ಉಡುಪಿ: ಕವಿ ಮುದ್ದಣ ಮಾರ್ಗದಲ್ಲಿಯ ಭಗವಾನ್ ಶ್ರೀ ನಿತ್ಯಾನಂದ ಮಂದಿರ ಮಠದ, ಪ್ರಥಮ ಮಹಡಿಯಲ್ಲಿ ಮುಂಬಯಿಯ ಉದ್ಯಮಿ ಕೆ. ಕೆ. ಆವರ್ಸೆಕರ್ ಅವರ ಕೊಡುಗೆಯ “ಧ್ಯಾನ ಮಂದಿರ” ಮತ್ತು “ಭೋಜನ ಶಾಲೆ” ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಪ್ರಯುಕ್ತ ಮಂದಿರ-ಮಠದ ಕಾರ್ಯಾಧ್ಯಕ್ಷ ಕೆ. ದಿವಾಕರ್ ಶೆಟ್ಟಿ ತೋಟದ ಮನೆಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ನಿತ್ಯಾನಂದ ಮಂದಿರದ ಅರ್ಚಕರಾದ ಪಂಡಿತಾಚಾರ್ಯ ವಿವೇಕಾನಂದ ಶಾಸ್ತ್ರೀ ಮಹಾರಾಜ್ ಹಾಗೂ ಅಮಿತ್ ಶುಕ್ಲಾ ಪೌರೋಹಿತ್ಯದಲ್ಲಿ ಪೂಜಾಕೈಂಕರ್ಯಗಳು ಸಂಪನ್ನಗೊಂಡವು.
ಕಾರ್ಯಕ್ರಮದಲ್ಲಿ ಮಂದಿರ-ಮಠದ ಟ್ರಸ್ಟೀಗಳಾದ ಪುರುಷೋತ್ತಮ ಪಿ. ಶೆಟ್ಟಿ, ಕೆ.ಮೋಹನಚಂದ್ರನ್ ನಂಬಿಯಾರ್, ಕೆ. ನಟರಾಜ್ ಹೆಗ್ಡೆ ಪಳ್ಳಿ, ಗೌತಮ್ ಅರವಡೆ ನಾಗಪುರ್, ಬಡಗುಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಎಂ.ಐ.ಟಿ ಮಾಜಿ ನಿರ್ದೇಶಕ ಪ್ರೋ ರಘುವೀರ್ ಪೈ, ಎಂ.ಎಂ ಪಡಿಯಾರ್, ಚೇತನ್ ನಾರ್ವೆಕರ್ ಮಣಿಪಾಲ, ಆಡಳಿತ ಮಂಡಳಿಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಬನ್ನಂಜೆ, ಪ್ರಧಾನ ಕಾರ್ಯದರ್ಶಿ ಈಶ್ವರ್ ಶೆಟ್ಟಿ ಚಿಟ್ಪಾಡಿ, ಸದಸ್ಯರಾದ ಜಯಕರ ಶೆಟ್ಟಿ ಅಂಬಲಪಾಡಿ, ಕರುಣಾಕರ ಶೆಟ್ಟಿ ಗುಂಡಿಬೈಲು, ಟಿ. ಎ. ರವಿರಾಜ್ ಕಾಡಬೆಟ್ಟು, ರಾಧಕೃಷ್ಣ ಮೆಂಡನ್ ಮಲ್ಪೆ, ಎಂ ಕೃಷ್ಣ ಆಳ್ವ ಉಡುಪಿ, ಹರೀಂದ್ರನಾಥ್ ಶೆಟ್ಟಿ ಕೊರಂಗ್ರಪಾಡಿ, ಮನೋಜ್ ಕುಮಾರ್ ಪೆರಂಪಳ್ಳಿ, ವಿಶ್ವನಾಥ ಸನಿಲ್ ಕಡೆಕಾರ್, ಮುರಳೀಧರ್ ಶೆಟ್ಟಿ ಕಡೆಕಾರ್, ವಿಜಯ ಸ್ವಾಮಿ, ಸುನಂದ, ಶಾರದ ಕೊಳದಪೇಟೆ ಹಾಗೂ ನಿತ್ಯಾನಂದ ಸೇವಾ ಸಮಿತಿಯ ರವೀಂದ್ರ ಪುತ್ರನ್ ಚಾತ್ರಬೆಟ್ಟು, ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ, ತಾರಾನಾಥ ಮೇಸ್ತ ಶಿರೂರು, ಶಾಲಿನಿ ವರದರಾಜ ಶೆಣೈ ಅಂಬಲಪಾಡಿ, ಕಿರಣ್ ಉಪ್ಪೂರು, ವನಿತಾ ಸುಧಾಕರ್ ಶೆಟ್ಟಿ ಅಂಬಲಪಾಡಿ, ರಾಮಚಂದ್ರ ಬೀಜಾಡಿ, ಶೇಷಪ್ಪ ಕೋಟ್ಯಾನ್ ದೊಡ್ಡಣಗುಡ್ಡೆ, ಮೊದಲಾದವರು ಉಪಸ್ಥಿತರಿದ್ದರು.