, ಆದ್ದರಿಂದಲೇ ಭಾರತ್ ಬ್ಯಾಂಕ್ ಅಂದರೆ ಆರ್ಥಿಕ ಭದ್ರತೆಯ ಭರವಸೆ ಎಂದು ಗ್ರಾಹಕರಿಂದಲೇ ಕರೆಯಲ್ಪಡುತ್ತಿದೆ ಎಂದು ಭಾರತ್ ಕೋ. ಆಪರೇಟಿವ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ತಿಳಿಸಿದರು.
ಜು. 5ರಂದು ಪೂರ್ವಾಹ್ನ ಗೋರೆಗಾಂವ್ ಪೂರ್ವದ ಬ್ರಿಜ್ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ನಡೆದ ಭಾರತ್ ಬ್ಯಾಂಕಿನ 43ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್‌ನ ವ್ಯವಹಾರವು ಗತವರ್ಷಕ್ಕಿಂತ 1,892 ಕೋಟಿ ರೂ. ಗಳಿಗೂ ಅಧಿಕಗೊಂಡಿದ್ದು, ಅದರಂತೆ ಶೇ. 10.20ರಷ್ಟು ವ್ಯವಹಾರ ಹೆಚ್ಚಾಗಿದೆ. ನಿವ್ವಳ ಲಾಭವೂ 97.16 ಕೋ. ರೂ. ಳಾಗಿದ್ದು, ಠೇವಣಿಯೂ 1,088 ಕೋ. ರೂ. ಗಳಷ್ಟು ವೃದ್ಧಿಯಾಗಿದ್ದು ಆ ಪ್ರಕಾರ ಶೇ. 10.08 ರಷ್ಟು ಹೆಚ್ಚಾಗಿದೆ. ಮುಂಗಡ ಅಡ್ವಾನ್ಸ್ 804 ಕೋ.ರೂ. ಗಳಿಗೆ ಏರಿಕೆಯಾಗಿದ್ದು ಆ ಪ್ರಕಾರ ಶೇ. 10.35ರಷ್ಟು ಅಧಿಕಗೊಂಡಿದೆ. ಗತ ಸಾಲಿನ ವ್ಯವಹಾರದೊಂದಿಗೆ ಬ್ಯಾಂಕಿನ ಒಟ್ಟು ವ್ಯವಹಾರ ಇಪ್ಪತ್ತು ಸಾವಿರ ಕೋ. ರೂ. ಗಳಿಗೆ ದಾಟಿದ್ದು ಇದು ಬ್ಯಾಂಕಿನ ಹೆಗ್ಗುರುತಾಗಿ ಇತಿಹಾಸಪುಟ ಸೇರಿದೆ. ದ್ವಿತೀಯ ಶ್ರೇಣಿಯ ಬಂಡವಾಳವನ್ನು ಹೆಚ್ಚಿಸಲು 64.34 ಕೋ. ರೂ. ಗಳ ಅಧೀನ ಠೇವಣಿಯಾಗಿರಿಸಿ ಸಜ್ಜುಗೊಂಡಿದೆ. ಸಾಲಗಾರರ ಪುನರ್‌ವಸೂಲಿಗಾಗಿನ ಅಧಿಕಾರಿಗಳ ಪರಿಶ್ರಮದ ಹೊರತೂ ವಸೂಲಾಗದ ಸಾಲದ ಮೊತ್ತ ಹೆಚ್ಚಾಗಿದ್ದು, ಅದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗದರ್ಶನದಂತೆ ಕ್ರಮ ಅನುಸರಿಸಲಾಗಿದೆ. ಪ್ರಸ್ತುತ ವರ್ಷ ಎನ್‌ಪಿಎ ಕಡಿಮೆಗೊಳಿಸುವ ಉದ್ದೇಶದಿಂದ ಸಾಲದ ಮರುಪಾವತಿ ನಿಯಮಗಳನ್ನು ಕಟ್ಟುನಿಟ್ಟಾಗಿಸಿದ್ದೇವೆ. ಬ್ಯಾಂಕನ್ನು ಇನ್ನೂ ಸದೃಢಗೊಳಿಸುವಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ತಂಡದ ಮನೋಭಾವ ಹೆಚ್ಚಿಸಿದು,ª ಈ ಶ್ರಮದ ಫಲವು ಮುಂದಿನ ದಿನಗಳಲ್ಲಿ ಗ್ರಾಹಕರು ಅನುಭವಿಸಲಿದ್ದಾರೆ ಎಂದು ನುಡಿದು, ಬ್ಯಾಂಕಿನ ಶೆೇರುದಾರರಿಗೆ ಶೇ. 15ರಷ್ಟು ಡಿವಿಡೆಂಡ್‌ನ್ನು ಘೋಷಿಸಿದರು.
