Advertisement

ಇಂದಿನಿಂದ ಭಜರಂಗಿ-2 ಹವಾ ಶುರು: ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ ಹೊಸ ಲೋಕ

09:03 AM Oct 29, 2021 | Team Udayavani |

ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭಿಮಾನಿಗಳ ಕುತೂಹಲ ಹೆಚ್ಚುತ್ತಲೇ ಇದೆ. ಅದಕ್ಕೆ ಕಾರಣ “ಭಜರಂಗಿ-2′. ಶಿವರಾಜ್‌ ಕುಮಾರ್‌ ನಟನೆಯ “ಭಜರಂಗಿ-2′ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ದೊಡ್ಡ ಗ್ಯಾಪ್‌ನ ನಂತರ ಬಿಡುಗಡೆಯಾಗುತ್ತಿರುವ ಸಿನಿಮಾ ಇದಾಗಿರುವುದರಿಂದ ಸಹಜವಾಗಿಯೇ ಶಿವಣ್ಣ ಫ್ಯಾನ್ಸ್‌ ಈ ಚಿತ್ರವನ್ನು ಅದ್ಧೂರಿಯಾಗಿ ಆಚರಿಸಲು ತಯಾರಿ ನಡೆಸಿದ್ದಾರೆ. ಈ ಮೂಲಕ ಕೋವಿಡ್‌ ಎರಡನೇ ಲಾಕ್‌ಡೌನ್‌ ನಂತರ ಬಿಡುಗಡೆಯಾಗುತ್ತಿರುವ ಅದ್ಧೂರಿ ಸಿನಿಮಾವಾಗಿ “ಭಜರಂಗಿ-2′ ಹೊರಹೊಮ್ಮುತ್ತಿದೆ. ಎ.ಹರ್ಷ ಅವರ ಕನಸಿಗೆ, ನಿರ್ಮಾಪಕ ಜಯಣ್ಣ ಸಾಥ್‌ ನೀಡುವ ಮೂಲಕ ಒಂದು ಫ್ಯಾಂಟಸಿ ಲೋಕವನ್ನು ಸೃಷ್ಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌, ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ.

Advertisement

“ಭಜರಂಗಿ-2′ ಚಿತ್ರದ ಕೆಲವು ಹೈಲೈಟ್ಸ್‌ಗಳು ಇಲ್ಲಿವೆ…

ಶಿವರಾಜ್‌ಕುಮಾರ್‌- ಹರ್ಷ ಕಾಂಬಿನೇಶನ್‌ನಲ್ಲಿ ಈ ಹಿಂದೆ “ಭಜರಂಗಿ-2′ ಚಿತ್ರ ಬಂದು, ಹಿಟ್‌ ಆಗಿತ್ತು. ಆದರೆ, “ಭಜರಂಗಿ-2′ ಅದರ ಮುಂದುವರೆದ ಭಾಗವಲ್ಲ. ಸಂಪೂರ್ಣ ಬೇರೆಯೇ ಕಥೆ. ಆ ಚಿತ್ರದ ನೋಡಿರದಂತಹ ಒಂದು ಹೊಸ ಲೋಕವನ್ನು ಇಲ್ಲಿ ಸೃಷ್ಟಿಸಲಾಗಿದೆ. ಚಿತ್ರದ ಟೈಟಲ್‌ ಅಷ್ಟೇ ಇಲ್ಲಿ ಮುಂದುವರೆದಿದೆಯೇ ಹೊರತು ಕಥೆಯಲ್ಲ.

* ಭಜರಂಗಿ-2 ಒಂದು ಫ್ಯಾಂಟಸಿ ಡ್ರಾಮಾ ಸಿನಿಮಾ. ನೀವಿದನ್ನು ಡಿವೋಶನಲ್‌ ಮಾಸ್‌ ಸಿನಿಮಾ ಎಂದು ಕರೆಯಬಹುದು. ಅದಕ್ಕೆ ಕಾರಣ ಚಿತ್ರದಲ್ಲಿ ಕೆಟ್ಟದು-ಒಳ್ಳೆಯದು, ದೇವರು- ರಾಕ್ಷಸರು ಈ ತರಹದ ಒಂದಷ್ಟು ಅಂಶಗಳು ಇರುವುದು. ಜೊತೆಗೆ ಹಾಲಿವುಡ್‌ ಸಿನಿಮಾಗಳಲ್ಲಿ ಕಾಣುವಂತಹ ವಿಚಿತ್ರ ಗೆಟಪ್‌ನ ಪಾತ್ರಗಳು ಈಚಿತ್ರದಲ್ಲಿದ್ದು, ಪ್ರೇಕ್ಷಕರನ್ನು ಹೊಸ ರೀತಿಯಲ್ಲಿ ರಂಜಿಸಲಿವೆ.

* ಚಿತ್ರದಲ್ಲಿ ವೈದ್ಯೋ ನಾರಾಯಣೋ ಹರಿ ಎಂಬ ಹಾಡಿದೆ. ಆ ಹಾಡಿಗೂ ಇಡೀ ಕಥೆಗೂ ಒಂದು ಲಿಂಕ್‌ ಇದೆ. ಚಿತ್ರದ ಟ್ರೇಲರ್‌ನ್ನು ಸೂಕ್ಷ್ಮವಾಗಿ ಗಮನಿಸಿದಾಗ “ವೈದ್ಯೋ ನಾರಾಯಣೋ ಹರಿ’ ಕಾನ್ಸೆಪ್ಟ್ನ ಕೆಲವು ದೃಶ್ಯಗಳು ಕಾಣಸಿಗುತ್ತವೆ.

