Advertisement

ಏಪ್ರಿಲ್‌ನಲ್ಲಿ “ಭೈರಾದೇವಿ’

09:08 AM Mar 05, 2020 | Lakshmi GovindaRaj |

ರಾಧಿಕಾ ಅಭಿನಯದ ಹಾರರ್‌ ಚಿತ್ರ “ದಮಯಂತಿ’ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಅವರ ಮತ್ತೂಂದು ಚಿತ್ರ “ಭೈರಾದೇವಿ’ ಬಿಡುಗಡೆಯ ಹಂತಕ್ಕೆ ಬಂದಿದೆ. ಈಗಾಗಲೇ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ. ಹಾಗಾದರೆ ಚಿತ್ರ ಬಿಡುಗಡೆ ಯಾವಾಗ ಎಂದು ನೀವು ಕೇಳಬಹುದು.

Advertisement

ಅದಕ್ಕೆ ಉತ್ತರ ಏಪ್ರಿಲ್‌. ಹೌದು, ಏಪ್ರಿಲ್‌ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಚಿತ್ರದ ಕೆಲಸ ಕಾರ್ಯಗಳು ಬಿರುಸಿನಿಂದ ನಡೆಯುತ್ತಿದೆ. ಸದ್ಯ ಚೆನ್ನೈನಲ್ಲಿ ರೀರೆಕಾರ್ಡಿಂಗ್‌ ಕೆಲಸದಲ್ಲಿ ನಿರ್ದೇಶಕ ಶ್ರೀಜಯ್‌ ನಿರತರಾಗಿದ್ದಾರೆ. “ಭೈರಾದೇವಿ’ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಮೂರು ಭಾಷೆಗೆ ತಕ್ಕಂತೆ ಚಿತ್ರೀಕರಿಸ ಲಾಗಿದೆ ಕೂಡಾ. ಇನ್ನು, “ಭೈರಾದೇವಿ’ ಚಿತ್ರದಲ್ಲಿ ರಾಧಿಕಾ ಅಘೋರಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ಈ ಚಿತ್ರಕ್ಕಾಗಿ ಸ್ಮಶಾನದಲ್ಲೂ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ರಮೇಶ್‌ ಅರವಿಂದ್‌, ರಂಗಾಯಣ ರಘು ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ರಾಧಿಕಾ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next