Advertisement

ಮನದ ಕ್ಲೇಶ ಕಳೆಯಲು ಭಜನೆ ಸಹಕಾರಿ: ಸತೀಶ್‌ ಕೋಟ್ಯಾನ್‌

02:00 AM Jul 25, 2018 | Team Udayavani |

ಪೆರ್ಡೂರು: ಇಲ್ಲಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಸಂಗೀತ ಶಾಲೆಯ ಆರನೇ ವಾರ್ಷಿಕೋತ್ಸವದ ಅಂಗವಾಗಿ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಜು. 22ರಂದು ಜರಗಿದ ಅಭಜಿತ ಉಡುಪಿ, ದ.ಕ. ಜಿಲ್ಲಾ ಮಟ್ಟದ ಆಯ್ದ ತಂಡಗಳ ಭಜನೆ ಜುಗಲ್‌ ಬಂದಿ ಸ್ಪರ್ಧೆಯಲ್ಲಿ ಸತತ ಮೂರನೇ ವರ್ಷ ಮಂಗಳೂರು ನೀರುಮಾರ್ಗದ ಶ್ರೀ ಸುಬ್ರಹ್ಮಣ್ಯ ಭಜನ ಮಂಡಳಿ ಪ್ರಥಮ ಬಹುಮಾನ ಗಳಿಸಿದೆ.

Advertisement

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಸತೀಶ್‌ ಕೋಟ್ಯಾನ್‌, ನಿತ್ಯದ ಬದುಕಿನಲ್ಲಿ ಕಾಡುವ ಮನದ ಕ್ಲೇಶ‌ ಕಳೆದುಕೊಂಡು ಪ್ರಫ‌ುಲ್ಲಗೊಳ್ಳಲು ಭಜನೆ ಸಹಕರಿಸುತ್ತದೆ. ಮಾತ್ರವಲ್ಲದೆ ಸಜ್ಜನರಾಗಿ ಬಾಳುವಂತೆ ಮಾಡುತ್ತದೆ. ಭಜನೆ ಇದ್ದಲ್ಲಿ ದೇವರಿರುತ್ತಾನೆ ಎಂದರು.

ಭಜನೆ ಕ್ಷೇತ್ರದಲ್ಲಿ ದಶಕಗಳ ಸೇವೆ ಸಲ್ಲಿಸಿದ ಗ್ರಾಮದ ಹಿರಿಯರಾದ ಭುಜಂಗ ಶೆಟ್ಟಿ, ಹೆರ್ಡೆ ಸಣ್ಣಮನೆ  ಹಾಗೂ ಬಿ.ಕೆ. ಪದ್ಮನಾಭ ಉಪಾಧ್ಯಾಯ, ಬೆಳ್ಳರ್ಪಾಡಿ ಇವರನ್ನು ಸಮ್ಮಾನಿಸಲಾಯಿತು. ಸ್ಪರ್ಧೆಯ ಹಾಗೂ ಶಾಲೆಯ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಭಜನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಿತಿಯ ಸದಸ್ಯರ ಕುಟುಂಬದಲ್ಲಿ ಈ ಸಾಲಿನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ಸಮಿತಿಯ ಗೌರವಾಧ್ಯಕ್ಷ ಶಾಂತಾರಾಮ ಸೂಡ, ಉಪಾಧ್ಯಕ್ಷ ಪ್ರಮೋದ್‌ ರೈ ಪಳಜೆ, ತೀರ್ಪುಗಾರರಾದ ಖ್ಯಾತ ಗಾಯಕ ಚಂದ್ರಶೇಖರ ಕೆದಿಲಾಯ, ಉಮಾಮಹೇಶ್ವರಿ  ಭಟ್‌ ಆತ್ರಾಡಿ ಹಾಗೂ ಶಶಿಪ್ರಭಾ ಮಾತನಾಡಿದರು. ವೇದಿಕೆಯಲ್ಲಿ ತಾ. ಪಂ. ಸದಸ್ಯ ಸುಭಾಸ್‌ ನಾಯ್ಕ, ಪೆರ್ಡೂರು ಪಂಚಾಯತ್‌ ಅಧ್ಯಕ್ಷೆ ಶಾಂಭವಿ ಕುಲಾಲ್‌, ಸಮಿತಿಯ ಕಾರ್ಯದರ್ಶಿ, ಸಂಗೀತ ಶಾಲೆಯ ಶಿಕ್ಷಕಿ ಅಕ್ಷತಾ ರಾವ್‌ ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ಯ ನಿರೂಪಿಸಿ, ವಂದಿಸಿದರು.

