Advertisement
ವಸಂತಪುರದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಶನಿವಾರ “ಗೀತಾ ದಾನ ಯಜ್ಞ ಮಹೋತ್ಸವ’ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಶಾಂತಿ ಪ್ರಿಯ ದೇಶ, ಬೇರೆ ದೇಶಗಳ ಮೇಲೆ ದಾಳಿ ಮಾಡಿಲ್ಲ. ಬೇರೆ ದೇಶದ ಭೂಮಿ ಆಕ್ರಮಿಸಿಕೊಳ್ಳಲೂ ಹೋಗಿಲ್ಲ. ನಮ್ಮ ದೇಶ ಯಾರನ್ನೂ ಕೆಣಕಲು ಹೋಗುವುದೇ ಇಲ್ಲ. ಒಂದು ವೇಳೆ ಭಾರತವನ್ನು ಕೆಣಕಿದರೆ, ಅಂತಹವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದರು.
ಭಗವದ್ಗೀತೆ ಕೇವಲ ಗ್ರಂಥವಲ್ಲ. ಅನಾದಿ ಕಾಲದಿಂದ ಜ್ಞಾನಾಮೃತ ಹಂಚುತ್ತಾ ಬಂದಿದೆ. ಜಗತ್ತಿನಲ್ಲಿ ಜೀವನದ ಆನಂದ ಕಲಿಸುವುದಕ್ಕೆ ಹಲವು ಗ್ರಂಥಗಳಿವೆ. ಆದರೆ, ಭಗವದ್ಗೀತೆ ಮೃತ್ಯುವಿನ ಆನಂದವನ್ನೂ ಕಲಿಸುತ್ತದೆ. ಇದು ಶಾಶ್ವತ, ಸತ್ಯ, ನಿತ್ಯ ನಿರಂತರವಾಗಿರುವುದು. ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ಮಧ್ಯೆ ಸಂಘರ್ಷ ಬರಬಾರದು. ಪರಮಾಣು ಪರೀಕ್ಷೆಯ ವೇಳೆಯೂ ಭಗವದ್ಗೀತೆಯ ಬೋಧನೆ ಮಾಡಲಾಗಿದೆ ಎಂದು ಭಗವದ್ಗೀತೆಯ ಮಹತ್ವವನ್ನು ಹೇಳಿದರು.
Related Articles
Advertisement
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಭಗವದ್ಗೀತೆಯು ಎಲ್ಲ ಧರ್ಮಗಳ ಮೂಲ. ಅದು ಅಸ್ತಿತ್ವದ ಎಲ್ಲ ಸಮಸ್ಯೆಗಳಿಗೆ ಸೂಕ್ಷದೃಷ್ಟಿಯ ಪರಿಹಾರ ನೀಡುತ್ತದೆ. ಶ್ರೀ ಪ್ರಭುಪಾದರ ಪ್ರಯತ್ನಗಳಿಂದ ಲಕ್ಷಾಂತರ ಜನ ಇಂದು ಶ್ರೀಕೃಷ್ಣನಿಗೆ ಆಕರ್ಷಿತರಾಗಿದ್ದಾರೆ. ಸನಾತನ ಧರ್ಮದ ಸಂದೇಶ ಹರಡುವಲ್ಲಿ “ಗೀತಾ ದಾನ ಯಜ್ಞ’ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಇಸ್ಕಾನ್ ಅಧ್ಯಕ್ಷ ಮಧುಪಂಡಿತದಾಸ ಮಾತನಾಡಿ, ಗೀತೆಯ ಗಾಢವಾದ ಮತ್ತು ಪರಮ ಜ್ಞಾನವು ಎಲ್ಲ ವ್ಯಕ್ತಿ, ಕುಟುಂಬ, ಸಮಾಜ, ಮತ್ತು ರಾಷ್ಟ್ರಗಳನ್ನು ಪರಿಪೂರ್ಣ ಪಥದತ್ತ ಕರೆದೊಯ್ಯಲು ಮಾರ್ಗದರ್ಶನ ನೀಡಬಲ್ಲದು ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟಿ.ವಿ. ಮೋಹನದಾಸ ಪೈ, ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ನಟಿ ಸಪ್ತಮಿ ಗೌಡ ಮತ್ತಿತರರು ಉಪಸ್ಥಿತರಿದ್ದರು.
