Advertisement

ಸಂಸ್ಕೃತ ಸಾರ್ವತ್ರಿಕ ಭಾಷೆ: ಭಕ್ತಿ ರಾಘವ ಸ್ವಾಮಿ

12:43 AM Feb 27, 2023 | Team Udayavani |

ಸುರತ್ಕಲ್‌: ಸಂಸ್ಕೃತವು ಯಾವುದೇ ಧರ್ಮಕ್ಕೆ ಸಂಬಂಧಿಸಿದ ಭಾಷೆಯಲ್ಲ, ಇದು ಸಾರ್ವತ್ರಿಕ ಭಾಷೆ. ನಾವು ಆಯ್ಕೆಯಿಂದ ಭರತ ವರ್ಷದಲ್ಲಿ ಹುಟ್ಟಿಲ್ಲ ಆದರೆ ವೈವಿಧ್ಯಮಯ ಸಂಸ್ಕೃತಿಯೊಂದಿಗೆ ಇಲ್ಲಿ ಹುಟ್ಟಿದ ನಾವು ಅದೃಷ್ಟವಂತರು ಎಂದು ಕೆನಡಾ ದೇಶದ ಇಸ್ಕಾನ್‌ನ ಭಕ್ತಿ ರಾಘವ ಸ್ವಾಮಿ ಮಹಾರಾಜ್‌ ಹೇಳಿದರು.

Advertisement

ಶ್ರೀನಿವಾಸ ವಿಶ್ವವಿದ್ಯಾನಿಲಯದ ಮುಕ್ಕ ಕ್ಯಾಂಪಸ್‌ನಲ್ಲಿ ವಿಶ್ವ ಸಂಸ್ಕೃತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತ ನಾಡಿದರು.

ಹೈದರಾಬಾದ್‌ನ ತಂತ್ರಜ್ಞ ಹಾಗೂ ಶಿಕ್ಷಣ ತಜ್ಞ ಡಾ| ವಿಠಲ ಜೋಶಿ ಮಾತನಾಡಿ, ಸಂಸ್ಕೃತದ ಅರಿವಿಲ್ಲದೆ ಯಾರೂ ಕೂಡ ವಿದ್ವಾಂಸನಾಗಲು ಸಾಧ್ಯವಿಲ್ಲ. ಸಂಸ್ಕೃತ ಆಚರಣೆಗಳ ಭಾಷೆಯಲ್ಲ; ಸನಾತನ ಭಾಷೆ ಎಂಬುದನ್ನು ನಾವು ತಿಳಿಯಬೇಕಿದೆ. ಸಂಸ್ಕೃತ ಗೊತ್ತಿದ್ದರೆ ಬೇರೆ ಬಾಷೆಗಳನ್ನು ಕಲಿಯುವುದು ಬಲು ಸುಲಭ ಎಂದರು.

ಆಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿ.ವಿ. ಕುಲಾಧಿ ಪತಿ ಸಿಎ ಎ. ರಾಘವೇಂದ್ರ ರಾವ್‌ ಮಾತನಾಡಿ, ಸಂಸ್ಕೃತ ಭಾಷೆಯಲ್ಲಿ ಇನ್ನಷ್ಟು ಸಂಶೋಧನೆಗೆ ಸರಕಾರ ನೆರವು ಹಾಗೂ ಸಹಕಾರ ನೀಡಬೇಕು ಎಂದರು.

ಸಹ ಕುಲಾಧಿಪತಿ ಡಾ| ಎ. ಶ್ರೀನಿವಾಸ ರಾವ್‌, ಶ್ರೀನಿವಾಸ ವಿ.ವಿ. ಆಡಳಿತ ಮಂಡಳಿ ಟ್ರಸ್ಟಿಗಳಾದ ಎ. ವಿಜಯಲಕ್ಷ್ಮೀ ಆರ್‌. ರಾವ್‌, ಪ್ರೊ| ಎ. ಮಿತ್ರಾ ಎಸ್‌. ರಾವ್‌, ಪದ್ಮಿನಿ ಕುಮಾರ್‌, ಬೆಂಗಳೂರಿನ ತಜ್ಞರಾದ ಡಾ| ಉದಯ ಕುಮಾರ್‌ ಮಯ್ಯ, ಉಪಕುಲಪತಿ ಡಾ| ಪಿ.ಎಸ್‌. ಐತಾಳ, ರಿಜಿಸ್ಟ್ರಾರ್‌ ಆದಿತ್ಯ ಕುಮಾರ್‌ ಮಯ್ಯ, ಡಾ| ದೀಪಿಕಾ ಆದಿತ್ಯ ಕುಮಾರ್‌ ಮಯ್ಯ, ಮೌಲ್ಯಮಾಪನ ರಿಜಿಸ್ಟ್ರಾರ್‌ ಶ್ರೀನಿವಾಸ ಮಯ್ಯ ಡಿ., ಅಭಿವೃದ್ಧಿ ರಿಜಿಸ್ಟ್ರಾರ್‌ ಡಾ| ಅಜಯ್‌ ಕುಮಾರ್‌, ಸಹ ಸಂಚಾಲಕರಾದ ಡಾ| ಬಿ. ಗೋಪಾಲಚಾರ್‌ ಉಪಸ್ಥಿತರಿದ್ದರು.

Advertisement

ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ಭಗವದ್ಗೀತೆ ಪಠಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮ್ಮೇಳನದಲ್ಲಿ ವಿಚಾರ ಮಂಡಿಸಿದ ಸಂಶೋಧನಾರ್ಥಿಗಳನ್ನು ಗೌರವಿಸಲಾಯಿತು. ರಿಜಿಸ್ಟ್ರಾರ್‌ ಡಾ| ಅನಿಲ್‌ ಕುಮಾರ್‌ ಸ್ವಾಗತಿಸಿ, ಇನ್‌ಸ್ಟಿಟ್ಯೂಟ್‌ ಅಫ್‌ ಫಿಸಿಯೋಥೆರಪಿಯ ಡೀನ್‌ ಡಾ| ರಾಜಶೇಖರ್‌ ವಂದಿಸಿದರು. ಡಾ| ವಿಜಯಲಕ್ಷ್ಮೀ, ಪ್ರೊ| ರೋಹನ್‌ ಫೆರ್ನಾಂಡಿಸ್‌, ಡಾ| ಅಂಬಿಕಾ ಮಯ್ಯ ವಂದಿಸಿದರು.

ಶ್ರೀನಿವಾಸ ಕಲ್ಯಾಣೋತ್ಸವ
ಶ್ರೀನಿವಾಸ ಕಾಲೇಜಿನ ಮುಕ್ಕ ಕ್ಯಾಂಪಸ್‌ನ ವಿಶ್ವ ಸಮ್ಮೇಳನ ಸಭಾ ಮಂಟಪದಲ್ಲಿ ತಿರುಪತಿ ಪದ್ಮಾವತಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next