Advertisement
ನಗರದ ಕಲಾಮಂದಿರದಲ್ಲಿ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಭೈರಪ್ಪನವರ ಕೃತಿಗಳಲ್ಲಿ ನನ್ನನ್ನು ಅತಿಯಾಗಿ ಕಾಡಿದ್ದು ಪರ್ವ. ಪಂಪ ಭಾರತದಲ್ಲಿ ಅರ್ಜುನನ ಬಗ್ಗೆ, ಕುಮಾರವ್ಯಾಸ ಭಾರತದಲ್ಲಿ ಕೃಷ್ಣನ ಬಗ್ಗೆ ಹೇಳಿದರು. ಪರ್ವದಲ್ಲಿ ಭೈರಪ್ಪನವರು ಭಾರತವನ್ನು ವಿಶಿಷ್ಟವಾಗಿನೋಡಿದ್ದಾರೆ ಎಂ ದರು.
ತಾವು ಹಂಪಿ ವಿವಿ ಕುಲಪತಿಯಾಗಿದ್ದಾಗ ಪ್ರವಾಹ ಬಂದು ಗ್ರಂಥಾಲಯದ ಪುಸ್ತಕಗಳೆಲ್ಲ ಕೊಚ್ಚಿ ಹೋದಾಗ, ನೀರಿನಿಂದ ತೊಯ್ದಾಗ ಬಟ್ಟೆ ಒಣಗಿ ಹಾಕುವಂತೆ ಅವನ್ನೆಲ್ಲ ಬಿಸಿಲಿನಲ್ಲಿ ಹಾಕಿದ್ದೆ. ಅಲ್ಲಿಗೆ ಧಾವಿಸಿದ ಭೈರಪ್ಪ ಆ ವೇಳೆ ಎಂಟು ದಿನ ಅಲ್ಲಿಯೇ ಇದ್ದು ಎಲ್ಲವನ್ನೂ ನೋಡಿಕೊಂಡರೆಂದು ಕಂಬಾರರು ಸ್ಮರಿಸಿದರು. ಭೈರಪ್ಪನವರ ಮುಂದೆ ನಾನು ಮಾತನಾಡೋದು ಸ್ವಲ್ಪ ಕಷ್ಟ. ನಾನು ಈ ಕಾರ್ಯಕ್ರಮಕ್ಕೆ ಬರುವ ಮುನ್ನ ಏನು ಮಾತನಾಡಬೇಕೆಂದು ಅಂದುಕೊಂಡಿದ್ದೆನೋ ಆ ರೀತಿ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಕಂಬಾರರು ಮಧ್ಯೆ ನಕ್ಕು ನುಡಿದರು. ಸಾಹಿತಿ ಡಾ. ಎಸ್.ಎಲ್. ಭೈರಪ್ಪ, ಭಾಷಾ ಶಾಸOಉಜ್ಞ ಡಾ. ಪ್ರಧಾನ ಗುರುದತ್ತ, ಶತಾವಧಾನಿ ಗಣೇಶ್ ಇತರರಿದ್ದರು.
ಭೈರಪ್ಪ ಬರಹದಲ್ಲಿದೆ ಅಧ್ಯಯನಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರ ಬರಹದಲ್ಲಿ ವ್ಯಾಪಕ ಅಧ್ಯಯನ, ಆಳವಾದ ಸಂಶೋಧನೆ,
ಗಹನವಾದ ಚಿಂತನೆ, ಪೂರ್ವಗ್ರಹರಹಿತ ಗ್ರಹಿಕೆ, ಐತಿಹಾಸಿಕ ಪರಿಪೇಕ್ಷ ಎಂಬ ಐದು ಅಂಶಗಳು
ಪ್ರಧಾನವಾಗಿವೆ ಎಂದು ಲೇಖಕ, ಭಾಷಾ ಶಾಸOಉಜ್ಞ ಡಾ. ಪ್ರಧಾನ ಗುರುದತ್ತ ವಿಶ್ಲೇಷಿಸಿದರು.
ಎಸ್.ಎಲ್. ಭೈರಪ್ಪ ಸಾಹಿತ್ಯೋತ್ಸವದಲ್ಲಿ ಭೈರಪ್ಪನವರೊಂದಿಗಿನ ಸಂದರ್ಶನಗಳ ಸಂಕಲನವನ್ನು
ಬಿಡುಗಡೆ ಮಾಡಿ ಮಾತನಾಡಿದರು. ಭೈರಪ್ಪನವರು ಹಿಂದುತ್ವವಾದಿ ಎಂದು ಹೇಳುವವರು, ಪ್ಲೇಟೋನನ್ನು ಸರಿಯಾಗಿ ಓದಿಕೊಂಡಿಲ್ಲ. ಓದಿಕೊಂಡಿದ್ದರೂ ಅರ್ಥ ಮಾಡಿಕೊಂಡಿಲ್ಲ. ತಪ್ಪಾಗಿ ಅರ್ಥೈಸಿದ್ದಾರೆ. ಅವರು ಬ್ರಿಟಿಷ್ ಸಾಹಿತಿಗಳಂತೆ ನಕಾರಾತ್ಮಕವಾಗಿ ಚಿಂತಿಸುತ್ತಾರೆ. ಅವರ ಅವಿವೇಕಕ್ಕೆ ಏನು ಹೇಳಬೇಕು? ಎಂದು ಭೈರಪ್ಪನವರು ಪ್ರಶ್ನಿಸುತ್ತಾರೆ. ಇಂಥವರಿಗೆ ಭೈರಪ್ಪನವರು ಉತ್ತರ ಕೊಡಲು ಹೋಗಿಲ್ಲ. ಉತ್ತರ ಕೊಡಲು ಹೋಗಿದ್ದರೆ ನನ್ನ ಬರವಣಿಗೆಯ ಸತ್ವ ಹೋಗುತ್ತಿತ್ತು . ಆದ್ದರಿಂದ ಸಂಪೂರ್ಣವಾಗಿ ಅಲಕ್ಷಿಸಿದೆ ಎಂದು ಭೈರಪ್ಪನವರೇ ತಿಳಿಸಿದ್ದಾರೆ. 16 ಮಂದಿ ಲೇಖಕರು ಭೈರಪ್ಪನವರನ್ನು ಸಂದರ್ಶಿಸಿರುವ ಚಿಂತನ ಮಂಥನ ಕೃತಿಯನ್ನು ಡಾ. ಪ್ರಧಾನ ಗುರುದತ್ತ ಬಿಡುಗಡೆ ಮಾಡಿದರು.