Advertisement
ಐದು ದಶಕಗಳ ಕಾಲ ಒಂದೇ ಕುಟುಂಬ ಹಿಡಿತ ಸಾಧಿ ಸುತ್ತ ಬಂದಿರುವ ಜಿದ್ದಾಜಿದ್ದಿನ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆ ದಟ್ಟವಾಗಿದೆ. ಹೀಗಾಗಿ, ರಾಜ್ಯದ ಚಿತ್ತ ಈ ಕ್ಷೇತ್ರದತ್ತ ನೆಟ್ಟಿದೆ. ಮೂರು ದಶಕಗಳಿಂದ ಕೇವಲ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಕಾದಾಟಕ್ಕೆ ಸಾಕ್ಷಿಯಾಗುತ್ತಿದ್ದ ಭಾಲ್ಕಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಜೆಡಿಎಸ್ ಪ್ರಬಲ ಪೈಪೋಟಿ ನೀಡುತ್ತಿದೆ. ಕಾಂಗ್ರೆಸ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತ್ತು ಬಿಜೆಪಿಯಿಂದ ಬಿಎಸ್‌ವೈ ಆಪ್ತ ಡಿ.ಕೆ.ಸಿದ್ರಾಮ್ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಟಿಕೆಟ್ ಕೈತಪ್ಪಿರುವುದರಿಂದ ಬಂಡಾಯ ಎದ್ದಿರುವ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ತ್ರಿಕೋನ ಸ್ಪರ್ಧೆಗೆ ರಣಾಂಗಣ ಸಿದ್ಧಗೊಂಡಿದೆ.
Related Articles
ಕ್ಷೇತ್ರದಲ್ಲಿ ಲಿಂಗಾಯತರು 65 ಸಾವಿರ ಇದ್ದರೆ,ಮರಾಠಾ ಸಮುದಾಯ 50 ಸಾವಿರದಷ್ಟಿದ್ದಾರೆ.ಮುಸ್ಲಿಂ, ದಲಿತರು, ಹಿಂದುಳಿದ ವರ್ಗದವರು ನಂತರದ ಸ್ಥಾನದಲ್ಲಿದ್ದಾರೆ
Advertisement
ನಿರ್ಣಾಯಕ ಅಂಶವೇನು?ಈಶ್ವರ ಖಂಡ್ರೆ ಸಚಿವರಾದ ಮೇಲೆ ಅಭಿವೃದ್ಧಿ ಕೆಲಸ ಆಗಿರುವುದು ಕಾಂಗ್ರೆಸ್‌ಗೆ ಲಾಭ. ಮಾಜಿ ಶಾಸಕ ಪ್ರಕಾಶ ಖಂಡ್ರೆ ಬಿಜೆಪಿ ತೊರೆದು ತೆನೆ ಹೊತ್ತಿರುವುದರಿಂದ ಕಮಲ ಪಾಳೆಯದ ಕೆಲ ನಾಯಕರು ಅವರ ಹಿಂದೆ ಬಂದಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಟಿಕೆಟ್ ವಿಷಯದಲ್ಲಿ ಕಡೆಗಣಿಸಿರುವುದರಿಂದ ಮರಾಠಾ ಸಮಾಜ ಬಿಜೆಪಿಯ ವಿರುದ್ಧ ಮುನಿಸಿಕೊಂಡಿದೆ. ಇನ್ನೊಂದೆಡೆ ಸಮಾಜದ ಹಿರಿಯ ಮುಖಂಡ ಎಂ.ಜಿ.ಮುಳೆ ಜನತಾದಳಕ್ಕೆ ಸೇರಿದ್ದಾರೆ. ಇದೆಲ್ಲದರ ಲಾಭ ಜೆಡಿಎಸ್‌ಗೆ ಆಗುವ ಸಾಧ್ಯತೆಯೂ ಇದೆ. ಭಾಲ್ಕಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ.ತಂದು ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಉತ್ತಮ ಯೋಜನೆಗಳ ಜಾರಿ ಮೂಲಕ ಜನಪರ ಆಡಳಿತ ನೀಡಿದೆ.
– ಈಶ್ವರ ಖಂಡ್ರೆ, ಕಾಂಗ್ರೆಸ್ ಕ್ಷೇತ್ರದಲ್ಲಿ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಅನ್ಯಾಯ, ಭ್ರಷ್ಟಾಚಾರ ಹೆಚ್ಚಿದೆ. ಇದರ ವಿರುದ್ಧದ ಹೋರಾಟವೇ ನನ್ನ ಸ್ಪರ್ಧೆಗೆ ಕಾರಣ. ನನಗೆ ಅಧಿಕಾರ ಮುಖ್ಯವಲ್ಲ. ಹಣ, ಅಧಿಕಾರದ ಬಲದಿಂದ ಈಗ ಗೆಲುವು ಸಾಧಿಸಲು ಸಾಧ್ಯವಿಲ್ಲ. ಬದಲಾವಣೆ ಆಗುವುದು ನಿಶ್ಚಿತವಾಗಿದೆ.
– ಡಿ.ಕೆ ಸಿದ್ರಾಮ್, ಬಿಜೆಪಿ ಭಾಲ್ಕಿ ಕ್ಷೇತ್ರದಲ್ಲಿ ದಶಕಗಳ ಕಾಲ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನನಗೆ ಟಿಕೆಟ್ ತಪ್ಪಿಸುವ ಮೂಲಕ ಬೆನ್ನಿಗೆ ಚೂರಿ ಹಾಕಲಾಯಿತು. ನನ್ನ ಬೆಂಬಲಿಗರ ಒತ್ತಾಯದ ಮೇರೆಗೆ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದೇನೆ. ಜನರು ನನಗಾದ ಅನ್ಯಾಯಕ್ಕೆ ಸೂಕ್ತ ಸಮಯದಲ್ಲಿ ಉತ್ತರಿಸಲಿದ್ದಾರೆ.
– ಪ್ರಕಾಶ ಖಂಡ್ರೆ, ಜೆಡಿಎಸ್ – ಶಶಿಕಾಂತ ಬಂಬುಳಗೆ