ಬ್ಯಾಂಕಿನ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಶಂಕರ ಡಿ. ಪೂಜಾರಿ ಅವರು ದೀಪ ಬೆಳಗಿಸಿ ಸಭೆಗೆ ಚಾಲನೆ ನೀಡಿದರು. ಬ್ಯಾಂಕಿನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ ಸ್ವಾಗತಿಸಿ ಸಭಾ ಕಲಾಪವನ್ನು ನಡೆಸಿ ಬ್ಯಾಂಕಿನ 2018-2019 ಹಣಕಾಸು ಸಾಲಿನ ಕಾರ್ಯಸಾಧನೆಯನ್ನು ಭಿತ್ತರಿಸಿದರು. ಪಥಸಂಸ್ಥೆಯ ವಾರ್ಷಿಕ ವ್ಯವಹಾರದ ಮಾಹಿತಿ ಪ್ರಕಟಿಸಿ ಶೇರ್ ಕ್ಯಾಪಿಟಲ್ 304.12 ಕೋ. ರೂ., ರಿಜರ್ವ್ ಫಂಡ್ 915.28 ಕೋ. ರೂ., ಫಿಕ್ಸೆಡ್ ಡಿಪಾಜಿಟ್ 9,225.91 ಕೋ. ರೂ., ಸೇವ್ಹಿಂಗ್ ಡಿಪಾಜಿಟ್ 1626.35 ಕೋ. ರೂ., ಕರೆಂಟ್ ಫಂಡ್ 759.48 ಕೋ. ರೂ., ರೆಕರಿಂಗ್ ಡಿಪಾಜಿಟ್ 211.47 ಕೋ. ರೂ., ಭಾರತ್ ಡೈಲಿ ಡಿಪಾಜಿಟ್ 59.55 ಕೋ. ರೂ. ಗಳಾಗಿದ್ದು ಗತ ಸಾಲಿನಲ್ಲಿ ಒಟ್ಟು 11,882.76 ಕೋ.ರೂ. ವ್ಯವಹಾರ ನಡೆಸಿದೆ. ಗ್ರೋಸ್ ಇನ್‌ಕಂ 1,266.33 ಕೋ. ರೂ., ವರ್ಕಿಂಗ್ ಕ್ಯಾಪಿಟಲ್ 13,749.03 ಕೋ. ರೂ. ವ್ಯವಹಾರಿಸಿದೆ. ಅಂತೆಯೇ ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ “ಎ’ ದರ್ಜೆಯ ಸ್ಥಾನದೊಂದಿಗೆ ದೃಢೀಕೃತಗೊಂಡಿದೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ಉಪಾಧ್ಯಕ್ಷರುಗಳಾದ ಹರೀಶ್ ಜಿ. ಅಮೀನ್, ಶ್ರೀನಿವಾಸ ಆರ್. ಕರ್ಕೇರ, ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಭಾರತ್ ಬ್ಯಾಂಕಿನ ಉಪಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್, ನಿರ್ದೇಶಕರಾದ ವಾಸುದೇವ ಆರ್. ಕೋಟ್ಯಾನ್, ಸಾಲ ಸಮಿತಿಯ ಕಾರ್ಯಾಧ್ಯಕ್ಷ ಕೆ. ಎನ್. ಸುವರ್ಣ, ಲೆಕ್ಕ ಪರಿಶೋಧನಾ ಸಮಿತಿಯ ಕಾರ್ಯಾಧ್ಯಕ್ಷ ಯು. ಶಿವಾಜಿ ಪೂಜಾರಿ, ಎಲ್. ವಿ. ಅಮೀನ್, ಶಾರದಾ ಸೂರು ಕರ್ಕೇರ, ನ್ಯಾಯವಾದಿ ಎಸ್. ಬಿ. ಅಮೀನ್, ನ್ಯಾಯವಾದಿ ರಾಜಾ ವಿ. ಸಾಲ್ಯಾನ್, ಜೆ. ಎ. ಕೋಟ್ಯಾನ್, ದಾಮೋದರ ಸಿ. ಕುಂದರ್, ಎನ್. ಟಿ. ಪೂಜಾರಿ, ಗಂಗಾಧರ್ ಜೆ. ಪೂಜಾರಿ, ಕೆ. ಬಿ. ಪೂಜಾರಿ, ಜ್ಯೋತಿ ಕೆ. ಸುವರ್ಣ, ಭಾಸ್ಕರ್ ಎಂ. ಸಾಲ್ಯಾನ್, ಸೂರ್ಯಕಾಂತ್ ಜೆ. ಸುವರ್ಣ, ಎಂ. ಎನ್. ಕರ್ಕೇರ, ಪುರುಷೋತ್ತಮ ಎಸ್. ಕೋಟ್ಯಾನ್, ಪ್ರೇಮನಾಥ್ ಪಿ. ಕೋಟ್ಯಾನ್, ಮೋಹನದಾಸ್ ಎ. ಪೂಜಾರಿ ಮತ್ತು ಅನ½ಲ್ಗನ್ ಸಿ. ಹರಿಜನ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಮಹಾಸಭೆಯಲ್ಲಿ ಬ್ಯಾಂಕಿನ ಶೇರುದಾರರು, ಗ್ರಾಹಕರು, ಹಿತೈಷಿಗಳು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸದಸ್ಯರು, ಬ್ಯಾಂಕಿನ ಮಾಜಿ ನಿರ್ದೇಶಕರು, ಪ್ರಧಾನ ಪ್ರಬಂಧಕರಾದ ಸುರೇಶ್ ಎಸ್. ಸಾಲ್ಯಾನ್, ದಿನೇಶ್ ಬಿ. ಸಾಲ್ಯಾನ್, ನಿತ್ಯಾನಂದ ಎಸ್. ಕಿರೋಡಿಯನ್, ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ್ ಜಿ. ಸುವರ್ಣ, ವಾಸುದೇವ ಎಂ. ಸಾಲ್ಯಾನ್, ಮಹೇಶ್ ಬಿ. ಕೋಟ್ಯಾನ್, ಜನಾರ್ಧನ್ ಎಂ. ಪೂಜಾರಿ, ಸತೀಶ್ ಎಂ. ಬಂಗೇರ, ವಿಶ್ವನಾಥ ಜಿ. ಸುವರ್ಣ, ಸಹಾಯಕ ಮಹಾ ಪ್ರಬಂಧಕರಾದ ರಮೇಶ್ ಎಚ್. ಪೂಜಾರಿ, ಜಗದೀಶ್ ನಾರಾಯಣ್, ಹರೀಶ್ ಹೆಜ್ಮಾಡಿ, ಮಂಜುಳಾ ಎನ್. ಸುವರ್ಣ, ಭಾರತ್ ಬ್ಯಾಂಕ್ ಆಫೀಸರ್ ಅಸೋಸಿಯೇಶನ್‌ನ ಕಾರ್ಯದರ್ಶಿ ಪ್ರೇಮಾನಂದ ಪೂಜಾರಿ ಭಾರತ್ ಬ್ಯಾಂಕ್ ಸ್ಟಾಫ್ ವೆಲ್ಫೆàರ್ ಕ್ಲಬ್‌ನ ಕಾರ್ಯದರ್ಶಿ ಮೋಕ್ಷ ಕುಂದರ್ ಸೇರಿದಂತೆ ಬ್ಯಾಂಕ್‌ನ ವಿವಿಧ ಶಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಬ್ಯಾಂಕಿನ ಸದಸ್ಯರುಗಳಾದ ನ್ಯಾಯವಾದಿ ಶಶಿಧರ್ ಕಾಪು, ಸೆವಂತಿಲಾಲ್ ಸಿ. ಶಾØ, ಜೆ. ವಿ. ಪೂಜಾರಿ, ಕೃಷ್ಣಮೂರ್ತಿ ಶೇಷನ್, ಎಂ. ರಾಮಚಂದ್ರನ್, ರಿಚಾರ್ಡ್ ಕೊರೆಯಾ, ಕೇಶವ ಕೆ. ಕೋಟ್ಯಾನ್, ಕೃಷ್ಣರಾಜ್ ಆರ್. ಕೋಟ್ಯಾನ್, ಪ್ರಕಾಶ್ ಅಗರ್ವಾಲ್, ಬಾಲಕೃಷ್ಣ ಕರ್ಕೇರ, ಸೌಕತ್ ಕಾಳಸ್ಕರ್, ವರದ ಉಳ್ಳಾಲ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಬ್ಯಾಂಕಿನ ಅಧಿಕಾರಿ ಯಶೋಧರ್ ಡಿ. ಪೂಜಾರಿ ಪ್ರಾರ್ಥನೆಗೈದರು. ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್. ಕರ್ಕೇರ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್