Advertisement

20ರಂದು ಕಾರ್ಯಕರ್ತರಿಗೆ ಅಭ್ಯಾಸವರ್ಗ: ಸ್ವರ್ಣವಲ್ಲೀ ಸ್ವಾಮೀಜಿ

04:31 PM Jun 04, 2018 | |

ಹುಬ್ಬಳ್ಳಿ: ಶ್ರೀ ಭಗವದ್ಗೀತಾ ಅಭಿಯಾನದಂಗವಾಗಿ ಕಾರ್ಯಕರ್ತರಿಗೆ ಅಭ್ಯಾಸ ವರ್ಗವನ್ನು ಜೂ.20ರಂದು ಬೆಳಿಗ್ಗೆ 11:00 ಗಂಟೆಗೆ ನಗರದ ಹವ್ಯಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಧಾರವಾಡ ಜಿಲ್ಲೆಯಲ್ಲಿ ಡಿಸೆಂಬರ್‌ 19ರಂದು ಆಯೋಜಿಸಲು ಉದ್ದೇಶಿಸಿರುವ ಭಗವದ್ಗೀತಾ ಅಭಿಯಾನದಂಗವಾಗಿ ಇಲ್ಲಿನ ಗೋಕುಲ ರಸ್ತೆ ಲೂತಿಮಠ ಬಡಾವಣೆಯ ಹವ್ಯಕ ಭವನದಲ್ಲಿ ರವಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾತನಾಡಿದರು.

Advertisement

ಅಭಿಯಾನದಂಗವಾಗಿ ಶ್ಲೋಕ ಹೇಳುವವರು, ಉಪನ್ಯಾಸಕರಿಗೂ ತರಬೇತಿ ನೀಡಲಾಗುವುದು. ಶ್ಲೋಕ ಹೇಳಿಕೊಡುವ ಸ್ಥಳಗಳನ್ನು ಶ್ಲೋಕಾ ಕೇಂದ್ರ, ಉಪನ್ಯಾಸ ನಡೆಯುವ ಸ್ಥಳ ಉಪನ್ಯಾಸ ಕೇಂದ್ರವೆಂದು ಗುರುತಿಸಲಾಗುವುದು. ಪ್ರಾಥಮಿಕ, ಪ್ರೌಢಶಾಲೆ, ಮಹಾವಿದ್ಯಾಲಯ, ವಿಶ್ವವಿದ್ಯಾಲಯ, ದೇವಸ್ಥಾನ ಸೇರಿದಂತೆ ಇನ್ನಿತರೆಡೆ ಅಭಿಯಾನ ಆರಂಭಿಸಬಹುದು. ಜುಲೈ 1ರಿಂದ ಆಯಾ ಜಿಲ್ಲೆಗಳಲ್ಲಿ ಅಭಿಯಾನ ಪ್ರಾರಂಭವಾಗಿ ಡಿಸೆಂಬರ್‌ 19ರಂದು ಮುಕ್ತಾಯಗೊಳ್ಳಲಿದೆ ಎಂದರು.

ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸ್ಪರ್ಧೆ ಏರ್ಪಡಿಸಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 8ನೇ ಅಧ್ಯಾಯ ಕಂಠಪಾಠ ಮಾಡಿಸಬೇಕು. ಕಂಠಪಾಠ ಮಾಡಿಸುವ ಶಿಕ್ಷಕರ ಆಯ್ಕೆಯನ್ನು ತಾಲೂಕು ಸಂಚಾಲಕರು ಹಾಗೂ ಶ್ಲೋಕ ಕೇಂದ್ರಗಳ ಸಂಚಾಲಕರು
ಮಾಡಬೇಕು. ಕಂಠಪಾಠದ ಶಿಕ್ಷಕರು ಸ್ಥಳೀಯರಾಗಿದ್ದರೆ ಒಳ್ಳೆಯದು. ಭಗವದ್ಗೀತೆಯ ಸ್ಥೂಲ ಪರಿಚಯಾತ್ಮಕ, 18 ಅಧ್ಯಾಯಗಳ ಸಮಗ್ರ ವಿಷಯಗಳ ಗೀತಾ ಸಪ್ತಾಹ ಸೇರಿ ಮೂರು ಹಂತದ ಉಪನ್ಯಾಸ ಗುರುತಿಸಲಾಗಿದೆ. ಶೀಘ್ರವೇ ತಾಲೂಕು ಸಮಿತಿ ರಚಿಸಿ ಅಭ್ಯಾಸ ವರ್ಗ ಆರಂಭಿಸಬೇಕು
ಎಂದರು.

ಸಮಾಜದ ಮುಖಂಡರಾದ ಎ.ಸಿ. ಗೋಪಾಲ, ಎಂ.ಬಿ. ನಾತು, ಜಯತೀರ್ಥ ಕಟ್ಟಿ, ಪಿ.ಎಸ್‌. ಪರ್ವತಿ, ಜಿತೇಂದ್ರ ಮಜೇಥಿಯಾ, ಸುಭಾಷಸಿಂಗ್‌ ಜಮಾದಾರ, ವೀಣಾ ಹೆಗಡೆ ಸೇರಿದಂತೆ ವಿವಿಧ ತಾಲೂಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮಹಿಳಾ ಮಂಡಳಗಳ ಪ್ರಮುಖರು
ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next