Advertisement

BGT; ಪರ್ತ್‌ ಪಂದ್ಯಕ್ಕೆ ರೋಹಿತ್‌ ಅಲಭ್ಯ: ಯಾರು ಕ್ಯಾಪ್ಟನ್?‌ ಯಾರು ಓಪನರ್?: ಕೋಚ್ ಉತ್ತರ

12:57 PM Nov 11, 2024 | Team Udayavani |

ಮುಂಬೈ: ಭಾರತ ಪುರುಷರ ಕ್ರಿಕೆಟ್ ತಂಡವು ಇನ್ನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಆಸೀಸ್‌ ನೆಲದಲ್ಲಿ ಎದುರಿಸಲಿದೆ.‌ ನವೆಂಬರ್‌ 20ರಿಂದ ಪರ್ತ್‌ ನಲ್ಲಿ ಬಹುನಿರೀಕ್ಷಿತ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್‌ ಸರಣಿ ಆರಂಭವಾಗಲಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯವು ಪರ್ತ್‌ ನಲ್ಲಿ ನಡೆಯಲಿದೆ.

Advertisement

ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅವರು ಮೊದಲ ಮುಖಾಮುಖಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಅವರು 2ನೇ ಪಂದ್ಯದಿಂದ ತಂಡವನ್ನು ಕೂಡಿಕೊಳ್ಳಲಿದ್ದಾರೆಂದು ಮೂಲಗಳು ಹೇಳಿವೆ. ರೋಹಿತ್‌ -ರಿತಿಕಾ ಸಜ್ದೇ ದಂಪತಿ ನವೆಂಬರ್‌ 3ನೇ ವಾರದಲ್ಲಿ 2ನೇ ಮಗು ಜನಿಸುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಆದ್ದರಿಂದ ಪರ್ತ್‌ ನಲ್ಲಿ ನ.22ರಿಂದ ಆರಂಭವಾಗುವ 1ನೇ ಟೆಸ್ಟ್‌ನಲ್ಲಿ ಅವರು ಆಡುವುದಿಲ್ಲ. 2ನೇ ಟೆಸ್ಟ್‌ ವೇಳೆಗೆ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆಂದು ಹೇಳಲಾಗಿದೆ.

ಈ ಬಗ್ಗೆ ಸೋಮವಾರ (ನ.11) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಚ್‌ ಗೌತಮ್‌ ಗಂಭೀರ್‌ ಅವರು ರೋಹಿತ್‌ ಅಲಭ್ಯತೆಯ ಬಗ್ಗೆ ಸ್ಪಷ್ಟತೆ ನೀಡಿಲ್ಲ. “ಒಂದು ವೇಳೆ ಮೊದಲ ಪಂದ್ಯದಲ್ಲಿ ರೋಹಿತ್‌ ಶರ್ಮಾ ಆಡದಿದ್ದರೆ ಈಗ ಉಪ ನಾಯಕರಾಗಿ ಇರುವ ಜಸ್ಪ್ರೀತ್‌ ಬುಮ್ರಾ ಅವರು ತಂಡವನ್ನು ಮುನ್ನಡೆಸಲಿದ್ದಾರೆ” ಎಂದಿದ್ದಾರೆ.

“ಈ ಸಮಯದಲ್ಲಿ, ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಅವರು ಲಭ್ಯವಾಗಲಿದ್ದಾರೆ ಎಂದು ಭಾವಿಸುತ್ತೇವೆ, ಆದರೆ ಸರಣಿಯ ಆರಂಭದಲ್ಲಿ ನಾವು ಎಲ್ಲವನ್ನೂ ತಿಳಿದುಕೊಳ್ಳಲಿದ್ದೇವೆ” ಎಂದು ಗಂಭೀರ್ ಹೇಳಿದರು.

Advertisement

ಒಂದು ವೇಳೆ ರೋಹಿತ್‌ ಅಲಭ್ಯರಾದರೆ ಮೊದಲ ಪಂದ್ಯದಲ್ಲಿ ಯಾರು ಆರಂಭಿಕರಾಗಿ ಆಡಲಿದ್ದಾರೆ ಎನ್ನುವ ಬಗ್ಗೆಯೂ ಖಚಿತತೆ ಸಿಕ್ಕಿಲ್ಲ. “ನಿಸ್ಸಂಶಯವಾಗಿ ಅಭಿಮನ್ಯು ಈಶ್ವರನ್ ಮತ್ತು ಕೆಎಲ್ ರಾಹುಲ್ ಇದ್ದಾರೆ. ಆದ್ದರಿಂದ ರೋಹಿತ್ ಲಭ್ಯವಿಲ್ಲದಿದ್ದರೆ ನಾವು ಮೊದಲ ಟೆಸ್ಟ್ ಪಂದ್ಯದ ಸಮಯದಲ್ಲಿ ನಿರ್ಧಾರ ಮಾಡುತ್ತೇವೆ” ಎಂದು ಗಂಭೀರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next