ಮುಂಬಯಿ: ಮಹಾರಾಷ್ಟ್ರ ಸ್ಟೇಟ್ ಕೋ. ಆಪರೇಟಿವ್ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯ ವಾರ್ಷಿಕ ಆರ್ಥಿಕ ಸಾಲಿನ ಪ್ರಶಸ್ತಿಗಳ ಪ್ರದಾನ ಸಮಾರಂಭವು ಫೆ. 8ರಂದು ಸಂಜೆ ದಾದರ್ ಪ್ರಭಾದೇವಿಯ ಮಹಾರಾಷ್ಟ್ರ ಕಲಾ ಅಕಾಡೆಮಿಯ ರವೀಂದ್ರ ನಾಟ್ಯ ಮಂದಿರದ ಸಭಾಗೃಹದಲ್ಲಿ ನಡೆಯಿತು.
ತುಳು-ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್ ಕೋ. ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಂಸ್ಥೆಗೆ ಈ ಬಾರಿ “ಪದ್ಮಭೂಷಣ ವಸಂತ್‌ದಾದಾ ಪಾಟೀಲ್ ಉತ್ಕೃಷ್ಟ ಸಹಕಾರಿ ಬ್ಯಾಂಕ್ ಪುರಸ್ಕಾರ’ ಪ್ರಶಸ್ತಿಯನ್ನಿತ್ತು ಇದೇ ಸಂದರ್ಭದಲ್ಲಿ ಪ್ರದಾನಿಸಿ ಗೌರವಿಸಲಾಯಿತು. ಬ್ಯಾಂಕ್ಸ್ ಅಸೋಸಿಯೇಶನ್ ಆಯೋಜಿಸಿರುವ 22ನೇ ವಾರ್ಷಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಹಾರಾಷ್ಟ್ರ ರಾಜ್ಯ ವಿಧಾನ ಪರಿಷದ್‌ನ ಉಪ ಸಭಾಪತಿ ಮಾಣಿಕ್‌ರಾವ್ ಠಾಕ್ರೆ ಅವರು ಅಸೋಸಿಯೇಶನ್‌ನ ಕಾರ್ಯಾಧ್ಯಕ್ಷ ಶರದ್ ಅಪ್ಪರಾವ್ ಗೊವಿಂದ್ ಅವರನ್ನೊಳಗೊಂಡು ಭಾರತ್ ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್ ಹಾಗೂ ಸಿಇಒ-ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ ಅವರಿಗೆ ಪುರಸ್ಕಾರ ಫಲಕ, ಪ್ರಶಸ್ತಿಪತ್ರ ಪ್ರದಾನಿಸಿ ಅಭಿನಂದಿಸಿದರು.
ಈ ಶುಭಾವಸರದಲ್ಲಿ ಬ್ಯಾಂಕ್ಸ್ ಅಸೋಸಿಯೇಶನ್‌ನ ಉಪ ಕಾರ್ಯಾಧ್ಯಕ್ಷ ಹರಿಹರ್‌ರಾವ್ ವಿ. ಭೊಸೀಕರ್, ಸಿಇಒ ಸ್ವಾತಿ ಪಾಂಡೆ ಮತ್ತು ಸಂಚಾಲಕರು, ಭಾರತ್ ಬ್ಯಾಂಕಿನ ಹಿರಿಯ ನಿರ್ದೇಶಕಿ ಪುಷ್ಪಲತಾ ಎನ್. ಸಾಲ್ಯಾನ್, ಮಾಜಿ ನಿರ್ದೇಶಕ ಎನ್. ಎಂ. ಸನೀಲ್, ಮಹಾ ಪ್ರಂಬಧಕ ದಿನೇಶ್ ಬಿ. ಸಾಲ್ಯಾನ್, ಉಪ ಪ್ರಧಾನ ಪ್ರಬಂಧಕ ಮೋಹನ್‌ದಾಸ್ ಹೆಜ್ಮಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ರಾಜ್ಯದ ಪ್ರತಿಷ್ಠಿತ ಮಾಜಿ ಮುಖ್ಯಮಂತ್ರಿ ಪದ್ಮಭೂಷಣ ವಸಂತ್‌ದಾದಾ ಪಾಟೀಲ್ ನಾಮದ ಸರ್ವೋತ್ಕೃಷ್ಟ ಸಹಕಾರಿ ಗೌರವಕ್ಕೆ ಭಾರತ್ ಬ್ಯಾಂಕ್ ಭಾಜನವಾಗಿರುವುದು ಅಭಿಮಾನ ತಂದಿದೆ. ವಿಶೇಷವಾಗಿ ಈ ಗೌರವವು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರ ಅಹರ್ನಿಶಿ ಶ್ರಮ ಹಾಗೂ ದೂರದೃಷ್ಟಿತ್ವದ ಚಿಂತನೆಯ ಫಲವಾಗಿದೆ. ಬ್ಯಾಂಕಿನ ಮಂಡಳಿ ಮತ್ತು ಷೇರುದಾರದ ಸಹಕಾರ, ಗ್ರಾಹಕರ ಅನನ್ಯ ಸಹಯೋಗ ಮತ್ತು ನೌಕರವೃಂದದ ಅನುಪಮ ಪರಿಶ್ರಮದ ಧೊÂàತಕವಾಗಿದೆ ಎಂದು ಇದೇ ಸಂದರ್ಭದಲ್ಲಿ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್ ಅವರು ನುಡಿದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಅಸೋಸಿಯೇಶನ್ ವರ್ಷಂಪ್ರತಿ ಆಯ್ಕೆಗೊಳಿಸುವ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಮತ್ತು ಗುಣಮಟ್ಟದ ಬ್ಯಾಂಕ್‌ಗಳ ಸ್ಪರ್ಧೆಯಲ್ಲಿ ನೂರಾರು ಸಹಕಾರಿ ಬ್ಯಾಂಕುಗಳ ಪೈಕಿ ನಿರ್ಣಾಯಕರ ಆಯ್ಕೆ ಪ್ರಕ್ರಿಯೆಯಂತೆ ಭಾರತ್ ಬ್ಯಾಂಕ್‌ಗೆ ಈ ಗೌರವ ಪ್ರಾಪ್ತಿಯಾಗಿರುವುದು ನಮ್ಮನ್ನು ಮತ್ತಷ್ಟು ಪ್ರೋತ್ಸಾಹಿಸಿದಂತಾಗಿದೆ. ಭಾರತ್ ಬ್ಯಾಂಕ್‌ನ ಸರ್ವೋತ್ಕೃಷ್ಟ ಗ್ರಾಹಕ ಸೇವೆ, ಸಮಗ್ರ ವ್ಯವಹಾರ ಮತ್ತು ಗ್ರಾಹಕಸ್ನೇಹಿ ವಾರ್ಷಿಕ ವೈಶಿಷ್ಟÂಪೂರ್ಣ ಚಟುವಟಿಕೆಗಳಿಗಾಗಿ ಗೌರವಿಸಲ್ಪಟ್ಟಿರುವು ಹೆಮ್ಮೆಯೆಣಿಸಿದೆ ಎಂದು ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ ತಿಳಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್