Advertisement

ಭಗತ್‌-ಸುಖದೇವ ದೇಶಪ್ರೇಮ ಆದರ್ಶ

05:32 PM Mar 24, 2022 | Team Udayavani |

ಬಾಗಲಕೋಟೆ: ಅಪ್ಪಟ ದೇಶಪ್ರೇಮಿಗಳಾದ ಭಗತಸಿಂಗ್‌, ಶಿವರಾಮ, ರಾಜಗುರು, ಸುಖದೇವರ ಅವರ ತ್ಯಾಗ-ಬಲಿದಾನ ಹಾಗೂ ದೇಶಪ್ರೇಮ, ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು. ಅಂತವರು ನಮಗೆಲ್ಲ ಆದರ್ಶವಾಗಿದ್ದಾರೆ ಎಂದು ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ಹೇಳಿದರು.

Advertisement

ನಗರದ ಬ.ವಿ.ವ ಸಂಘದ ಸಜ್ಜಲಶ್ರೀ ನರ್ಸಿಂಗ್‌ ವಿಜ್ಞಾನ ಕಾಲೇಜಿನ ಎನ್ನೆಸ್ಸೆಸ್‌ ಘಟಕದಿಂದ ಶಹೀದ್‌ ದಿವಸದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಭಗತ್‌ಸಿಂಗ್‌, ಶಿವರಾಮ್‌ ರಾಜಗುರು ಹಾಗೂ ಸುಖದೇವ ಅವರ ತ್ಯಾಗ ಬಲಿದಾನ ಕೊಂಡಾಡಿದರು. ಇಂದಿನ ಯುವಕರು ಸಹ ದೇಶಪ್ರೇಮದ ಕಿಚ್ಚನ್ನು ಹೃದಯದಲ್ಲಿ ಹೊತ್ತಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ಡಾ|ದಿಲೀಪ್‌ ಎಸ್‌. ನಾಟೇಕರ್‌ ಸ್ವಾಗತಿಸಿದರು. ಎಸ್‌. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ| ಎಸ್‌.ಎಸ್‌. ಹಿರೇಮಠ ಅವರು ರಕ್ತದಾನದ ಮಹತ್ವ ವಿವರಿಸಿದರು. ಹಾನಗಲ್‌ ಶ್ರೀ ಕುಮಾರೇಶ್ವರ ಆಸ್ಪತ್ರೆಯ ರಕ್ತ ಭಂಡಾರದ ವೈದ್ಯಾಧಿ ಕಾರಿ ಡಾ|ಕೇಶವ ಕುಲಕರ್ಣಿ, ರಕ್ತದಾನದ ಮಹತ್ವ ಹಾಗೂ ಅದರ ಕುರಿತಾದ ಅನೇಕ ತಪ್ಪು ತಿಳಿವಳಿಕೆಗಳ ಬಗ್ಗೆ ವಿವರಣೆ ನೀಡಿದರು.

ರೇಣುಕರಾಜ ನಾಗಮ್ಮನವರ ನಿರೂಪಿಸಿದರು. ಕಾಲೇಜಿನ ಎನ್ನೆಸ್ಸೆಸ್‌ ಘಟಕದ ಸಂಯೋಜನಾಧಿಕಾರಿ ಡಾ| ಯು.ಎನ್‌. ದಂಧರಗಿ ವಂದಿಸಿದರು. ಡಾ| ಯರನಾಳ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next