Advertisement

ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ

04:37 PM Apr 30, 2020 | Naveen |

ಭಾಲ್ಕಿ: ತಾಲೂಕಿನ ಅಂಬೆಸಾಂಗವಿ ಹಾಗೂ ಕೋಸಂ ಗ್ರಾಮದ ಹೊರ ವಲಯದ ಕೆರೆಗೆ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ನರೇಗಾದಡಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿದರು. ತಾಲೂಕಿನ ಅಂಬೆಸಾಂಗವಿ, ಕೋಸಂ ಕೆರೆಗಳಿಗೆ ಭೇಟಿ ನೀಡಿದ ಶಾಸಕರು ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಿದರು.

Advertisement

ಸಂಕಷ್ಟ ಸಮಯದಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂಬ ಉದ್ದೇಶದೊಂದಿಗೆ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಕೆಲಸ ನೀಡುವಂತೆ ಸೂಚನೆ ನೀಡಿದ್ದೇನೆ. ಒಂದು ಪರಿವಾರಕ್ಕೆ ಕನಿಷ್ಟ 50 ದಿವಸ ಕೆಲಸ ಮತ್ತು ದಿನವೊಂದಕ್ಕೆ ಒಬ್ಬರಿಗೆ 275 ರೂ. ಕೂಲಿ ಸಿಗಲಿದ್ದು, ವಾರದೊಳಗೆ ಕೂಲಿ ಹಣ ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಆಗಲಿದೆ ಎಂದು ಹೇಳಿದರು.

ಕೂಲಿ ಕಾರ್ಮಿಕರು ಕೆಲಸದ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್‌-19 ಹರಡುವಿಕೆ ಭೀತಿ ಇರುವುದರಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಬೇಕು. ಸಾಧ್ಯವಾದರೇ ಗ್ಲೌಸ್‌, ಸಾನಿಟೈಸರ್‌ ಬಳಸಬೇಕು. ಇಲ್ಲದಿದ್ದರೇ ಕಾಲಕಾಲಕ್ಕೆ ಸಾಬೂನಿಂದ ಕೈಗಳು ಸ್ವಚ್ಛತೆ ಮಾಡಿಕೊಳ್ಳಬೇಕು ಎಂದು ಹೇಳಿದರು. ತಹಶೀಲ್ದಾರ್‌ ಅಣ್ಣಾರಾವ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ, ಶಶಿಧರ ಕೋಸಂಬೆ, ಸಂಗಮೇಶ ಮದಕಟ್ಟಿ, ರಾಜಕುಮಾರ ಬಿರಾದಾರ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next