Advertisement
ಮಳೆಯ ಅಬ್ಬರ: ಮಲೆನಾಡು ಕರಾವಳಿ ಪ್ರದೇಶಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ನದಿಗಳ ಭರ್ತಿಯಿಂದಾಗಿ ನೀರು ಹರಿದು ಕೃಷ್ಣರಾಜಸಾಗರ ಡ್ಯಾಂ ಮತ್ತು ಕಬಿನಿ ಡ್ಯಾಂ ತುಂಬಲಾರಂಭಿಸಿದಂತೆ ಅಧಿಕಾರಿಗಳು ಕೃಷ್ಣರಾಜಸಾಗರ ಡ್ಯಾಂನಿಂದ 5 ಸಾವಿರ ಕ್ಯೂಸೆ ಕ್, ಕಬಿನಿಯಿಂದ 3 ಸಾವಿರ ಕ್ಯೂಸೆ ಕ್ ನೀರು ಬಿಡಲಾಗುತ್ತಿದೆ. ಜಲಪಾತಕ್ಕೆ ನೀರು ಹರಿದು ಬಂದು ಭರಚುಕ್ಕಿ ಜಲಪಾತ ಹಾಲಿನ ನೊರೆಯಂತೆ ಹರಿಯಲಾರಂಭಿಸಿದೆ.
Related Articles
Advertisement
ಸಿಸಿ ಕ್ಯಾಮೆರಾ ಅಳವಡಿಕೆ: ಜಲಪಾತದಲ್ಲಿ ನೀರು ಧುಮ್ಮಿಕ್ಕಿ ಹರಿಯುವುದನ್ನು ವೀಕ್ಷಣೆ ಮಾಡುವ ಸಲುವಾಗಿ ಪ್ರವಾಸಿಗರ ದಂಡೇ ಆಗಮಿಸುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ಅಪಘಾತ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ತಿಳಿವಳಿಕೆಯ ಫಲಕ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿ ಜಲಪಾತದಲ್ಲಿ ಯಾವುದೆ ತರಹದ ಸಾವು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ.
ಸೆಲ್ಫೀಗಾಗಿ ಬರುವವರೇ ಹೆಚ್ಚು: ಜಲಪಾತವನ್ನು ವೀಕ್ಷಣೆ ಮಾಡಲು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಪ್ರವಾಸಿಗರು ಜಲಪಾತ ವೀಕ್ಷಣೆ ಮಾಡಿ ನಂತರ ಜಲಪಾತದೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡು ತೀವ್ರ ಅಸಮಾಧಾನದಿಂಲೇ ಇಷ್ಟು ಬೇಗ ಹೋಗ ಬೇಕೆ ಎಂದು ಕೊಂಡು ತೆರಳಿದರು. ನೀರು ಧುಮ್ಮಿಕ್ಕಿ ಹರಿಯುವುದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜಲಪಾತದಲ್ಲಿ ನೀರು ಹರಿಯುತ್ತಿದ್ದಂತೆ ಪ್ರವಾಸಿಗರು ಆಗಮಿಸುವ ಮುನ್ಸೂಚನೆ ಇದ್ದು, ನೀರಿನ ತಳಭಾಗಕ್ಕೆ ತೆರಳದಂತೆ ಮತ್ತು ಜಲಪಾತವನ್ನು ಮೇಲ್ಭಾಗದಿಂದಲೇ ವೀಕ್ಷಣೆ ಮಾಡಿ ತೆರಳುವಂತೆ ಸಂಬಂಧಿಸಿದ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು, ಜಲಪಾತದಲ್ಲಿ ಯಾವುದೇ ತರಹದ ಘಟನೆಗಳು ಸಂಭವಿಸಿದಂತೆ ಕ್ರಮ ಕೈಗೊಳ್ಳಲಾಗಿದೆ.-ಏಡುಕೊಂಡಲು, ಡಿಎಫ್ಒ * ಡಿ.ನಟರಾಜು