ಶಿವಮೊಗ್ಗ: ಭದ್ರಾ ಡ್ಯಾಂ ನ ರಿವರ್ ಸ್ಲೀವ್ಸ್ ಗೇಟ್ ನಿಂದ ಸೋರಿಕೆಯಾಗುತ್ತಿದ್ದ ನೀರನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ.
ಕಳೆದ ಐದು ದಿನಗಳಿಂದ 2500 ಕ್ಯೂಸೆಕ್ಸ್ ಗೂ ಅಧಿಕ ನೀರು ಸೋರಿಕೆಯಾಗುತ್ತಿತ್ತು. ಭದ್ರಾ ನದಿಗೆ ಅನಾಯಾಸವಾಗಿ ನೀರು ಪೋಲಾಗುತ್ತಿತ್ತು. ಮಳೆಗಾಲದಲ್ಲಿ ಸ್ಲೀವ್ಸ್ ಗೇಟ್ ರಿಪೇರಿ ಮಾಡುವಾಗ ಎಡವಟ್ಟಾಗಿತ್ತು. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಅತಂಕಗೊಂಡಿದ್ದರು.
ಕಾಡಾ ಅಧ್ಯಕ್ಷರ ನೇತೃತ್ವದಲ್ಲಿ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ಸ್ಲೀವ್ಸ್ ಗೇಟ್ ನಿಂದ ಶೇಕಡಾ 50 ರಷ್ಟು ನೀರು ನದಿಗೆ ಸೋರಿಕೆಯಾಗುತ್ತಿತ್ತು. ಕಳೆದ 48 ಗಂಟೆಗಳ ಹಗಲು ರಾತ್ರಿ ನಿರಂತರ ಕಾರ್ಯಾಚರಣೆ ನಡೆಸಲಾಗಿದೆ.
ಅಧಿಕಾರಿಗಳು ಹಾಗು ಹೊರ ಗುತ್ತಿಗೆ ನೌಕರರು ಸ್ಲೀವ್ಸ್ ಗೇಟ್ ನಿಂದ ಸೋರಿಕೆಯಾಗುತ್ತಿದ್ದ ನೀರನ್ನು ಸಂಪೂರ್ಣ ಸ್ಥಗಿತಗೊಳಿದ್ದಾರೆ. ಸ್ಲೀವ್ಸ್ ಗೇಟ್ ಕ್ಲೋಸ್ ಆಗದೆ ಹೋಗಿದ್ದಲ್ಲಿ ಭದ್ರಾ ಡ್ಯಾಂ ಈ ಬಾರಿ ತುಂಬಲು ಸಾದ್ಯವಾಗುತ್ತಿರಲಿಲ್ಲ. ಗುತ್ತಿಗೆದಾರ ವೇದಮೂರ್ತಿ ಅನುಭವಿ ತಂಡದಿಂದ ಸ್ಲೀವ್ಸ್ ಗೇಟ್ ಕ್ಲೋಸ್ ಮಾಡಲಾಗಿದೆ.
ಅಮಾನತ್ತುಗೊಳ್ಳುವ ಭೀತಿಯಲ್ಲಿದ್ದ ಡ್ಯಾಂ ಅಧಿಕಾರಿಗಳ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.