Advertisement

ಭಜನೆಯಿಂದ ಧರ್ಮಜಾಗೃತಿ: ಒಡಿಯೂರು ಶ್ರೀ

11:40 AM Mar 17, 2018 | Karthik A |

ಒಡಿಯೂರು: ಭಜನೆ ನೈತಿಕ ಮೌಲ್ಯ ಹೆಚ್ಚಿಸುತ್ತದೆ. ಭಜನೆಯೇ ಬದುಕು ಎಂಬ ಚಿಂತನೆಯ ಮೂಲಕ ಸಂಸ್ಕೃತಿ, ಸಂಸ್ಕಾರಗಳ ಆವಾಹನೆಯಾಗುತ್ತದೆ. ಭಜನೆ ಮೂಲಕ ಧರ್ಮಜಾಗೃತಿಯಾಗುತ್ತದೆ ಎಂದು ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು. ಅವರು ಬುಧವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಾ. 31ರಂದು ನಡೆಯಲಿರುವ ಹನುಮೋತ್ಸವದ ಅಂಗವಾಗಿ ಆಯೋಜಿಸಲಾದ ಭಗವನ್ನಾಮ ಸಂಕೀರ್ತನ ಪಾದಯಾತ್ರೆ ಬಗ್ಗೆ ಸಮಾಲೋಚನೆ ಸಭೆಯಲ್ಲಿ ಆಶೀರ್ವಚನ ನೀಡಿದರು.

Advertisement

ಇಹ-ಪರಕ್ಕೆ ಭಜನೆ ಸೇತುವಾಗಿದೆ. ಭಜನೆಗೆ ಖರ್ಚು ವೆಚ್ಚಗಳಿಲ್ಲ. ನಿರ್ಮಲವಾದ ಮನಸ್ಸು ಬೇಕು. ಭಜನೆಯಿಂದ ದೋಷಗಳ ಪರಿಹಾರ ಸಾಧ್ಯ. ಭಗವನ್ನಾಮ ಸಂಕೀರ್ತನೆಯಿಂದ ಭಗವಂತನ ಅನುಗ್ರಹಕ್ಕೆ ಪಾತ್ರನಾಗಬಹುದು ಎಂದರು. ಸಾಧ್ವಿ  ಮಾತಾನಂದಮಯೀ ಅವರು ಆಶೀರ್ವಚನ ನೀಡಿದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಮಾತನಾಡಿ, ಭಗವನ್ನಾಮ ಸಂಕೀರ್ತನ ಪಾದ ಯಾತ್ರೆ ಮಾ. 31ರಂದು ಬೆಳಗ್ಗೆ 7ಕ್ಕೆ ವಿಟ್ಲ ಮಹ ತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಿಂದ ಹೊರಟು ಒಡಿಯೂರು ಕ್ಷೇತ್ರಕ್ಕೆ ಆಗಮಿಸಲಿದೆ. ಸಂತರು, ಭಜನ ಮಂಡಳಿ ಸದಸ್ಯರು, ಭಕ್ತರು ಭಾಗವಹಿಸಲಿದ್ದಾರೆ ಎಂದರು.

ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ, ವಿಟ್ಲ ಭಜನ ಪರಿಷತ್‌ನ ಅಧ್ಯಕ್ಷ ಶೀನಪ್ಪ ನಾಯ್ಕ, ದಿನೇಶ್‌ ಶೆಟ್ಟಿ ಪಟ್ಲ, ಒಡಿಯೂರು ತುಳು ಕೂಟದ ಅಧ್ಯಕ್ಷ ಎಚ್‌.ಕೆ. ಪುರುಷೋತ್ತಮ, ದೇವಿಪ್ರಸಾದ್‌ ಶೆಟ್ಟಿ, ಪುತ್ತೂರು ಜಿಲ್ಲಾ ವಿಹಿಂಪ ಉಪಾಧ್ಯಕ್ಷ ಆನಂದ ಕಲ್ಲಕಟ್ಟ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಮಂಗಳೂರು ಘಟಕದ ಅಧ್ಯಕ್ಷ ಜಯಂತ್‌ ಜೆ. ಕೋಟ್ಯಾನ್‌, ದೇವಿಪ್ರಸಾದ್‌ ಶೆಟ್ಟಿ ಅನಂತಾಡಿ ಮತ್ತಿತರರಿದ್ದರು. ಯೋಜನೆಯ ಬಂಟ್ವಾಳ ತಾ|
ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಸ್ವಾಗತಿಸಿ, ನಿರೂಪಿಸಿದರು. ವಿಶ್ವನಾಥ ಶೆಟ್ಟಿ ವಂದಿಸಿದರು.

