Advertisement

ಮನುಕುಲದ ಉದ್ಧಾರಕ್ಕೆ ಭಜನೆ ಶ್ರೇಷ್ಠ ಸಾಧನ: ನ್ಯಾ|ಅಡಿಗ

12:33 PM Apr 05, 2022 | Team Udayavani |

ಹುಬ್ಬಳ್ಳಿ: ಮನುಕುಲದ ಉದ್ಧಾರಕ್ಕೆ ಭಜನೆ ಶ್ರೇಷ್ಠವಾದ ಸಾಧನವೆಂದು ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶ ಉಮೇಶ ಅಡಿಗ ಹೇಳಿದರು.

Advertisement

ಸಿದ್ಧಾರೂಢಸ್ವಾಮಿ ಮಠದಲ್ಲಿ ಸೋಮವಾರ ಸಿದ್ಧಾರೂಢ ಸ್ವಾಮಿಯವರ 186ನೇ ಜಯಂತ್ಯುತ್ಸವ ನಿಮಿತ್ತ 7ನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಯುಗದಲ್ಲಿ ನಾಮ ಸಂಕೀರ್ತನೆ, ಭಜನೆ ಮೋಕ್ಷಕ್ಕೆ ಸುಲಭವಾದ ಸಾಧನಗಳಾಗಿವೆ. ಈ ರೀತಿಯಾದ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವ ಧರ್ಮದರ್ಶಿಗಳು ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯ ಅಧ್ಯಕ್ಷ ಶಾಮಾನಂದ ಪೂಜೇರಿ ಅವರ ಸೇವಾ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.

ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿ, ಭಜನೆ ಬ್ರಹ್ಮಾನಂದ ವನ್ನು ತಂದು ಕೊಡುವ ಕಲಿಯುಗದ ಏಕೈಕ ಸಾಧನೆ. ಸಿದ್ಧಾರೂಢರ ಮಠ ಭಜನೆ, ಶಾಸ್ತ್ರ, ಪುರಾಣ, ಕೀರ್ತ ನೆಗಳಿಗೆ ಮೀಸಲಾಗಿಟ್ಟ ಪವಿತ್ರವಾದ ಕ್ಷೇತ್ರ. ಈ ಕ್ಷೇತ್ರದಲ್ಲಿ ವರ್ಷಕ್ಕೆ ಒಂದು ಬಾರಿಯಾದರೂ ಇಂತಹ ಭಜನಾ ಸ್ಪರ್ಧೆ ನಡೆಯಲೇಬೇಕು. ಭಜನೆ ಮಾಡುವುದರಿಂದ ತನು, ಮನ ಪರಿಶುದ್ಧವಾಗುತ್ತದೆ ಎಂದು ಹೇಳಿದರು.

ನಿಜಗುಣರ ಕೈವಲ್ಯ ಪದಗಳು ಉತ್ತರ ಕರ್ನಾಟಕದಲ್ಲಿ ಮಾತ್ರ ಪ್ರಚಲಿತವಾಗಿವೆ. ಆದ ಕಾರಣ ಇದನ್ನು ಇಡೀ ರಾಜ್ಯದ ತುಂಬೆಲ್ಲಾ ಪ್ರಚಾರ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾದ ವಿಷಯವೆಂದರು.

Advertisement

ಶ್ರೀಮಠದ ಚೇರ್ಮೇನ್‌ ಡಿ.ಡಿ. ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಿವಬಸವ ಸ್ವಾಮೀಜಿ, ಹಿರಿಯ ದಿವಾಣಿ ನ್ಯಾಯಾಧೀಶ ರವಿ ಆರಿ, ವೈಸ್‌ಚೇರ್ಮೇನ್‌ ಡಾ| ಗೋವಿಂದ ಮಣ್ಣೂರ, ಗೌರವ ಕಾರ್ಯದರ್ಶಿ ಜಗದೀಶ ಮಗಜಿಕೊಂಡಿ, ಧರ್ಮದರ್ಶಿಗಳಾದ ಪ್ರಕಾಶ ಉಡಿಕೇರಿ, ಜಿ.ಎಸ್‌. ನಾಯಕ, ಮಹೇಶಪ್ಪ ಹನಗೋಡಿ, ಧರಣೇಂದ್ರ ಜವಳಿ, ಕೆ.ಕೆ. ತೆರಗುಂಟಿ, ಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಮೊದಲಾದವರಿದ್ದರು.

ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷ ಶಾಮಾನಂದ ಪೂಜೇರಿ ಸ್ವಾಗತಿಸಿದರು. ಧರ್ಮದರ್ಶಿ ಎಸ್‌.ಐ. ಕೋಳಕೂರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next