Advertisement
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ಕೈಬಿಟ್ಟಿದೆ ಎಂಬುದು ವಿವಾದಕ್ಕೆ ಕಾರಣ
Related Articles
Advertisement
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಭಗತ್‌ಸಿಂಗ್ ಕುರಿತ ಪಾಠವನ್ನು ಪಠ್ಯದಿಂದ ತೆಗೆಯಲು ನಿರ್ಧರಿಸಿರುವುದು ದೇಶವಿರೋಧಿ ಕ್ರಮವಾಗಿದೆ. ಇಂದು ಭಗತ್‌ಸಿಂಗ್ ಪಾಠ ತೆಗೆದಿರುವವರು ಮುಂದಿನ ದಿನಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಪಾಠವನ್ನು ತೆಗೆದು ಹಾಕಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಗತ್‌ಸಿಂಗ್ ಕುರಿತ ಪಾಠವೇನಿತ್ತು?1919ರ ಎಪ್ರಿಲ್ 13ರಂದು ಜಲಿಯನ್ ವಾಲಾಬಾಗ್‌ನ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡವರಿಗೆ ಭಗತ್ ಸಿಂಗ್ ಸಲ್ಲಿಸಿರುವ ನಮನ ಕುರಿತು ಪಾಠದಲ್ಲಿ ಉಲ್ಲೇಖಿಸಲಾಗಿತ್ತು. 12 ವರ್ಷದ ಬಾಲಕ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಮೂಕನಂತೆ ಅತ್ತಿಂದಿತ್ತ ಓಡಾಡುತ್ತಿದ್ದ. ಶಾಲೆಗೆ ಹೋಗಬೇಕಾಗಿದ್ದ ಆ ಬಾಲಕ ಅಂದು ತನ್ನ ಹಳ್ಳಿಯಿಂದ ರೈಲಿನಲ್ಲಿ ಅಮೃತಸರಕ್ಕೆ ಬಂದಿಳಿದಿದ್ದ. ಅವನ ಕೈಚೀಲದಲ್ಲಿ ಒಂದೆರಡು ಪುಸ್ತಕಗಳು ಹಾಗೂ ಒಂದು ಪುಟ್ಟ ಡಬ್ಬಿ ಇತ್ತು. ಅಮೃತಸರದ ಮಣ್ಣನ್ನು ಹಣೆಗಿಟ್ಟುಕೊಂಡ, ಮತ್ತಷ್ಟು ಮಣ್ಣನ್ನು ತನ್ನ ಡಬ್ಬಿಯಲ್ಲಿ ತುಂಬಿಕೊಂಡು ಮನೆಗೆ ಹಿಂದಿರುಗಿದ. ಮನೆಯಲ್ಲಿ ಆತನ ಸಹೋದರಿ ಊಟ ಮಾಡುವಂತೆ ಒತ್ತಾಯಿಸಿದಾಗ ಊಟವನ್ನು ನಿರಾಕರಿಸಿದ. ಅವನಿಗೆ ಪ್ರಿಯವಾದ ಮಾವಿನ ಹಣ್ಣನ್ನು ಕೂಡ ನಿರಾಕರಿಸಿದ. ಕೊನೆಗೆ ತನ್ನ ಸಹೋದರಿಯನ್ನು ಮನೆಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಡಬ್ಬಿಯಲ್ಲಿದ್ದ ಆ ಮಣ್ಣನ್ನು ತೋರಿಸಿದ. ರಕ್ತದಲ್ಲಿ ಕಲೆಸಿದಂತಿದ್ದ ಆ ಮಣ್ಣನ್ನು “ತ್ಯಾಗದ ಪ್ರತೀಕ’ವೆಂದು ತಿಳಿಸಿ ಒತ್ತಿ ಹೇಳಿದ್ದ ಎಂಬ ಪಾಠವನ್ನು ಜಿ. ರಾಮಕೃಷ್ಣ ರಚಿಸಿದ್ದರು. ಹೆಡ್ಗೆವಾರ್ ಕುರಿತ ವಿಚಾರವೇನಿದೆ?
“ನಿಮ್ಮ ಆದರ್ಶ ವ್ಯಕ್ತಿ ಯಾರು?’ ಎಂಬ ಪ್ರಶ್ನೆ ಕೇಳಿದಾಗ ಜನರು ಬಗೆಬಗೆಯ ಉತ್ತರಗಳನ್ನು ನೀಡುತ್ತಾರೆ. ಕೆಲವರಿಗೆ ಸ್ವಾತಂತ್ರ್ಯ ಹೋರಾಟಗಾರರು, ಮತ್ತೆ ಕೆಲವರಿಗೆ ತಮ್ಮ ಊರು ಅಥವಾ ರಾಜ್ಯದ ಮಹಾನ್ ವ್ಯಕ್ತಿಗಳು, ಐತಿಹಾಸಿಕ ವ್ಯಕ್ತಿಗಳು ಆದರ್ಶವಾಗಬಹುದು. ಕೆಲವರು ತಮ್ಮ ಹಿರಿಯರು, ತಂದೆ-ತಾಯಿ, ಕುಟುಂಬ ಸದಸ್ಯರನ್ನು ಆದರ್ಶವೆಂದು ಪರಿಗಣಿಸಬಹುದು. ಆದರೆ ವ್ಯಕ್ತಿಯ ಹೊರತಾಗಿ ತಣ್ತೀವನ್ನು ಆದರ್ಶವೆಂದು ಪರಿಗಣಿಸುವವರು ವಿರಳ. ವ್ಯಕ್ತಿಗಳನ್ನು ಆದರ್ಶವಾಗಿ ಪರಿಗಣಿಸಿದಾಗ, ನಿಷ್ಕಳಂಕ ವ್ಯಕ್ತಿ ಸಿಗುವುದು ಕಷ್ಟ. ಆದರೆ ವ್ಯಕ್ತಿಯ ಬದಲಾಗಿ ಎಂದೂ ಬದಲಾಗದ ತಣ್ತೀಗಳನ್ನು ಶಾಶ್ವತ ಮೌಲ್ಯಗಳನ್ನು ಆದರ್ಶವಾಗಿರಿಸಿಕೊಳ್ಳುವುದು ಉತ್ತಮ ಎಂದು ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡ್ಗೆವಾರರು ಹೇಳಿರುವ ಭಾಷಣವನ್ನು ಪಠ್ಯದಲ್ಲಿ ನೀಡಲಾಗಿದೆ. ಹೆಡೆYವಾರರ ಹುಟ್ಟು, ಸ್ವಾತಂತ್ರ್ಯ ಹೋರಾಟ, ಜೈಲುವಾಸ, ಜಂಗಲ್ ಸತ್ಯಾಗ್ರಹ ಹಾಗೂ ಆರೆಸ್ಸೆಸ್ ಸಂಸ್ಥೆ ಸ್ಥಾಪಿಸಿದ ವಿವರಗಳನ್ನೂ ನೀಡಲಾಗಿದೆ. ಪಠ್ಯಪುಸ್ತಕ ಸಂಘದ ಸ್ಪಷ್ಟನೆ
10ನೇ ತರಗತಿ ಪಠ್ಯದಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಪಾಠವನ್ನು ಕೈಬಿಟ್ಟಿಲ್ಲ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘವು ಸ್ಪಷ್ಟನೆ ನೀಡಿದೆ. ಸದ್ಯ ಪರಿಷ್ಕರಿಸಿರುವ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕವು ಪ್ರಸ್ತುತ ಮುದ್ರಣ ಹಂತದಲ್ಲಿದೆ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಪ್ರಕಟನೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.