Advertisement

ಫೈನಲ್‌ಗೂ ಮುನ್ನ ಕಾಣೆಯಾಗಿತ್ತು ನೀರಜ್‌ ಚೋಪ್ರಾ ಜಾವೆಲಿನ್‌! 

12:24 AM Aug 26, 2021 | Team Udayavani |

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ ಮುಗಿದು ಕೆಲವು ದಿನ ಕಳೆದ ಬಳಿಕ ಜಾವೆಲಿನ್‌ ಫೈನಲ್‌ಗ‌ೂ ಮುನ್ನ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ಚಿನ್ನದ ಹುಡುಗ ನೀರಜ್‌ ಚೋಪ್ರಾ ಬಿಚ್ಚಿಟ್ಟಿದ್ದಾರೆ. ಅವರ ಜಾವೆಲಿನ್‌ ಕಾಣೆಯಾದ ಕತೆ ಇದು!

Advertisement

“ಪಂದ್ಯಾವಳಿಯ ಫೈನಲ್‌ ಹಂತದ ವೇಳೆ ನನ್ನ ಜಾವೆಲಿನ್‌ ಕಾಣೆಯಾಗಿತ್ತು. ಬಹಳ ಹೊತ್ತು ಹುಡುಕಿದೆ. ಆದರೆ ನನಗದು ಎಲ್ಲೂ ಕಾಣಲಿಲ್ಲ. ಇದ್ದಕ್ಕಿದ್ದಂತೆ ಪಾಕಿಸ್ಥಾನದ ಕ್ರೀಡಾಪಟು ಅರ್ಷದ್‌ ನದೀಮ್‌ ಈ ಜಾವೆಲಿನ್‌ ಹಿಡಿದು ತಿರುಗಾಡುತ್ತಿದ್ದುದನ್ನು ಗಮನಿಸಿದೆ. ಕೂಡಲೇ ಆತನಲ್ಲಿ ತೆರಳಿ, “ಭಾಯ್‌ ಈ ಜಾವೆಲಿನ್‌ ನನ್ನದು, ನನಗೆ ಕೊಡಿ, ನಾನು ಈ ಜಾವೆಲಿನ್‌ನಲ್ಲೇ ಸ್ಪರ್ಧಿಸಬೇಕಿದೆ…’ ಎಂದೆ. ಕೂಡಲೇ ಅವರು ನನಗೆ ಹಿಂತಿರುಗಿಸಿದರು’ ಎಂದು ಚೋಪ್ರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

“ನಾನು ಮೊದಲ ಎಸೆತದ ವೇಳೆ ಬಹಳ ತರಾತುರಿಯಲ್ಲಿದ್ದುದನ್ನು ನೀವು ಗಮನಿಸಿರಬಹುದು. ಅದಕ್ಕೆ ಈ ಘಟನೆಯೇ ಕಾರಣ’ ಎಂದು ನೀರಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next