Advertisement

ಸರ್ವಿಸ್‌ ರಸ್ತೆ ಹಂಪ್ಸ್‌ ನಿಂದ ಕಿರಿಕಿರಿ

12:59 PM Jan 26, 2020 | Naveen |

ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ವಿಜಾಪುರ ಬಳಿ ಹೆದ್ದಾರಿ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ತಾತ್ಕಲಿಕವಾಗಿ ಹೈವೇ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿರುವ ಸರ್ವಿಸ್‌ ರಸ್ತೆಯಲ್ಲಿನ ಹಂಪ್ಸ್‌ಗಳು ವಾಹನ ಸಂಚಾರಕ್ಕೆ ಕಿರಿಕಿಯನ್ನುಂಟು ಮಾಡುತ್ತಿವೆ. ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಹೈವೇ ಕಾಮಗಾರಿಗಳಿಂದಾಗಿ ವಾಹನ ಸವಾರರು ತತ್ತರಿಸಿದ್ದಾರೆ. ವಾಹನಗಳ ವೇಗ ನಿಯಂತ್ರಣದ ದೃಷ್ಟಿಯಿಂದ ಅಳವಡಿಸಿರುವ ಹಂಪ್ಸ್‌ಗಳ ಇರುವಿಕೆ ತಿಳಿಯದೆ ವಾಹನಗಳು ಅಪಘಾತಗಳಿಗೆ ತುತ್ತಾಗುತ್ತಿವೆ.

Advertisement

ಕೆಲ ವೇಳೆ ದೈಹಿಕ ನ್ಯೂನತೆಗೆ ಅಪಘಾತಗಳು ಕಾರಣವಾದರೆ ಇನ್ನೂ ಹಲವು ಅಪಘಾತಗಳು ವಾಹನಗಳ ನಜ್ಜುಗುಜ್ಜಾಗಿ ವಾಹನದ ದೊಡ್ಡ ರಿಪೇರಿಗೆ ಕಾರಣವಾಗುತ್ತಿವೆ. ಇಲ್ಲಿನ ಹಂಪ್ಸ್‌ಗಳ ಇರುವಿಕೆ ತಿಳಿಯುವಂತೆ ಅವುಗಳ ಬಳಿ ರಿಪ್ಲೇಕ್ಟರ್‌ ಅಥವಾ ಬಿಳಿ ಪಟ್ಟಿಯನ್ನು ಬಳಿಯದೇ ಇರುವುದರಿಂದ ಹೆದ್ದಾರಿ ವಾಹನಗಳು ಶರವೇಗದಲ್ಲಿ ಬಂದು ತಕ್ಷಣ ವೇಗ ನಿಯಂತ್ರಿಸುವದರಿಂದ ಹಿಂಬದಿಯಿಂದ ಬರುವ ವಾಹನಗಳು ಏಕಾಏಕಿ ಮುಂಬದಿ ವಾಹನದ ವೇಗ ಕಡಿಮೆ ಆಗುವುದನ್ನು ನಿರೀಕ್ಷಿಸದೆ ಅಪಘಾತಗಳು ನಿತ್ಯ ಚಿತ್ರದುರ್ಗದಿಂದ ದಾವಣಗೆರೆವರೆಗೆ ಹಂಪ್ಸ್‌ಗಳ ಬಳಿ ನಿತ್ಯ ಅಪಘಾತಗಳು ಸಂಭವಿಸುತ್ತಿರುತ್ತವೆ.