ಸಂಚಾಲನ ಸಮಿತಿ
ಸಂಚಾಲನ ಸಮಿತಿಯನ್ನು ರಚಿಸಲಾಯಿತು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ ಅವರನ್ನು ಪ್ರಧಾನ ಸಂಚಾಲಕರಾಗಿ ಹಾಗೂ ಆನಂದ ಕಲ್ಲಕಟ್ಟ ಮತ್ತು ದಿನೇಶ್‌ ಶೆಟ್ಟಿ ಪಟ್ಲ ಅವರನ್ನು ಸಹಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ರಾಮಕೃಷ್ಣ ಆಚಾರ್ಯ, ಶ್ರೀಕಾಂತ್‌ ಭಟ್‌, ಸದಾಶಿವ ಶೆಟ್ಟಿ ಮಡಿಯಾಲ, ಜನಾರ್ದನ ಬೆರಿಪದವು, ದಿನೇಶ್‌ ಶೆಟ್ಟಿ ಪಟ್ಲ, ದೇಲಂತಮಜಲು ಗಣೇಶ್‌ ಭಟ್‌, ರಾಜೇಶ್‌ ಕರವೀರ, ರಾಜೇಂದ್ರ ರೈ, ದಯಾನಂದ ಶೆಟ್ಟಿ ಉಜಿರೆಮಾರು, ರಾಜೇಶ್‌ ಆರ್‌.ಕೆ. ಆರ್ಟ್ಸ್ ವಿಟ್ಲ, ಹೇಮಾನಂದ ಶೆಟ್ಟಿ, ದಿನೇಶ್‌ ಮಾಮೇಶ್ವರ, ಜಯರಾಮ ನಾಯ್ಕ ಕುಂಟ್ರಕಳ, ಶೇಖರ್‌ ಮಲಾರು, ಕೈಯ್ಯೂರು ನಾರಾಯಣ ಭಟ್‌, ಮಂಜುನಾಥ ಡಿ. ಶೆಟ್ಟಿ ಇರಾ, ಸದಾಶಿವ ಕುಲಾಲ್‌ ವರ್ಕಾಡಿ, ವೆಂಕಪ್ಪ ಶೆಟ್ಟಿ ಮೇರ್ಕಳ, ಬಾಲಕೃಷ್ಣ ಮೇಲಂಟ, ವಿನೋದ್‌ ಶೆಟ್ಟಿ ಪಟ್ಲ, ಸುದರ್ಶನ್‌ ಆಳ್ವ ಅನೆಯಾಲಗುತ್ತು, ಪ್ರದೀಪ್‌ ಶೆಟ್ಟಿ ಪಾಲಿಗೆ, ರೇವತಿ ಬೆರಿಪದವು, ವನಿತಾ ವಿ. ಶೆಟ್ಟಿ ಸುಣ್ಣಂಬಳ, ವೇದಾವತಿ ಶಿರಂಕಲ್ಲು, ಶಶಿಕಲಾ ಡಿ. ಶೆಟ್ಟಿ, ರೇಣುಕಾ ಕನ್ಯಾನ, ಲೀಲಾ ಕೆ., ಕಾವ್ಯಲಕ್ಷ್ಮೀ ಅವರನ್ನು ವಿವಿಧ ಗ್ರಾಮ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.

Advertisement

ದಾಸರ ಪದಗಳು ಭಜನೆಯಲ್ಲಿ ಲೀನವಾಗಿಸುತ್ತವೆ. ಭಕ್ತಿ ಹುಟ್ಟಿಸುತ್ತವೆ. ಭಜನೆಗೆ ಇರುವ ಶಕ್ತಿ ಅಪಾರ. ಅದನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ.
– ಸಾಧ್ವಿ ಮಾತಾನಂದಮಯೀ

Advertisement

Udayavani is now on Telegram. Click here to join our channel and stay updated with the latest news.

Next