ಬಹುಮಾನ ವಿಜೇತರು
ಶ್ರೀ  ಸುಬ್ರಹ್ಮಣ್ಯ ಭಜನ ಮಂಡಳಿ, ನೀರುಮಾರ್ಗ, ಮಂಗಳೂರು (ಪ್ರಥಮ), ಅಮೃತವರ್ಷಿಣಿ ಭಜನ ಮಂಡಳಿ, ಪಿತ್ರೋಡಿ, ಉದ್ಯಾವರ (ದ್ವಿತೀಯ), ಮಕ್ಕಳ ಶ್ರೀ ಮಹಾಲಕ್ಷ್ಮೀ ಭಜನ ಮಂಡಳಿ, ಕಾಪು ಪೊಲಿಪು (ತೃತೀಯ), ವಿಶೇಷ ಬಹುಮಾನ: ಶಿವರಂಜಿನಿ ಭಜನ  ಮಂಡಳಿ, ಸುರತ್ಕಲ್‌, ಭಗವಾನ್‌ ಶಿರ್ಡಿ ಸತ್ಯಸಾಯಿ ಸೇವಾ ಕ್ಷೇತ್ರ, ಬೆಳ್ತಂಗಡಿ.

Advertisement

ವೈಯಕ್ತಿಕ ವಿಭಾಗದಲ್ಲಿ ಈಶ್ವರ್‌, ಮಕ್ಕಳ ಶ್ರೀ ಮಹಾಲಕ್ಷ್ಮೀ ಭಜನ ಮಂಡಳಿ, ಕಾಪು ಪೊಲಿಪು (ಉತ್ತಮ ಗಾಯಕ), ಸುಮನ್‌ ದೇವಾಡಿಗ (ತಬಲ), ಪ್ರಸಾದ್‌ (ಹಾರ್ಮೋನಿಯಂ) ಶ್ರೀ ಸುಬ್ರಹ್ಮಣ್ಯ ಭಜನ  ಮಂಡಳಿ, ನೀರುಮಾರ್ಗ, ಮಂಗಳೂರು.

ವಿದ್ಯಾರ್ಥಿಗಳಿಗಾಗಿ ನಡೆದ‌ ಸ್ಪರ್ಧೆಗಳ ವಿಜೇತರು: ಕಿರಿಯರ ವಿಭಾಗ: ಸಾನಿಧ್ಯ (ಪ್ರಥಮ), ಸೌಮ್ಯಶ್ರೀ (ದ್ವಿತೀಯ), ಶಶಾಂಕ್‌  (ತೃತೀಯ),
ಪ್ರೌಢ ವಿಭಾಗ: ಸೌಜನ್ಯಾ (ಪ್ರಥಮ), ಶಯನಾ (ದ್ವಿತೀಯ), ದಿಶಾ ಯು.ಶೆಟ್ಟಿ (ತೃತೀಯ),
ಹಿರಿಯರ ವಿಭಾಗ: ನಾಗಲತಾ (ಪ್ರಥಮ), ಕುಸುಮಾ (ದ್ವಿತೀಯ), ಶ್ರೇಯಾ (ಪ್ರೋತ್ಸಾಹಕ).

Advertisement

Udayavani is now on Telegram. Click here to join our channel and stay updated with the latest news.

Next