Advertisement

ನಾಮಪತ್ರ ಸಲ್ಲಿಸಿದ ಸದಸ್ಯ ಚುನಾವಣೆ ಸಭೆಗೆ ಗೈರು !

02:33 PM Feb 07, 2021 | Team Udayavani |

ಬಾಗೇಪಲ್ಲಿ: ಸೋಲಿನ ಹತಾಶೆಗೆ ಗುರಿಯಾಗಿ ಪ್ರಮುಖ ರಾಜಕೀಯ ಪಕ್ಷಕ್ಕೆ ಸೇರಿರುವ ಒಂದೇ ಗುಂಪಿನ 11 ಗ್ರಾಪಂ ಸದಸ್ಯರು ಇಬ್ಭಾಗವಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಸಭೆಗೆ ಗೈರು ಆದ ಕಾರಣ ಸದಸ್ಯರ ಸಂಖ್ಯಾಬಲದ ಕೋರಂ ಕೊರತೆಯಿಂದ ಶನಿವಾರ ನಡೆಯಬೇಕಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಫೆ.11 ಕ್ಕೆ ಮುಂದೂಡಿರುವ ಘಟನೆ ತಿಮ್ಮಂಪಲ್ಲಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

Advertisement

ಇಬ್ಟಾಗ: ತಾಲೂಕಿನ ತಿಮ್ಮಂಪಲ್ಲಿ ಗ್ರಾಪಂನಲ್ಲಿ 21 ಸದಸ್ಯರ ಸಂಖ್ಯಾಬಲ ಹೊಂದಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲು ಬಂದಿದೆ. ಆಡಳಿತರೂಢ ರಾಜಕೀಯ ಪಕ್ಷದ ಬೆಂಬಲಿತರು 11 ಸದಸ್ಯರ ಸಂಖ್ಯಾಬಲ ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಪೈಪೋಟಿ ಏರ್ಪಟ್ಟು ಸದಸ್ಯರ ಗುಂಪು ಇಬ್ಭಾಗಗಳಾಗಿವೆ.

ಅಧ್ಯಕ್ಷ ಸ್ಥಾನ ಪ್ರತಿಷ್ಠೆ ತೆಗೆದುಕೊಂಡಿರುವ ಒಂದೇ ಪಕ್ಷದ ಎರಡು ಗುಂಪುಗಳು ಅಧ್ಯಕ್ಷ ಸ್ಥಾನದ ಗೊಂದಲ ಈಡೇರುವವರೆಗೂ ಚುನಾವಣೆಗೆ ಯಾರೂ ಸ್ಪರ್ಧಿಸುವುದು ಬೇಡ ಎಂದು ತೀರ್ಮಾನಿಸಿದರು. ಆದ್ದರಿಂದ ಶನಿವಾರ ನಡೆಯಬೇಕಾಗಿರುವ ಚುನಾವಣೆಯನ್ನು ಮುಂದೂಡಲಾಗಿದೆ. ಓರ್ವ ಸದಸ್ಯರ ಕೊರತೆ: ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್‌ ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದು, ಗ್ರಾಪಂನಲ್ಲಿ 21 ಸದಸ್ಯರ ಪೈಕಿ 10 ಜನ ಮಾತ್ರ ಹಾಜರಾಗಿ, ಉಳಿದ 11 ಸದಸ್ಯರು ಗೈರು ಆಗಿದ್ದಾರೆ.

ಚುನಾವಣೆ ನಡೆಸಲು ಶೇ.50 ಕ್ಕಿಂತ ಹೆಚ್ಚು ಸದಸ್ಯರು ಹಾಜರಾಗಬೇಕಾಗಿದ್ದು, ಒಬ್ಬ ಸದಸ್ಯನ ಕೋರಂ ಕೊರತೆಯಿಂದ ಚುನಾವಣೆ ಫೆ.11 ಕ್ಕೆ ಮುಂದೂಡಲಾಯಿತು ಎಂದು ತಹಶೀಲ್ದಾರ್‌ ಕೃಷ್ಣಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ :ತ್ಯಾಜ್ಯ ನಿರ್ವಹಣಾ ಘಟಕ ಪರಿಶೀಲನೆ

Advertisement

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ 5 ನಾಮಪತ್ರ ಸಲ್ಲಿಕೆ: ಬೆಳಗ್ಗೆ 9.30ಕ್ಕೆ ಅಧ್ಯಕ್ಷ ಸ್ಥಾನಕ್ಕೆ ಭಾರತಮ್ಮ ರಂಗಾರೆಡ್ಡಿ, ಅಮರಾವತಿ ನಂಜುಂಡಪ್ಪ, ಸುಕನ್ಯಾ ವೆಂಕಟರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಅಮರಾವತಿ ಚಿನ್ನಕೃಷ್ಣಪ್ಪ, ನರಸಿಂಹಮೂರ್ತಿ ನಾಮಪತ್ರ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಗ್ರಾಪಂ ಸದಸ್ಯ ನರಸಿಂಹಮೂರ್ತಿ 12 ಗಂಟೆಯಾದರೂ ಹಾಜರಾಗದ ಕಾರಣ ಚುನಾವಣೆ ಮುಂದೂಡಲಾಯಿತು.

ಪೊಲೀಸ್‌ ಬಂದೋಬಸ್ತ್: ಚುನಾವಣೆ ಮುಂದೂಡಿದ ನ್ನಲೆಯಲ್ಲಿ ಘಟನಾ ಸ್ಥಳದಲ್ಲಿ ಯಾವುದೇ ಅತಕರ ಘಟನೆಗಳು ನಡೆಯದಂತೆ ಚಿಕ್ಕಬಳ್ಳಾಪುರದ ಡಿವೈಎಸ್‌ಪಿ ರಶಂಕರ್‌ ಮತ್ತು ಪಿಎಸ್‌ಐ ಜಿ.ಕೆ. ಸುನಿಲ್‌ ಕುಮಾರ್‌ ಅವರ ನೇತೃತ್ವದಲ್ಲಿ ಪೋಲೀಸ್‌ ಬಂದೋ ಬಸ್ತ್ ಅಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next