ಮಲ್ಪೆ: ಭಜನೆ ಸಂಸ್ಕಾರ, ಸಂಘಟನೆಯನ್ನು ನೀಡುತ್ತದೆ. ನಾಮ ಸಂಕೀರ್ತನೆಯಲ್ಲಿ ಅಂತಹ ದಿವ್ಯಶಕ್ತಿ ಅಡಗಿದೆ. ನಿತ್ಯ ಭಜನೆ ಮಾಡುವವನಲ್ಲಿ ಸಾತ್ವಿಕತೆ ತುಂಬಿ ಬರುತ್ತದೆ.
ಅನ್ಯಾಯ ಮಾಡುವ ಗುಣ ಅವನಲ್ಲಿ ಬರುವುದಿಲ್ಲ. ಎಲ್ಲರನ್ನು ಜೊತೆಯಾಗಿ ಸೇರಿಸಿಕೊಂಡು ಬದುಕುವ ಸಂಘಟನಾ ಮನೋಭಾವ ಬೆಳೆಸುತ್ತದೆ ಎಂದು ಒಡಿಯೂರು ಶ್ರೀಕ್ಷೇತ್ರ ಶ್ರೀ ಗುರು ದೇವಾನಂದದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ರವಿವಾರ ಉದ್ಯಾವರ ಪಿತ್ರೋಡಿ ಶ್ರೀ ದತ್ತಾತ್ರೇಯ ಭಜನಾ ಮಂದಿರದ 84ನೇ ವಾರ್ಷಿಕ ಮಂಗಲೋತ್ಸವ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಪು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ನಮ್ಮ ದೈವಸ್ಥಾನ, ಮೂಲಸ್ಥಾನ, ನಾಗಸ್ಥಾನ ನಮ್ಮ ಪೂರ್ವಜರು ಬಿಟ್ಟು ಹೋದ ಅಪೂರ್ವ ಅಸ್ತಿ. ಇಲ್ಲಿನ ಕಲ್ಲು ಕಲ್ಲುಗಳಲ್ಲೂ, ಕಂಬ ಕಂಬಗಳಲ್ಲೂ ಆಸ್ತಿಕತೆಯ ಅಗಾಧತೆಯ ಸೊಲ್ಲು ಪಲ್ಲವಿಸುತ್ತಿದೆ. ನಾವು ಈ ಅನಂತ ಕಾಲದ ಆಧ್ಯಾತ್ಮಿಕ ಪಯಣ ಮಾಡಬೇಕಾಗಿದೆ ಎಂದರು.ಅಧ್ಯಕ್ಷತೆಯನ್ನು ಪಿತ್ರೋಡಿ ಶೀÅ ದತ್ತಾತ್ರೇಯ ಭಜನಾ ಮಂದಿರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಂ.ಕೆ. ಬಾಲರಾಜ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಲ್ಪೆ ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ, ಲೋಹಿತ್ ಕುಮಾರ್, ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಸಂತೋಷ್ ಸಾಲ್ಯಾನ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಾವರ ಮೊಗವೀರ ಸಭಾ ಪ್ರಧಾನ ಕಾರ್ಯದರ್ಶಿ ಯು.ಕೆ.ಸಿ. ಬಂಗೇರ, ಉದ್ಯಾವರ ಅರ್ಚಕ ರಾಜಾರಾಮ್ ಭಟ್, ಹೀರಾ ರಾಯ್‌ಚಂದ್ ಪಿತ್ರೋಡಿ, ಉದ್ಯಾವರ ಪಿತ್ರೋಡಿ ಶ್ರೀ ದತ್ತಾತ್ರೇಯ ಭಜನ ಮಂದಿರದ ಅಧ್ಯಕ್ಷ ಪುರಂದರ ಎ. ಸುವರ್ಣ, ಉದ್ಯಾವರ ಪಿತ್ರೋಡಿ ಶ್ರೀ ದತ್ತಾತ್ರೇಯ ಮಹಿಳಾ ಮಂಡಳಿ ಅಧ್ಯಕ್ಷೆ ಸುಮತಿ ಯು. ಮೈಂದನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸರ್ವ ರೀತಿಯ ಸಹಕಾರವನ್ನು ನೀಡಿದ ಪ್ರಮುಖರನ್ನು ಸಮ್ಮಾನಿಸಲಾಯಿತು.
ಮೊಗವೀರ ಹಿತ್ಲು ಗ್ರಾಮಸಭೆಯ ಕೋಶಾಧಿಕಾರಿ ಕಿರಣ್ ಕುಮಾರ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮೈಂದನ್ ವಂದಿಸಿದರು. ಚಂದೇÅಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು.