ಭರಮಸಾಗರ: ಹೂಗಳ ನೋಟವೇ ಹಾಗೇ ನೋಡ್ತಾ ಇದ್ದರೆ ನೋಡಲೇ ಬೇಕು ಎನ್ನೋ ನೋಟ. ಇಲ್ಲೊಂದು ಹೂ ಗಿಡದ ಹೆಸರು ಮದ್ದನಮಲ್ಲಿಗೆ ( ಮಧ್ಯಾಹ್ನದ ಮಲ್ಲಿಗೆ) ಹೂ ಗಿಡ ತನ್ನದೇ ವಿಶಿಷ್ಟತೆಯಿಂದ ನೋಡುಗರ ಗಮನಸೆಳೆಯುತ್ತದೆ. ಈ ಹೂವಿನ ವಿಶೇಷತೆ ಎಂದರೆ ಮಧ್ಯಾಹ್ನದ ಸಮಯದಲ್ಲಿ ಇದು ಅರಳುತ್ತದೆ. ಬಹುಶಃ ಎಲ್ಲಾ ಹೂಗಳು ಬೆಳಗ್ಗೆ ಅರಳಿದರೆ ಈ ಹೂ ಮಾತ್ರ ಮದ್ಯಾಹ್ನದ ವೇಳೆ ಅರಳುತ್ತದೆ.
ಈ ಗಿಡದ ವಿಶೇಷ ತೆಗಳಲ್ಲಿ ಇನ್ನೊಂದೆಂದರೆ ಎಷ್ಟು ಹೂಗಳಿರುತ್ತವೋ ಅಷ್ಟೇ ಪ್ರಮಾಣದ ಕಪ್ಪು ಬೀಜಗಳು ಗಿಡದಲ್ಲಿ ಕಾಣಸಿಗುತ್ತವೆ. ಎಲೆಗಳು ಹಚ್ಚಹಸಿರಿನಿಂದ ಕೂಡಿದ್ದು ಇಡೀ ಗಿಡವನ್ನು ಕಣ್ಣು ಮಿಟುಕಿಸದಂತೆ ನೋಡಿ ಕಣ್ತುಂಬಿಕೊಳ್ಳಬಹುದು.
ಹಳದಿ, ಗುಲಾಬಿ, ಬಿಳಿ ಸೇರಿದಂತೆ ನಾನಾ ಬಣ್ಣದ ಹೂಗಳನ್ನು ಇದು ಹೊಂದಿದೆ. ನೋಡುಗರ ಕಣ್ಮನ ಸೆಳೆಯುವ ಈ ಹೂ ಗಿಡವನ್ನು ನಾವು ಕಷ್ಟಪಟ್ಟು ಬೆಳೆಸದೆ ಇದ್ದರೂ ಇದರ ಬೀಜ ಬಿದ್ದ ಜಾಗದಲ್ಲಿ ತನ್ನಷ್ಟಕ್ಕೇ ಬೆಳೆದೆ ಬೀಡುವ ಹೂಗಿಡವಿದು.
ಇತರೆ ಗಿಡಗಳಲ್ಲಿ ಬೆಳ್ಳಂಬೆಳ್ಳಗ್ಗೆ ಹೂ ಅರಳುವದನ್ನು ನೋಡಲು ಸಿಗುತ್ತದೆ.ಮನೆ, ವಾಣಿಜ್ಯ ವ್ಯವಹಾರದ ಸ್ಥಳಗಳಲ್ಲಿ ಈ ಗಿಡಗಳನ್ನು ಬೆಳೆಸಿಕೊಂಡರೆ ಬೆಳಗ್ಗಿನಿಂದ ವ್ಯವಹಾರ ಇತರೆ ಕೆಲಸಗಳಿಂದ ದಣಿವು ಹೊಂದಿದವರು ಈ ಹೂಗಳನ್ನು ಮದ್ಯಾಹ್ನದ ಸಮಯದಲ್ಲಿ ಕಣ್ತುಂಬಿಕೊಂಡು ರಿಲ್ಯಾಕ್ಸ್ ಪಡೆಯಬಹುದು.
ಭರಮಸಾಗರ: ಇಲ್ಲಿನ ಮುಖ್ಯ ರಸ್ತೆಯ ಅಂಗಡಿಯೊಂದರ ಬಳಿ ಮದ್ದನ ಮಲ್ಲಿಗೆ (ಮಧ್ಯಾಹ್ನದ ಮಲ್ಲಿಗೆ) ಹೂಗಳು ಅರಳಿಗಮನ ಸೆಳೆಯುತ್ತಿರುವುದು