ಈ ಹಂಪ್ಸ್‌ಗಳ ಬಳಿ ನಡೆಯುವ ಅಪಘಾತಗಳ ಕುರಿತು ಅಪಘಾತಗಳಿಗೆ ತುತ್ತಾದ ವಾಹನಗಳ ಸವಾರರು ಪೊಲೀಸ್‌ ಠಾಣೆವರೆಗೆ ಬಾರದೆ ಅಲ್ಲಲ್ಲೇ ಬಗೆಹರಿಸಿಕೊಂಡು ಹೋಗುವುದು ಹೈವೇಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಹೀಗೆ ವಾಹನಗಳ ಪಾಲಿಗೆ ಸುರಕ್ಷತೆ ಒದಗಿಸಬೇಕಾದ ಹೈವೇ ಪ್ರಾಧಿಕಾರ ಷಟ್ಪಥ ಕಾಮಗಾರಿಯಿಂದ ವಾಹನ ಸವಾರರ ಪಾಡನ್ನು  ರಾಣವಾಗಿಸಿದೆ. ಕೆಲ ವೇಳೆ ಹೈವೇ ಅಕ್ಕಪಕ್ಕದ ಹಳ್ಳಿಗಳ ಬಳಿ ನಡೆಯುವ ವಾಹನಗಳ ಅಪಘಾತಗಳ ವೇಳೆ ವಾಹನಗಳ ಚಾಲಕರು ಪರಸ್ಪರ ಬಡಿದಾಡಿಕೊಂಡು ಹಳ್ಳಿಗರ ಮಧ್ಯಸ್ಥಿಕೆಯಿಂದ ಸಂಧಾನದಲ್ಲಿ ಅಂತ್ಯವಾಗಿ ತೆರಳುವ ಘಟನೆಗಳು ನಡೆಯುತ್ತಿರುತ್ತವೆ. ಚಿತ್ರದುರ್ಗದಿಂದ ದಾವಣಗೆರೆ ವರೆಗಿನ ಬಹುತೇಕ ಸ್ಥಳಗಳಲ್ಲಿ ಹೀಗೆ ಸುರಕ್ಷಿತ ಸಂಚಾರ ಕ್ರಮಗಳಿಲ್ಲದೆ ಎಲ್ಲೆಂದರಲ್ಲಿ ಹೈವೇ ಕಾಮಗಾರಿ ನಡೆಯುತ್ತಿರುವ ಬೆನ್ನ ಹಿಂದೆ ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ.

ಡಿಸೆಂಬರ್‌ ಅಂತ್ಯದಲ್ಲಿ ಪೊಲೀಸ್‌ ಇಲಾಖೆ ಮತ್ತು ಹೈವೇ ಪ್ರಾ ಧಿಕಾರ ನಡೆಸುವ
ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಇಲ್ಲಿನ ಹೈವೇ ರಸ್ತೆಯಲ್ಲಿನ ಅವಾಂತರಗಳನ್ನು ನೋಡಿದಾಗ ಸಪ್ತಾಹದ ಉದ್ದೇಶಗಳು ಈಡೇರುತ್ತಿಲ್ಲ ಎನ್ನಿಸುತ್ತದೆ.

ತಮ್ಮದಲ್ಲದ ತಪ್ಪಿಗೆ ದಂಡ!
ಹೈವೇ ಉದ್ದಕ್ಕೂ ಹಾಕಲಾಗಿರುವ ಹಂಪ್ಸ್‌ಗಳು ಕಳೆದೊಂದು ವರ್ಷದಿಂದ ಹಲವಾರು ಜೀವಗಳನ್ನು ಬಲಿ ಪಡೆದಿವೆ. ಸಾವಿರಾರು ಸಂಖ್ಯೆಯಲ್ಲಿ ವಾಹನಗಳ ನಜ್ಜುಗುಜ್ಜುಗೊಂಡು ವಿನಾ ಕಾರಣ ವಾಹನ ಮಾಲೀಕರು ರಿಪೇರಿ ಹೆಸರಲ್ಲಿ ವಾಹನಗಳಿಗೆ ಲಕ್ಷಾಂತರ ರೂಗಳನ್ನು ತಮ್ಮದಲ್ಲದ ತಪ್ಪಿಗೆ ದಂಡ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದ್ಯಾವಾಗ ಷಟ³ಥ ಕಾಮಗಾರಿ ಮುಗಿಯುತ್ತದೋ ಎಂದು ಹೈವೇ ವಾಹನಗಳ ಸವಾರರು ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next