Advertisement
ಬಾಬುಲ್ ಸುಪ್ರಿಯೋ ಅವರ ಕಾನೂನು ಸಲಹೆಗಾರರಾಗಿದ್ದ ನ್ಯಾಯವಾದಿ ಪ್ರಿಯಾಂಕಾ ಟಿಬ್ರೆವಾಲ್, ಸಿಎಂ ಮಮತಾ ಬ್ಯಾನರ್ಜಿ ಅವರ ವಿರುದ್ಧ ಸ್ಥಾನಕ್ಕೆ ಸವಾಲು ಹಾಕುವ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಿಯಾಂಕ ಈ ಹಿಂದೆ ಕೋಲ್ಕತಾ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ 2015 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಆದರೇ, ತೃಣಮೂಲ ಕಾಂಗ್ರೆಸ್ ನ ಸ್ವಪನ್ ಸಮ್ಮದರ್ ವಿರುದ್ಧ ಸೋತಿದ್ದರು. ಆದರೇ, ಬಿಜೆಪಿ ಈಗ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ದೀದಿ ವಿರುದ್ಧ ಉಪ ಚುನಾವಣೆಯಲ್ಲಿ ಕಣಕ್ಕಿಳಸುವುದಕ್ಕೆ ಮುಂದಾಗಿದೆ.
Related Articles
Advertisement
ವೃತ್ತಿಯಲ್ಲಿ ವಕಿಲೆಯಾಗಿರುವ ಪ್ರಿಯಾಂಕ, 2014 ರಲ್ಲಿ ಪಶ್ಚಿಮ ಬಂಗಾಳದ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ. ಪಕ್ಷದಲ್ಲಿ ಹಲವು ಜವಾಬ್ದಾರಿಯನ್ನು ನಿಭಾಯಿಸಿ ಸೈ ಎನ್ನಿಸಿಕೊಂಡ ಪ್ರಿಯಾಂಕಾ ಗೆ ಬಿಜೆಪಿ, ಯುವ ಮೋರ್ಚಾ ದ ಅಧ್ಯಕ್ಷ ಗಿರಿಯನ್ನು ಸ್ಥಾನ ಮಾಡುತ್ತದೆ. 2021, ಅವರು ಎಂಟಲ್ಲಿಯಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ ಟಿಎಂಸಿಯ ಸ್ವರ್ಣ ಕಮಲ್ ಸಾಹಾ ವಿರುದ್ಧ 58,257 ಮತಗಳ ಅಂತರದಿಂದ ಸೋತಿದ್ದರು.
ಇನ್ನು, ಈ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷ ನನ್ನನ್ನು ಈ ಕುರಿತಾಗಿ ಸಂಪರ್ಕಿಸಿದೆ ಹಾಗೂ ನನ್ನ ಅಭಿಪ್ರಾಯವನ್ನು ಕೇಳಿದೆ. ಭವಾನಿಪುರದಿಂದ ಸ್ಪರ್ಧೆಗೆ ಕಣಕ್ಕೆ ಯಾರನ್ನು ಇಳಿಸುವುದು ಎನ್ನುವುದರ ಬಗ್ಗೆ ಇನ್ನೂ ಪಕ್ಷದೊಳಗೆ ಚರ್ಚೆಯಾಗುತ್ತಿದೆ. ಆ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಹೆಸರೂ ಕೂಡ ಇದೆ. ನಾನೂ ನನ್ನ ಪಕ್ಷದ ಹಿರಿಯ ಮುಖಂಡರಿಗೆ ಕೃತಜ್ಞನಾಗಿರುತ್ತೇನೆ. ನನ್ನ ಮೇಲೆ ಪಕ್ಷ ಇಟ್ಟುಕೊಂಡಿರುವ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.
ಒಂದು ವೇಳೆ ಭವಾನಿಪುರ ವಿಧಾನ ಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧೆಗೆ ನನ್ನನ್ನು ಕಣಕ್ಕಿಳಿಸಿದರೇ, ನಾನು ಪಕ್ಷಕ್ಕಾಗಿ ನನ್ನ ಸರ್ವ ಪ್ರಯತ್ನವನ್ನು ಮಾಡುತ್ತೇನೆ. ಪಕ್ಷದ ಬೆಂಬಲ ಇದ್ದೇ ಇದೆ. ಜನರು ಕೂಡ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಏತನ್ಮಧ್ಯೆ, ಕಾಂಗ್ರಸ್ ಪಕ್ಷ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದು, ಚುನಾವಣೆ ಲೆಕ್ಕಾಚಾರ ಆರಂಭವಾಗಿದೆ.
ಸಪ್ಟೆಂಬರ್ 30 ರಂದು ಉಪ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣೆ ಆಯೋಗ ಇತ್ತೀಚೆಗೆ ತಿಳಿಸಿತ್ತು.
ಇದನ್ನೂ ಓದಿ : ವೈರಲ್ ವೀಡಿಯೋ : ಚಿನ್ನದ ಹುಡುಗ ನೀರಜ್ ಗೆ ಅಡುಗೆ ಮಾಡಿ ಬಡಿಸಿದ ಸಿಎಂ ಅಮರಿಂದರ್ ಸಿಂಗ್.!