1 ಲಕ್ಷ ಪ್ರತಿ ವಿತರಿಸುವ ಗುರಿಸಂಗೀತ ವಿದ್ವಾಂಸ ವಿದ್ಯಾಭೂಷಣರು ವಾಚಿಸಿರುವ ಭಗವದ್ಗೀತೆಯ ವಿಡಿಯೋವನ್ನು ಆರು ಭಾಷೆಯಲ್ಲಿನ ಅದರ ಅನುವಾದದೊಂದಿಗೆ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಒಂದು ತಿಂಗಳು “ಗೀತಾ ದಾನ ಯಜ್ಞ’ ಕಾರ್ಯಕ್ರಮದ ಅಂಗವಾಗಿ ಇಸ್ಕಾನ್ ಮಂದಿರಗಳ ಸಮೂಹವು ಭಗವದ್ಗೀತೆಯ 1 ಲಕ್ಷ ಪ್ರತಿ ವಿತರಿಸುವ ಗುರಿ ಹೊಂದಿದೆ. ಆತ್ಮನಿರ್ಭರತೆ ಆತ್ಮವಿಶ್ವಾಸದಿಂದ ಬರುತ್ತದೆ. ಯಾವುದಾದರೂ ಸಮಸ್ಯೆಗಳಿಗೆ ನಾವು ಒಳಪಟ್ಟಾಗ ಭಗವದ್ಗೀತೆಯ ಪುಟಗಳನ್ನು ತಿರುವಿ ಹಾಕಿದರೆ ಸಮಸ್ಯೆಗೆ ಪರಿಹಾರ ದೊರೆಕುತ್ತದೆ. ಪ್ರಯತ್ನ ಮಾಡಿ ನೋಡಿ. ಇದು ನನ್ನ ಅನುಭವದ ಮಾತು. ಪ್ರತಿ ಶ್ಲೋಕದಲ್ಲಿ ಬದುಕಿನ ಸಾರದ ಜೊತೆಗೆ ಪರಿಹಾರವನ್ನೂ ಕೂಡ ಧರ್ಮದತ್ತವಾಗಿ ನೀಡಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಭಗವದ್ಗೀತೆಯು ಎಲ್ಲ ಧರ್ಮಗಳ ಮೂಲ. ಅದು ಅಸ್ತಿತ್ವದ ಎಲ್ಲ ಸಮಸ್ಯೆಗಳಿಗೆ ಸೂಕ್ಷ¾ದೃಷ್ಟಿಯ ಪರಿಹಾರ ನೀಡುತ್ತದೆ. ಶ್ರೀ ಪ್ರಭುಪಾದರ ಪ್ರಯತ್ನಗಳಿಂದ ಲಕ್ಷಾಂತರ ಜನ ಇಂದು ಶ್ರೀಕೃಷ್ಣನಿಗೆ ಆಕರ್ಷಿತರಾಗಿ¨ªಾರೆ. ಸನಾತನ ಧರ್ಮದ ಸಂದೇಶ ಹರಡುವಲ್ಲಿ “ಗೀತಾ ದಾನ ಯಜ್ಞ’ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಇಸ್ಕಾನ್ ಅಧ್ಯಕ್ಷ ಮಧುಪಂಡಿತದಾಸ ಮಾತನಾಡಿ, ಗೀತೆಯ ಗಾಢವಾದ ಮತ್ತು ಪರಮ ಜ್ಞಾನವು ಎಲ್ಲ ವ್ಯಕ್ತಿ, ಕುಟುಂಬ, ಸಮಾಜ, ಮತ್ತು ರಾಷ್ಟ್ರಗಳನ್ನು ಪರಿಪೂರ್ಣ ಪಥದತ್ತ ಕರೆದೊಯ್ಯಲು ಮಾರ್ಗದರ್ಶನ ನೀಡಬಲ್ಲದು ಎಂದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟಿ.ವಿ. ಮೋಹನದಾಸ ಪೈ, ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ನಟಿ ಸಪ್ತಮಿ ಗೌಡ ಮತ್ತಿತರರು ಉಪಸ್ಥಿತರಿದ್ದರು. ಸಂಗೀತ ವಿದ್ವಾಂಸ ವಿದ್ಯಾಭೂಷಣರು ವಾಚಿಸಿರುವ ಭಗವದ್ಗೀತೆಯ ವಿಡಿಯೋವನ್ನು ಆರು ಭಾಷೆಯಲ್ಲಿನ ಅದರ ಅನುವಾದದೊಂದಿಗೆ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಒಂದು ತಿಂಗಳು “ಗೀತಾ ದಾನ ಯಜ್ಞ’ ಕಾರ್ಯಕ್ರಮದ ಅಂಗವಾಗಿ ಇಸ್ಕಾನ್ ಮಂದಿರಗಳ ಸಮೂಹವು ಭಗವದ್ಗೀತೆಯ 1 ಲಕ್ಷ ಪ್ರತಿ ವಿತರಿಸುವ ಗುರಿ ಹೊಂದಿದೆ.