Advertisement

ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಕ್ರಮ ಖಂಡನೀಯ: ಸಚಿವ ಅರವಿಂದ ಲಿಂಬಾವಳಿ

06:53 PM Feb 04, 2021 | Team Udayavani |

ಬೆಂಗಳೂರು: ಹಿರಿಯ ಸಾಹಿತಿ ಕೆ.ಎಸ್ ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಘಟನೆ ಖಂಡನೀಯ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

Advertisement

ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಕೋರ್ಟ್ ಆವರಣದಲ್ಲಿಯೇ ವಕೀಲೆಯೊಬ್ಬರು ಭಗವಾನ್ ಅವರ ಮುಖಕ್ಕೆ ಮಸಿ ಬಳಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು,  ಇದು ದುರಾದೃಷ್ಟಕರ ಘಟನೆ, ತಾತ್ವಿಕ ಭಿನ್ನಾಭಿಪ್ರಾಯಗಳು ದೈಹಿಕ ಹಲ್ಲೆ, ದೈಹಿಕ ಹಿಂಸೆ ರೂಪ ತಾಳಬಾರದು. ಇಂತಹ ಕೃತ್ಯಗಳನ್ನು ನಾನು ಖಂಡಿಸುತ್ತೇನೆ. ಮಸಿ ಬಳಿಯವುದು ಕನ್ನಡದ ಸಂಸ್ಕೃತಿ ಅಲ್ಲಎಂದು ಹೇಳಿದರು.

ಇದನ್ನೂ ಓದಿ:   ಬಾಲಿವುಡ್ ನಟಿ ಕಂಗನಾ ಟ್ವೀಟ್ ಗಳನ್ನು ಅಳಿಸಿಹಾಕಿದ ಟ್ವಿಟ್ಟರ್ !

ಘಟನೆಯ ಹಿನ್ನೆಲೆ;

ಪ್ರಕರಣವೊಂದರ ವಿಚಾರಣೆಗೆಂದು ಭಗವಾನ್ ಅವರು ಇಂದು ನಗರದ ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಆಗಮಿಸಿದ್ದರು. ವಿಚಾರಣೆ ಬಳಿಕ ಹೊರಬಂದಾಗ ವಕೀಲೆ ಮೀರಾ ರಾಘವೇಂದ್ರ ಅವರು ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿದ್ದಾರೆ. ಸದ್ಯ ಘಟನೆಯ ಕುರಿತು ಸಾಹಿತಿ ಭಗವಾನ್ ಅವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

Advertisement

ಇದನ್ನೂ ಓದಿ:   ಭಾರತ ಆಯ್ತು, ಇರಾನ್ ನಿಂದ ಪಾಕ್ ಮೇಲೆ ಸರ್ಜಿಕಲ್ ದಾಳಿ, ಇಬ್ಬರು ಯೋಧರ ರಕ್ಷಣೆ!

Advertisement

Udayavani is now on Telegram. Click here to join our channel and stay updated with the latest news.

Next