Advertisement

ಅಖಾಡಕ್ಕಿಳಿದ ‘ಭೈರತಿ ರಣಗಲ್’

03:14 PM Aug 03, 2023 | Team Udayavani |

ಕೆಲ ದಿನಗಳ ಹಿಂದಷ್ಟೇ ನಟ ಶಿವರಾಜಕುಮಾರ್‌ ಅಭಿನಯದ “ಭೈರತಿ ರಣಗಲ್‌’ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿತ್ತು. ಮುಹೂರ್ತದ ಬಳಿಕ ಕೆಲ ದಿನಗಳ ಕಾಲ ಗ್ಯಾಪ್‌ ತೆಗೆದುಕೊಂಡಿದ್ದ ಚಿತ್ರತಂಡ ಇದೀಗ “ಭೈರತಿ ರಣಗಲ್‌’ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಿದೆ.

Advertisement

ಚಿತ್ರತಂಡದ ಯೋಜನೆಯಂತೆ ಆಗಸ್ಟ್‌ ಆರಂಭದಿಂದಲೇ ಸದ್ದಿಲ್ಲದೆ “ಭೈರತಿ ರಣಗಲ್‌’ ಸಿನಿಮಾದ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಮೊದಲ ಹಂತದಲ್ಲಿ ಸಿನಿಮಾದ ಬರುವ ಮಾತುಕಥೆ (ಟಾಕಿ ಪೋರ್ಷನ್‌) ಚಿತ್ರೀಕರಿಸುತ್ತಿದೆ. ನಟ ಶಿವರಾಜಕುಮಾರ್‌ ಸೇರಿದಂತೆ ಹಲವು ಕಲಾವಿದರು “ಭೈರತಿ ರಣಗಲ್‌’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.

ನಿರ್ದೇಶಕ ನರ್ತನ್‌ “ಭೈರತಿ ರಣಗಲ್’ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದು, “ಮμ¤’ ಸಿನಿಮಾದ ಪ್ರೀಕ್ವೆಲ್‌ ಆಗಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. “ಮμ¤’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು “ಭೈರತಿ ರಣಗಲ್‌’ ಸಿನಿಮಾದಲ್ಲೂ ಮುಂದುವರೆಯಲಿದ್ದಾರೆ ಎನ್ನುವುದು ಚಿತ್ರತಂಡದ ಮೂಲಗಳ ಮಾಹಿತಿ.

“ಗೀತಾ ಪಿಕ್ಚರ್’ ಬ್ಯಾನರ್‌ನಲ್ಲಿ ಶ್ರೀಮತಿ ಗೀತಾ ಶಿವರಾಜ ಕುಮಾರ್‌ ನಿರ್ಮಿಸುತ್ತಿರುವ “ಭೈರತಿ ರಣಗಲ್’ ಸಿನಿಮಾ ಮುಂದಿನ ವರ್ಷದ ಮಧ್ಯಭಾಗದಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next