ಬಿಹಾರ: ಔಷಧಿ ತರಲೆಂದು ಮೆಡಿಕಲ್ ಶಾಫ್ ಗೆ ತೆರಳಿದ ವ್ಯಕ್ತಿಯೋರ್ವ ಅಂಗಡಿಯೆದುರೇ ಕುಸಿದು ಬಿದ್ದ ಘಟನೆ ಭಾಘಲಾಪುರ ಬಳಿ ನಡೆದಿದೆ. ದುರಂತವೆಂದರೇ ಕೋವಿಡ್ ಭೀತಿಯಿಂದ ಯಾರೋಬ್ಬರೂ ಆತನ ಸಹಾಯಕ್ಕೆ ಮುಂದಾಗಿಲ್ಲ. ಅಧಿಕಾರಿಗಳು ಕೂಡ 6 ಗಂಟೆಯ ನಂತರ ಬಂದಿದ್ದು, ಆದರೇ ಅದಾಗಲೇ ವ್ಯಕ್ತಿ ಮೃತಪಟ್ಟಿದ್ದ ಎಂದು ವರದಿಯಾಗಿದೆ.
ಅಸ್ತಮಾಕ್ಕೆಂದು ಔಷಧಿ ಖರೀದಿಸಲು ವ್ಯಕ್ತಿ ಬಂದಿದ್ದು, ತದನಂತರದಲ್ಲಿ ಅಂಗಡಿಯೆದುರೇ ಕುಸಿದು ಬಿದ್ದಿದ್ದಾರೆ. ಕೋವಿಡ್-19 ಭೀತಿಯಿಂದ ಯಾರೋಬ್ಬರೂ ಸಹಾಯಕ್ಕೆ ಬರಲಿಲ್ಲವಾಗಿದ್ದು, ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಸರ್ಕಾರ ಕೈಚೆಲ್ಲಿ ಕುಳಿತಿದ್ದು, ಅಧಿಕಾರಿಗಳು ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮೃತದೇಹ 5ರಿಂದ 6ಗಂಟೆ ಸ್ಥಳದಲ್ಲಿದ್ದು, ಆ್ಯಂಬುಲೆನ್ಸ್, ಪೊಲೀಸರು ಬಂದರೂ ಕೂಡ ಯಾವುದೇ ಕ್ರಮ ತೆಗೆದುಕೊಳ್ಳದೆ ಹಿಂದಿರುಗಿದ್ದಾರೆ. ಇದೊಂದು ಹಾಸ್ಯಸ್ಪದ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಔಷಧಿ ಅಂಗಡಿಯ ವ್ಯಕ್ತಿಯೊಬ್ಬರು “ಕೋವಿಡ್ ತುರ್ತು ಸಹಾಯವಾಣಿಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮಾತ್ರವಲ್ಲದೆ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಆದರೇ 6 ಗಂಟೆ ನಂತರ ನಗರಸಭೆ ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಿ ಬಂದು ಮೃತದೇಹ ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ.
ಬಿಹಾರದಲ್ಲಿ 20,000ಕ್ಕಿಂತ ಹೆಚ್ಚು ಕೋವಿಡ್ ಸೋಂಕಿತರಿದ್ದು, ಭಾಘಲಾಪುರದಲ್ಲಿ 1,000 ಜನರು ವೈರಾಣುವಿಗೆ ಭಾಧಿತರಾಗಿದ್ದಾರೆ.