Advertisement

ಇಂಗ್ಲಿಷ್‌ ಬಿಟ್ಟು ಮಾತೃ ಭಾಷೆಗೆ ಮಣೆ ಹಾಕಿ

05:01 PM Nov 25, 2019 | Naveen |

ಭಾಲ್ಕಿ: ನಮ್ಮಲ್ಲಿ ಅತಿಯಾಗಿ ಅಂಟಿಕೊಂಡಿರುವ ಇಂಗ್ಲಿಷ್‌ ಭಾಷೆ ಕಲಿಯುವ ವ್ಯಾಮೋಹಕ್ಕೆ ಕಡಿವಾಣ ಹಾಕಿ ಮಾತೃ ಭಾಷೆ ಕಲಿಕೆಗೆ ಮಣೆ ಹಾಕಬೇಕು ಎಂದು ಹಿರೇಮಠ ಸಂಸ್ಥಾನದ ಮಹಾಲಿಂಗ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಚನ್ನಬಸವಾಶ್ರಮದಲ್ಲಿ, ಹಿರೇಮಠ ಸಂಸ್ಥಾನದ ವತಿಯಿಂದ ನಡೆದ 247ನೇ ಮಾಸಿಕ ಶರಣ ಸಂಗಮ ಮತ್ತು ಕರ್ನಾಟಕ ರಾಜ್ಯೋತ್ಸವ-2019ರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಂಗ್ಲಿಷ್‌ ಭಾಷೆಯಿಂದ ಮಾತ್ರ ಸರ್ಕಾರಿ ಕೆಲಸ ಸಿಗುತ್ತದೆ ಎನ್ನುವ ಭ್ರಮೆ ನಮಗೆ ಅಂಟಿಕೊಂಡಿದೆ. ಹೀಗಾಗಿ ಎಲ್ಲರೂ ಇಂಗ್ಲಿಷ್‌ ಭಾಷೆ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಆದರೆ ಕನ್ನಡ ಭಾಷೆ ಕಲಿಯುವುದರಿಂದಾಗುವ ಅನುಕೂಲಗಳು ನಮಗೆ ಗೋಚರಿಸುತ್ತಿಲ್ಲ. ಕನ್ನಡ ಭಾಷೆಯಲ್ಲಿ ಭಾತೃತ್ವ ಭಾವ ಅಡಗಿದೆ. ನಾವೆಲ್ಲರೂ ಒಂದೇ ಎನ್ನುವ ತತ್ವ ಮಾತೃಭಾಷೆಯಲ್ಲಿದೆ. ನಮ್ಮ ಸಂಸ್ಕೃತಿ ಅರಿಯಲು ಕನ್ನಡವನ್ನೇ ಕಲಿಯಬೇಕು ಎಂದರು.

ಬಸವ ಗುರುಪೂಜೆ ನೆರವೇರಿಸಿ ಮಾತನಾಡಿದ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಪ್ರೊ| ಶಂಭುಲಿಂಗ ಕಾಮಣ್ಣ, ಕನ್ನಡ ಭಾಷೆಗೆ ಭವ್ಯ ಇತಿಹಾಸವಿದೆ. ಅದನ್ನು ಉಳಿಸಿ-ಬೆಳೆಸುವ ಕಾರ್ಯ ಲಿಂ. ಡಾ| ಚನ್ನಬಸವ ಪಟ್ಟದ್ದೇವರು ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಾಗಿದೆ ಎಂದರು.

ಅಖೀಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿ ಪರಿಷತ್‌ ಅಧ್ಯಕ್ಷ ಪ್ರೊ| ಚಂದ್ರಕಾಂತ ಬಿರಾದಾರ ಪ್ರಾಸ್ತಾವಿಕ ಮಾತನಾಡಿ, ಎಲ್ಲರೂ ಮಾತೃಭಾಷೆ ಬಗ್ಗೆ ಕಳಕಳಿ ಹೊಂದಬೇಕು. ಆಗ ಮಾತ್ರ ಮಾತೃಭಾಷೆ ಬೆಳೆಯಲು ಸಾಧ್ಯ ಎಂದರು.

Advertisement

ತಾಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೇ ಕನ್ನಡಪರ ಸಂಘಟನೆ ಮತ್ತು ಬಸವಪರ ಸಂಘಟನೆ ಪದಾಧಿಕಾರಿಗಳಿಗೆ ಮಠದಿಂದ ಸನ್ಮಾನಿಸಲಾಯಿತು. ಬಾಬುರಾವ್‌ ಬಿರಾದಾರ, ಮಲ್ಲಮ್ಮ ಆರ್‌. ಪಾಟೀಲ, ಪ್ರೊ| ಅಶೋಕ ಮನ್ನಳ್ಳೆ, ಮಲ್ಲಮ್ಮ ನಾಗನಕೇರೆ, ಜಯರಾಜ ಕೊಳ್ಳಾ, ಸಂಗಮೇಶ ಗುಮ್ಮೆ, ಮಾಳಸಾಕಾಂತ ವಾಘೆ,
ಗೌರವಕ ಶ್ರೀಮಳೆ, ಸತೀಶ ಮಡಿವಾಳ, ಸಂಗಮೇಶ ಭೂರೆ, ಸಂಜುಕುಮಾರ ನಾವದಗಿ, ರಾಜಕುಮಾರ ಡಾವರಗಾಂವೆ, ಗಣೇಶ ಪಾಟೀಲ, ಅಮೂಲ ಮಾನಕಾರಿ, ಪ್ರಶಾಂತ ಮೊಗಲೆ, ಸಂತೋಷ ಹಡಪದ, ಶಂಕರ ವರ್ಮಾ, ಸಂತೋಷ ಬಿಜಿಪಾಟೀಲ ಉಪಸ್ಥಿತರಿದ್ದರು.

ಶರಣೆ ಉಮಾದೇವಿ ಶಿವರಾಜ ಭಕ್ತಿದಾಸೋಹ ನಡೆಸಿಕೊಟ್ಟರು. ಗುರುಪ್ರಸಾದ
ಶಾಲೆ ವಿದ್ಯಾರ್ಥಿಗಳಿಂದ ನಾಡಗೀತೆ ಪ್ರಸ್ತುತ ಪಡಿಸಲಾಯಿತು. ಕರಬಸಯ್ಯ ಸ್ವಾಮಿ, ಜಗನ್ನಾಥ ಬೀರಿ ಅವರಿಂದ ವಚನ ಭಜನೆ ನಡೆಯಿತು. ಸದ್ಗುರು ವಿದ್ಯಾಲಯ ಶಾಲೆ ವಿದ್ಯಾರ್ಥಿಗಳಿಂದ ದೇಶಭಕ್ತಿ ನೃತ್ಯ ನಡೆಯಿತು. ಶಾಂತಯ್ನಾ ಸ್ವಾಮಿ ಸ್ವಾಗತಿಸಿದರು. ವೀರಣ್ಣ ಕುಂಬಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next