Advertisement

* ಸಾಮಾನ್ಯವಾಗಿ ಚಿತ್ರದ ಟ್ರೇಲರ್‌ಗಳಲ್ಲಿ ಡೈಲಾಗ್‌ ಇರುತ್ತವೆ. ಆದರೆ, “ಭಜರಂಗಿ-2′ ಚಿತ್ರದ ಟ್ರೇಲರ್‌ನಲ್ಲಿ ಒಂದೇ ಒಂದು ಡೈಲಾಗ್‌ ಇಲ್ಲ. ಅದಕ್ಕೆ ಕಾರಣ, ಮಾತಿಗಿಂತ ಸನ್ನಿವೇಶ ಮುಖ್ಯ ಎಂಬುದು. ಇಡೀ ಚಿತ್ರದ ಮೇಕಿಂಗ್‌, ಹಿನ್ನೆಲೆ ಸಂಗೀತ, ಕಲಾವಿದರ ಮುಖಭಾವದಲ್ಲೇ ಕಥೆ ಹೇಳಬೇಕೆಂಬ ಕಾನ್ಸೆಪ್ಟ್ನಲ್ಲಿ ಈ ಟ್ರೇಲರ್‌ ಕಟ್ಟಿಕೊಡಲಾಗಿದೆ. ಅದರಂತೆ “ಭಜರಂಗಿ-2′ ಟ್ರೇಲರ್‌ ಹಿಟ್‌ ಆಗಿ, ಸಿನಿಮಾದ ಕುತೂಹಲವನ್ನು ಹೆಚ್ಚಿಸಿದೆ. ಜೊತೆಗೆ ಅರ್ಜುನ್‌ ಜನ್ಯಾ ಸಂಗೀತದ ಹಾಡುಗಳು ಈಗಾಗಲೇ ಹಿಟ್‌ಲಿಸ್ಟ್‌ ಸೇರಿ, ಭಜರಂಗಿಯನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯಿದಿದೆ.

* ಈ ಸಿನಿಮಾದ ಹೈಲೈಟ್‌ಗಳಲ್ಲಿ ಸೆಟ್‌ ಕೂಡಾ ಒಂದು. ಸೆಟ್‌ಗಿಂತ ಗ್ರಾಫಿಕ್‌ ಮೊರೆ ಹೋಗುತ್ತಿರುವ ಈ ಸಮಯದಲ್ಲಿ “ಭಜರಂಗಿ-2′ ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲೇ ನಡೆದಿದೆ.

*ಒಮ್ಮೆ ಸುಟ್ಟುಹೋದ ಸೆಟ್‌ ಅನ್ನೇ ಚಿತ್ರತಂಡ ಅಷ್ಟೇ ಪ್ರೀತಿಯಿಂದ ಮರು ನಿರ್ಮಾಣ ಮಾಡಿದೆ. ಈ ಮೂಲಕ ತೆರೆಮೇಲೆ ಹೊಸ ಲೋಕವೊಂದು ತೆರೆದುಕೊಳ್ಳಲಿದೆ.

* ಈ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಶಿವರಾಜ್‌ಕುಮಾರ್‌, ಭಾವನಾ, ಶ್ರುತಿ, ಶಿವರಾಜ್‌ ಕೆ.ಆರ್‌.ಪೇಟೆ… ಹೀಗೆ ಸಾಕಷ್ಟು ಮಂದಿ ನಟಿಸಿದ್ದಾರೆ. ಆದರೆ, ಇವರೆಲ್ಲರೂ ವಿಭಿನ್ನ ಪಾತ್ರ ಹಾಗೂ ಗೆಟಪ್‌ನಲ್ಲಿ ಕಾಣಿಸಿಕೊಂಡು ಚಿತ್ರದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

* ದೇಶದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ. ಈ ಮೂಲಕ ಎರಡನೇ ಲಾಕ್‌ಡೌನ್‌ ನಂತರ ಕನ್ನಡ ಚಿತ್ರರಂಗದಿಂದ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಹಾಗೂ ಅದ್ಧೂರಿ ಚಿತ್ರವಾಗಿ “ಭಜರಂಗಿ-2′ ಬಿಡುಗಡೆಯಾಗುತ್ತಿದೆ.

* ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಹಿಂದಿನ “ಭಜರಂಗಿ’ ಚಿತ್ರ ಇಂದಿನ “ಭಜರಂಗಿ’ ಚಿತ್ರ ಒಂದು ಫೀಲ್‌ ಕೊಟ್ಟರೆ, “ಭಜರಂಗಿ-2′ ಮತ್ತೂಂದು ಭಜರಂಗಿ-2′ ಮತ್ತೂಂದು ಫೀಲ್‌ ಕೊಡಲಿದೆ.

ಹೊಸದೊಂದು ಫ್ಯಾಂಟಸಿ ಹೊಸದೊಂದು ಫ್ಯಾಂಟಸಿ ಲೋಕವನ್ನು ಇಲ್ಲಿ ಸೃಷ್ಟಿಸಲಾ ಲೋಕವನ್ನು ಇಲ್ಲಿ ಸೃಷ್ಟಿಸಲಾಗಿದೆ. ಸಾಕಷ್ಟು ಅಡೆತಡೆ ದೆ. ಸಾಕಷ್ಟು ಅಡೆತಡೆ ಬಂದರೂ,  ನಿರ್ಮಾಪಕ ಜಯಣ್ಣ ಧೈರ್ಯವಾಗಿ ನಿಂತು ಚಿತ್ರವನ್ನು ಅದ್ಧೂರಿಯಾಗಿ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.. ನಿರ್ದೇಶಕ ‌ಹರ್ಷ ಶ್ರಮ ತೆರೆಮೇಲೆ ಕಾಣಲಿದೆ.- ಶಿವರಾಜ್‌ ಕುಮಾರ್‌

ರವಿ ಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next